ಭಾರತದ ಎರಡನೇ ಅತಿದೊಡ್ಡ ತಂತ್ರಜ್ಞಾನ ಹೊರಗುತ್ತಿಗೆ ಕಂಪನಿಯಾದ ಇನ್ಫೋಸಿಸ್ ತನ್ನ ಉದ್ಯೋಗಿಗಳನ್ನು ವಾರಕ್ಕೆ ಕನಿಷ್ಠ ಮೂರು ದಿನ ಕಚೇರಿಗೆ ಹಿಂತಿರುಗುವಂತೆ ಸೂಚನೆ ನೀಡಿದೆ. ಹಿಂದಿನ ವಿನಂತಿಗಳನ್ನು ಉದ್ಯೋಗಿಗಳು ಹೆಚ್ಚಾಗಿ ನಿರ್ಲಕ್ಷಿಸಿದ ನಂತರ ಕಂಪನಿಯು ಶೀಘ್ರದಲ್ಲೇ ಇದನ್ನು ಕಡ್ಡಾಯಗೊಳಿಸಲು ಯೋಜಿಸಿದೆ.
ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ಆರ್ ನಾರಾಯಣ ಮೂರ್ತಿ ಉತ್ಪಾದಕತೆ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ದೀರ್ಘಾವಧಿಯ ಕೆಲಸದ ಸಮಯವನ್ನು ಪದೇ ಪದೇ ಒತ್ತಿಹೇಳಿದ ಬಳಿಕ ಈ ನಿರ್ಧಾರಕ್ಕೆ ಬಂದಿದೆ.
ಬೆಂಗಳೂರು ಮೂಲದ ಸಾಫ್ಟ್‌ವೇರ್ ಕಂಪನಿಯು ವರ್ಟಿಕಲ್ ಹೆಡ್‌ಗಳು ಕಳುಹಿಸಿದ ಇಮೇಲ್ ಅನ್ನು ಮಾಧ್ಯಮವೊಂದು ಉಲ್ಲೇಖಿಸಿದ್ದು, ದಯವಿಟ್ಟು ವಾರದಲ್ಲಿ ಕನಿಷ್ಠ 3 ದಿನ ಕಚೇರಿಗೆ ಬರಲು ಪ್ರಾರಂಭಿಸಿ. ಇದು ಶೀಘ್ರದಲ್ಲೇ ಕಡ್ಡಾಯವಾಗಲಿದೆ ಎಂದು ಕೇಳಲಾಗಿದೆ. ಆದರೆ, ಈ ಬಗ್ಗೆ ಇನ್ಫೋಸಿಸ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಲ್ಲದೆ, ಕಚೇರಿಗೆ ಹಿಂತಿರುಗಲು ಹಿಂದಿನ ವಿನಂತಿಗಳಿಗೆ ನೌಕರರ ಪ್ರತಿಕ್ರಿಯೆಯ ಕೊರತೆಯ ಬಗ್ಗೆಯೂ ಇಮೇಲ್ ಅತೃಪ್ತಿ ವ್ಯಕ್ತಪಡಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 3 ವರ್ಷಗಳ ಕಾಲ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಯು ಸಾಕಷ್ಟು ದೀರ್ಘವಾಗಿದೆ ಎಂದೂ ಅದು ಹೇಳಿದೆ. ಹಾಗೆ, ವೈದ್ಯಕೀಯ ಕಾರಣಗಳಿಲ್ಲದಿದ್ದರೆ, ಉದ್ಯೋಗಿಗಳು ಕಚೇರಿಯಿಂದಲೇ ಕೆಲಸ ಮಾಡಲು ಪ್ರಾರಂಭಿಸಬೇಕು ಎಂದೂ ಇಮೇಲ್‌ನಲ್ಲಿ ಹೇಳಲಾಗಿದೆ.
ಕಂಪನಿಯ ಮ್ಯಾನೇಜ್‌ಮೆಂಟ್ ಕೆಲವು ಖಾಲಿ ವಿತರಣಾ ಘಟಕಗಳಿಂದ (DUs) ನಿರಾಶೆಗೊಂಡಿದೆ. ಮತ್ತು ಆದ್ದರಿಂದ, ಕ್ಲೈಂಟ್‌ಗಳಿಗಾಗಿ ಆಫ್‌ಶೋರ್ ಡೆವಲಪ್ಮೆಂಟ್ ಕೇಂದ್ರಗಳಲ್ಲಿ (ODCs) ತಕ್ಷಣದ ಹಾಜರಾತಿಯನ್ನು ವಿನಂತಿಸಿದೆ.
ಆದರೂ, ಈ ವಿಷಯದ ಬಗ್ಗೆ ಪರಿಚಿತ ವ್ಯಕ್ತಿಯ ಪ್ರಕಾರ, ಕೇಸ್-ಬೈ-ಕೇಸ್ ಆಧಾರದ ಮೇಲೆ ಆರೋಗ್ಯ ಸಂಬಂಧಿತ ಸಮಸ್ಯೆಗಳಿರುವ ಉದ್ಯೋಗಿಗಳಿಂದ ವಿನಂತಿಗಳನ್ನು ಪರಿಗಣಿಸುವುದಾಗಿಯೂ ಕಂಪನಿಯು ಉಲ್ಲೇಖಿಸಿದೆ.
ಇನ್ಪೋಸಿಸ್ ಮಾತ್ರವಲ್ಲದೆ, ಮತ್ತೊಂದು ಪ್ರಮುಖ ಐಟಿ ಕಂಪನಿಯಾದ ವಿಪ್ರೋ ತನ್ನ ಹೈಬ್ರಿಡ್ ಕೆಲಸದ ನೀತಿಯನ್ನು ಪದೇ ಪದೇ ಧಿಕ್ಕರಿಸಿದರೆ ಪರಿಣಾಮಗಳನ್ನು ಎದುರಿಸುವ ಬಗ್ಗೆಯೂ ತನ್ನ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಿದೆ. ನೌಕರರು ವಾರದಲ್ಲಿ ಮೂರು ದಿನಗಳ ಕಾಲ ಕಚೇರಿಯಲ್ಲಿ ಹಾಜರಿರಬೇಕು. ಅನುಸರಿಸದವರಿಗೆ ಕೆಲವು ಪ್ರಯೋಜನಗಳನ್ನು ನಿರಾಕರಿಸಬಹುದು ಅಥವಾ ತಡೆಹಿಡಿಯಬಹುದು ಎಂದೂ ಕಂಪನಿ ಹೇಳಿದೆ.
ಈ ಕ್ರಮವು ಜನವರಿ 7 ರಿಂದ ಜಾರಿಗೆ ಬರಲಿದೆ ಎಂದು ವರದಿ ತಿಳಿಸಿದೆ. ಕಂಪನಿಯು ಹೈಬ್ರಿಡ್ ಕೆಲಸದ ವಿಧಾನವನ್ನು ಅಳವಡಿಸಿಕೊಳ್ಳಲಿದೆ ಎಂದು ವಿಪ್ರೋ ವಕ್ತಾರರು ತಿಳಿಸಿದ್ದಾರೆ.
ಜತೆಗೆ, ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆಯಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಹ ಸಾಮಾನ್ಯ ಕಚೇರಿ ದಿನಚರಿಯನ್ನು ಪುನಾರಂಭಿಸಲು ಕ್ರಮಗಳನ್ನು ಕೈಗೊಂಡಿದೆ.
ಪ್ರತ್ಯೇಕ ಇಮೇಲ್‌ನಲ್ಲಿ, ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಬಸ್ ಸೇವೆಗೆ ದಿನಕ್ಕೆ 150 ರೂ. ಶುಲ್ಕ ವಿಧಿಸುವುದಾಗಿ ತಿಳಿಸಿದ್ದು, ಮಾಸಿಕ 1,500 ರೂ. ಮಿತಿಯನ್ನು ಜನವರಿ 3 ರಿಂದ ಪ್ರಾರಂಭಿಸುತ್ತದೆ.
ಹೆಚ್ಚುವರಿಯಾಗಿ, ಹೆಲ್ತ್ ಕ್ಲಬ್ ಸೌಲಭ್ಯಗಳಿಗೆ 100 ರೂ. ಶುಲ್ಕ ವಿಧಿಸಲಾಗುತ್ತದೆ. ದಿನಕ್ಕೆ, 700 ರ ಮಾಸಿಕ ಮಿತಿಯೊಂದಿಗೆ, ಜನವರಿ 1 ರಿಂದ ಇದು ಜಾರಿಗೆ ಬರುತ್ತದೆ. ಈ ಸೇವೆಗಳು ಹಿಂದೆ ಉದ್ಯೋಗಿಗಳನ್ನು ಕಚೇರಿಗೆ ಮರಳಲು ಪ್ರೋತ್ಸಾಹಿಸಲು ಉಚಿತವಾಗಿ ನೀಡಲಾಗುತ್ತಿತ್ತು.
ಕಳೆದ ತಿಂಗಳು, ತಿಂಗಳಿಗೆ 10 ದಿನಗಳ ಕಾಲ ಕಚೇರಿಯಿಂದ ಕೆಲಸ ಮಾಡಲು ಆಯ್ದ ಉದ್ಯೋಗಿಗಳನ್ನು ಇನ್ಫೋಸಿಸ್ ಕೇಳಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಉತ್ಪಾದಕತೆ ಮತ್ತು ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ಮಹತ್ವವನ್ನು ನಾರಾಯಣ ಮೂರ್ತಿ ಪುನರುಚ್ಚರಿಸಿದ್ದಾರೆ.