ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದೀರಾ? ಮನೆಯಲ್ಲಿ ಈ ಕೆಲ್ಸ ಮಾಡ್ಬಹುದು!

Suvarna News   | Asianet News
Published : Apr 26, 2021, 04:23 PM IST

ಕೊರೋನಾ ಎಂಬ ಮಹಾಮಾರಿಯಿಂದ ಎಲ್ಲವೂ ಬದಲಾಗಿದೆ. ಜನರು ಕೆಲಸ ಕಳೆದುಕೊಂಡು ಕಷ್ಟಪಡುತ್ತಿದ್ದಾರೆ. ಇನ್ನು ಕೆಲವರು ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಕಳೆದು ಕೊಂಡು ಸಣ್ಣ ಸಣ್ಣ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಬದಲಾಗುತ್ತಿರುವ ಕಾಲಕ್ಕೆ ಸರಿಯಾಗಿ ನಾವೂ ಬದಲಾಗಬೇಕು. ಕೆಲಸ ಇಲ್ಲ ಎಂದು ಭಯಪಡಬೇಡಿ. ಇಂದು ಸ್ಮಾರ್ಟ್ ಆಗಿ ಕೆಲಸ ಮಾಡುವ ಮೂಲಕ ಹಣ ಗಳಿಸಬಹುದು. ಅದಕ್ಕಾಗಿ ಆಫೀಸ್‌ಗೆ ಹೋಗಲೇಬೇಕು ಎಂದೇನೂ ಇಲ್ಲ. ಮನೆಯಲ್ಲಿಯೇ ಕುಳಿತು ಹಣ ಗಳಿಕೆ ಮಾಡಬಹುದು. ಹೇಗೆ ಅನ್ನೋದನ್ನು ನೋಡೋಣ...   

PREV
19
ಕೊರೋನಾದಿಂದ ಕೆಲಸ ಕಳೆದುಕೊಂಡಿದ್ದೀರಾ? ಮನೆಯಲ್ಲಿ ಈ ಕೆಲ್ಸ ಮಾಡ್ಬಹುದು!

ಟ್ಯೂಷನ್ : ಮಕ್ಕಳಿಗೆ ಮನೆ ಪಾಠ ಹೇಳಿಕೊಡುವ ಮೂಲಕ  ಹಣ ಗಳಿಕೆ ಮಾಡಬಹುದು. ಕೊರೋನಾದಿಂದಾಗಿ ಮಕ್ಕಳಿಗೆ ಶಾಲೆ ಇಲ್ಲದೆ, ಮನೆಯಲ್ಲಿಯೇ ಇರುವಂತಾಗಿದೆ, ಇಂತಹ ಸಂದರ್ಭದಲ್ಲಿ ಹತ್ತಿರದ  ಮಕ್ಕಳನ್ನು ಸೇರಿಸಿಕೊಂಡು ಅಥವಾ, ಗೊತ್ತಿರುವ ಮಕ್ಕಳಿಗೆ ಆನ್ ಲೈನ್ ಮೂಲಕ ಪಾಠ ಹೇಳಿಕೊಡಿ. ಇದರಿಂದ ಅವರಿಗೂ ಸುಲಭವಾಗುತ್ತದೆ. 

29

ಆನ್ ಲೈನ್ ಕೌನ್ಸೆಲಿಂಗ್ : ಇದು ಮನೆಯಲ್ಲಿ ಕುಳಿತು ಹಣ ಗಳಿಸುವ ಒಂದು ಬೆಸ್ಟ್ ವಿಧಾನ. ಸ್ಕೂಲ್ ಕಾಲೇಜು ಅಥವಾ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯ ಮಾಹಿತಿ ನೀಡಲು ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಕೌನ್ಸೆಲಿಂಗ್ ಮಾಡಿಸುತ್ತಾರೆ. ಈ ಸಮಯದಲ್ಲಿ ನೀವು ಆನ್ ಲೈನ್ ಕೌನ್ಸೆಲರ್ ಆಗಿ ಕಾರ್ಯ ನಿರ್ವಹಿಸಬಹುದು.  

39

ಟ್ರಾನ್ಸ್ಲೇಟರ್ : ನಿಮಗೆ ಹೆಚ್ಚಿನ ಭಾಷಾ ಜ್ಞಾನ ಇದ್ದರೆ ಅದನ್ನೇ ಕರಿಯರ್ ಆಗಿ ರೂಪಿಸಬಹುದು. ಹಲವಾರು ಕಂಪನಿಗಳು ಮನೆಯಲ್ಲಿಯೇ ಕುಳಿತು ಟ್ರಾನ್ಸ್ಲೇಟ್ ಮಾಡುವಂತಹ ಕೆಲಸ ನೀಡುತ್ತವೆ. ನೀವು ವಿದೇಶಿ ಕಂಪನಿಗಳ ಕೆಲಸವನ್ನು ಸಹ ಮಾಡಬಹುದು. ಈ ಕೆಲಸ ಮಾಡಲು ಬಹು ಭಾಷಾ ಜ್ಞಾನದ ಜೊತೆಗೆ ಸ್ಮಾರ್ಟ್ ಆಗಿ ಸಹ ಇರಬೇಕು. 

49

ವೆಬ್ ಡಿಸೈನಿಂಗ್ : ಐಟಿ ಸೆಕ್ಷನ್ ನಲ್ಲಿ ಈ ವಿಭಾಗ ಇದೆ. ಇದನ್ನು ಮನೆಯಲ್ಲಿ ಕುಳಿತುಕೊಂಡೆ ಮಾಡಬಹುದು. ದೊಡ್ಡ ದೊಡ್ಡ ಕಂಪನಿಗಳು ಇಂತಹ ಜನರನ್ನು ಆಯ್ಕೆ ಮಾಡುತ್ತಾರೆ. ನೀವು ವೆಬ್ ಡಿಸೈನಿಂಗ್ ಕೋರ್ಸ್ ಮಾಡಿದ್ದರೆ ಮನೆಯಲ್ಲಿಯೇ ಕುಳಿತು ವೆಬ್ ಡೆವಲಪ್, ಡಿಸೈನ್ ಮಾಡಬಹುದು. ಜೊತೆಗೆ ವಿದ್ಯಾಭ್ಯಾಸ ಮುಂದುವರೆಸಬಹುದು. 

59

ಬರಹಗಾರರು : ನೀವು ಉತ್ತಮ ಬರಹಗಾರರಾಗಿದ್ದರೆ ಕ್ರಿಯೇಟಿವ್ ರೈಟರ್ ಆಗಿ ವಿವಿಧ ಕಂಪನಿಗಳಿಗೆ ಕೆಲಸ ಮಾಡಬಹುದು. ಪತ್ರಿಕೆ, ಮ್ಯಾಗಝಿನ್, ವೆಬ್ಸೈಟ್ ಗಳಿಗೆ ನೀವು ಕೆಲಸ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಫ್ರೀಲಾನ್ಸ್ ರೈಟಿಂಗ್ ಗೆ ಹೆಚ್ಚಿನ ಬೇಡಿಕೆ ಇದೆ. 

69

ರಿಸರ್ಚ್ ಅಸಿಸ್ಟಂಟ್ : ಹೆಚ್ಚಿನ ಕಂಪನಿಗಳು ತಮ್ಮ ಸ್ಪೆಷಲ್ ಪ್ರಾಜೆಕ್ಟ್ಗಾಗಿ ವಿಶೇಷ ಹೋಮ್ ರಿಸರ್ಚ್ ಅಸಿಸ್ಟೆಂಟ್ಸ್ ನೇಮಿಸುತ್ತಾರೆ. ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಸ್ಮಾರ್ಟ್ ಆಗಿ ಹ್ಯಾಂಡಲ್ ಮಾಡಲು ತಿಳಿದಿರಬೇಕು. ಮೆದುಳು ಚುರುಕಾಗಿ ಕೆಲಸ ಮಾಡಿದರೆ ಈ ಕೆಲಸದಿಂದ ಹೆಚ್ಚಿನ ಹಣ ಸಂಪಾದಿಸಬಹುದು. 

79

ಇದಲ್ಲದೆ ಇತ್ತೀಚಿಗೆ ಹಲವು ಆ್ಯಪ್ಸ್ ಸುಲಭವಾಗಿಯೇ ಮನೆಯಲ್ಲಿ ಕುಳಿತು ಮಾರಾಟ ಮಾಡುವಂತೆ ಹಾಗೂ ಹಣ ಸಂಪಾದಿಸಲು ಸಹಾಯ ಮಾಡುತ್ತದೆ. ಅವುಗಳ ಬಗ್ಗೆ ತಿಳಿದು ನೀವು ಅಂತಹ ವ್ಯಾಪಾರಕ್ಕೆ ಕೈ ಹಾಕಿಬಹುದು. ಯಾವುದಕ್ಕೂ ನಿಮ್ಮ ಜಾೃಗೃತಿಯಲ್ಲಿ ನೀವಿರಿ.

89

ನಿಮ್ಮ ಹವ್ಯಾಸಗಳ ಮೂಲಕವೇ ಹಣ ಸಂಪಾದಿಸಬಹುದು.  ಪೈಂಟಿಂಗ್, ಎಂಬ್ರಾಯಿಡರಿ, ಡ್ರೀಮ್ ಕ್ಯಾಚರ್, ಮೊದಲಾದವುಗಳ ಬಗ್ಗೆ ನಿಮಗೆ ಜ್ಞಾನ ಇದ್ದರೆ ಅದರಿಂದಲೇ ಉತ್ತಮ ರೀತಿಯಲ್ಲಿ ಸಂಪಾದಿಸಬಹುದು.

99

ಇನ್ನು ಸ್ಟಿಚಿಂಗ್ ತಿಳಿದಿದ್ದರೆ ಇದರಿಂದ ಬೇಕಾದಷ್ಟು ಲಾಭ ಪಡೆಯಬಹುದು, ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರೀತಿಯ ಸಲ್ವಾರ್, ಬ್ಲೌಸ್‌ಗೆ ಬಹಳ ಬೇಡಿಕೆ ಇದೆ. ಅವುಗಳನ್ನು ಕಲಿತರೆ ಸ್ವಲ್ಪ ಸಮಯದಲ್ಲಿ ನೀವು ಹಣ ಗಳಿಕೆ ಮಾಡಬಹುದು. 

click me!

Recommended Stories