ಸೂರ್ಯನ ಈ ಅದ್ಭುತ ಫೋಟೋಗಾಗಿ 1.7 ಮಿಲಿಯನ್ ಕ್ಲಿಕ್ ಮಾಡಿದ ಅಸ್ಟ್ರೋಗ್ರಾಫರ್, ಇಲ್ಲಿದೆ ಫೋಟೋಸ್

Published : May 15, 2026, 01:14 PM IST

ಸೂರ್ಯನ ಒಂದು ಅದ್ಭುತ ಫೋಟೋಗಾಗಿ ಆ್ಯಸ್ಟ್ರೋ ಫೋಟೋಗ್ರಾಫರ್ ಬರೋಬ್ಬರಿ 1.7 ಮಿಲಿಯನ್ ಫೋಟೋ ತೆಗೆದಿದ್ದಾರೆ. ಸತತ ಒಂದು ವಾರ ಫೋಟೋ ಕ್ಲಿಕ್ ಮಾಡಿ ಜಗತ್ತೇ ಚಕಿತಗೊಳಿಸುವ ಫೋಟೋ, ವಿಡಿಯೋ ತೆಗೆದಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿದೆ.

PREV
15
ಜಗತ್ತೆ ಅಚ್ಚರಿಗೊಂಡ ಫೋಟೋ

ಖಗೋಳ, ಸೂರ್ಯ, ಚಂದ್ರ ಸೇರಿದಂತೆ ಗ್ರಹಗಳು, ನಕ್ಷತ್ರಗಳ ಕುತೂಹಲ ತಿಳಿದಷ್ಟು ಹೆಚ್ಚಾಗುತ್ತದೆ. ಬಗೆದಷ್ಟು ರೋಚಕ ಮಾಹಿತಿಗಳು ಹೊರಬರುತ್ತದೆ. ಸೂರ್ಯನ ಕುರಿತು ನಾಸಾ, ಇಸ್ರೋ ಸೇರಿದಂತೆ ಹಲವು ಬಾಹ್ಯಾಕಾಶ ಸಂಸ್ಥೆಗಳು ಅಧ್ಯಯನ ನಡೆಸುತ್ತಿದೆ. ಇದೀಗ ಸೂರ್ಯನ ಕುತೂಹಲ ಡಬಲ್ ಮಾಡುವಂತ ಅದ್ಭುತ ಫೋಟೋ ಹಗೂ ವಿಡಿಯೋವನ್ನು ಆ್ಯಸ್ಟ್ರೋಫೋಟೋಗ್ರಾಫರ್ ಕ್ಲಿಕ್ ಮಾಡಿದ್ದು, ಜಗತ್ತೆ ಅಚ್ಚರಿಗೊಂಡಿದೆ.

25
ವಿಮಾನ ಹಾರಿ ಹೋಗುತ್ತಿದ್ದ ಅಪೂರ್ವ ಕ್ಷಣ ಸೆರೆ

ಆ್ಯಸ್ಟ್ರೋಫೋಟೋಗ್ರಾಫರ್ ಆ್ಯಂಡ್ರೂ ಮೆಕ್‌ಕ್ರಾಥಿ ಈ ಫೋಟೋ ಹಾಗೂ ವಿಡಿಯೋ ತೆಗೆದಿದ್ದಾನೆ. 6 ದಿನಗಳ ಕಾಲ ಸೂರ್ಯನ ಬರೋಬ್ಬರಿ 1.7 ಮಿಲಿಯನ್ ಫೋಟೋ ಹಾಗೂ ವಿಡಿಯೋ ಕ್ಲಿಕ್ ಮಾಡಿದ ಆ್ಯಂಡ್ರೂಗೆ ಮಂಚಿನಂತ ಒಂದು ಕ್ಷಣ ಬಂದಿತ್ತು. ವಾಣಿಜ್ಯ ವಿಮಾನ ಒಂದು ಹಾದು ಹೋಗುತ್ತಿದ್ದಂತೆ ಈ ಫೋಟೋವನ್ನು ಆ್ಯಂಡ್ರೂ ಕ್ಲಿಕ್ ಮಾಡಿ ಜಗತ್ತನ್ನೇ ಚಕಿತಗೊಳಿಸಿದ್ದಾರೆ.

35
ಸೂರ್ಯನ ಮೇಲ್ಮೈನ ಸಣ್ಣ ಸ್ಫೋಟ

ಸೂರ್ಯ ಅತ್ಯಂತ ಹತ್ತಿರದ ಫೋಟೋ ಜೊತೆಗೆ ಹೈ ರೆಸಲ್ಯೂಶನ್ ಫೋಟೋ ಇದಾಗಿದೆ. ಇದರಲ್ಲಿ ಸೂರ್ಯನ ಮೇಲ್ಲೈನಲ್ಲಿನ ಸಣ್ಣ ಸಣ್ಣ ಸ್ಫೋಟಗಳು, ಹೊತ್ತಿ ಉರಿಯುತ್ತಿರುವ ಜ್ವಾಲೆಯೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದೇ ಕಾರಣದಿಂದ ಸೂರ್ಯನ ಕುರಿತ ಹಲವು ರೋಚಕ ಮಾಹಿತಿಗಳು ಈ ಫೋಟೋಗಲ್ಲಿ ಅಡಕವಾಗಿದೆ.

45
ಜಗತ್ತೇ ಸಲಾಂ ಹೇಳಿದ ಫೋಟೋ

ಈ ಫೋಟೋ ಹಾಗೂ ವಿಡಿಯೋದಲ್ಲಿ ಸೂರ್ಯನ ಕೆಲ ಸೂಕ್ಷ್ಮತೆಗಳು ಗೋಚರಿಸುತ್ತದೆ. ಪ್ರಕಾಶಮಾನವಾಗಿ ಉರಿಯುತ್ತಿರುವ ಸೂರ್ಯ ಜೊತೆಗೆ ಅದರ ಸುತ್ತಲ ಇರುವ ಕಣಗಳ ಕುರಿತು ಈ ಫೋಟೋದಲ್ಲಿ ಸ್ಪಷ್ಟವಾಗಿದೆ. ಇದೇ ಕಾರಣದಿಂದ ಈ ಫೋಟೋಗೆ ಜಗತ್ತೆ ಸಲಾಂ ಹೇಳಿದೆ.

55
ಅತ್ಯಾಧುನಿಕ ಕ್ಯಾಮೆರಾ ಮೂಲಕ ಸೆರೆ

ಪ್ರತಿ ಸೆಕೆಂಡ್‌ಗೆ 10 ಫ್ರೇಮ್ ಸೆರೆ ಹಿಡಿಯುವ ಅತ್ಯಾಧುನಿಕ ಕ್ಯಾಮೆರಾ ಮೂಲಕ ಈ ಫೋಟೋ, ವಿಡಿಯೋ ಕ್ಲಿಕ್ ಮಾಡಲಾಗಿದೆ. ಸೂರ್ಯನ ಅತ್ಯಂತ ಸೂಕ್ಷ್ಮತೆಗಳು ಈ ಫೋಟೋದಲ್ಲಿ ಸೆರೆಯಾಗಬೇಕು ಅನ್ನೋದು ಆ್ಯಂಡ್ರೋ ಉದ್ದೇಶವಾಗಿತ್ತು. ಇದರಂತೆ ಫೋಟೋ ಕ್ಲಿಕ್ ಮಾಡಲಾಗಿದೆ.

ಅತ್ಯಾಧುನಿಕ ಕ್ಯಾಮೆರಾ ಮೂಲಕ ಸೆರೆ

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories