Why Vote for Modi? : ಮೋದಿ ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು?: ಸಲೀಂ ಅಹ್ಮದ್‌

Kannadaprabha News   | Asianet News
Published : Dec 02, 2021, 12:07 PM ISTUpdated : Dec 02, 2021, 12:54 PM IST

ಬ್ಯಾಡಗಿ(ಡಿ.02):  ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರ ಬದುಕನ್ನು ಬೀದಿಗೆ ತಂದಿರುವ ನರೇಂದ್ರ ಮೋದಿ(Narendra Modi) ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕಾಗಿ ಮತ ಹಾಕಬೇಕು ಎಂದು ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ ಸಲೀಂ ಅಹ್ಮದ್‌(Saleem Ahmed) ಪ್ರಶ್ನಿಸಿದ್ದಾರೆ.

PREV
14
Why Vote for Modi? : ಮೋದಿ ಸರ್ಕಾರಕ್ಕೆ ಯಾವ ಪುರುಷಾರ್ಥಕ್ಕೆ ಮತ ಹಾಕಬೇಕು?: ಸಲೀಂ ಅಹ್ಮದ್‌

ಪಟ್ಟಣದ ಕಾಂಗ್ರೆಸ್‌(Congress) ಭವನದಲ್ಲಿ ನಡೆದ ವಿಪ ಚುನಾವಣೆ(Vidhan Parishat Election) ಪ್ರಚಾರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬಿಜೆಪಿಗೆ(BJP) ಏಕೆ ಮತದಾನ(Vote) ಮಾಡಬೇಕು ಎನ್ನುವುದನ್ನು ಈದೀಗ ದೇಶದ ಪ್ರತಿಯೊಬ್ಬ ನಾಗರಿಕರು ಗಂಭೀರವಾಗಿ ಚಿಂತನೆ ನಡೆಸಬೇಕು ಎಂದು ಹೇಳಿದ ಸಲೀಂ ಅಹ್ಮದ್‌

24

ಬಿಜೆಪಿ ಸರ್ಕಾರ ಒಂದೇ ಒಂದು ಮನೆಯನ್ನು ಬಡವರಿಗೆ ನೀಡಿಲ್ಲ. ಕಳೆದ ಎಂಟು ತಿಂಗಳಿನಿಂದ ಗ್ರಾಪಂ ಅಧಿಕಾರಿಗಳಿಗೆ ವೇತನ ನೀಡಿಲ್ಲ. ಸದಸ್ಯರಿಗೆ ಗೌರವಧನ ನೀಡಿಲ್ಲ. ಇಂತಹ ಸರ್ಕಾರ​ಗಳು ನಮಗೇ ಬೇಕಾ? ನೀವೇ ಯೋಚಿಸಿ ಮತ ಹಾಕಿ ಎಂದು ಮನವಿ ಮಾಡಿದ ಸಲೀಂ

34

ಹಾನಗಲ್‌ ಶಾಸಕ ಶ್ರೀನಿವಾಸ್‌ ಮಾನೆ(Shrinivas Mane) ಮಾತನಾಡಿ, ಹಾನಗಲ್‌ ಚುನಾವಣೆ ಕೇವಲ ಹಾನಗಲ್‌ಗೆ ಸೀಮಿತವಾಗಿರಲಿಲ್ಲ. ಬದಲಾಗಿ ದೇಶದಲ್ಲಿ ಬೆಲೆ ಏರಿಕೆ(Price Hike) ಮಾಡಿ, ಬಡವರ ಜೀವ ಹಿಂಡುತ್ತಿದ್ದ ಸರ್ಕಾರದ ವಿರುದ್ಧ ನಡೆದ ಯುದ್ಧವಾಗಿತ್ತು. ಆ ಯುದ್ಧದಲ್ಲಿ ಗೆದ್ದಿರುವುದು ಈಗ ಇತಿಹಾಸ. ಮತ್ತೆ ಬಿಜೆಪಿಯನ್ನು ಸೋಲಿಸಲು ಅವಕಾಶ ಬಂದಿದ್ದು, ಎಲ್ಲರೂ ಸಲೀಂ ಅಹ್ಮದ್‌ಗೆ ಮತ ಹಾಕುವಂತೆ ಮನವಿ ಮಾಡಿದರು.

44

ಮಾಜಿ ಶಾಸಕ ಬಸವರಾಜ ಶಿವಣ್ಣನವರ, ಕಾಂಗ್ರೆಸ್‌ ಮುಖಂಡ ಎಸ್‌.ಆರ್‌. ಪಾಟೀಲ ಮಾತನಾಡಿದರು. ಸಭೆಯಲ್ಲಿ ವೀಕ್ಷಕ ಟಿ.ಎನ್‌. ಶಾಹೀದ್‌, ತಾಂಡಾ ನಿಗಮದ ಮಾಜಿ ಅಧ್ಯಕ್ಷ ಬಾಲರಾಜ, ಮಂಜುನಾಥ, ರಾಬರ್ಟ್‌, ಮಲ್ಲಿಕಾರ್ಜುನ ಕರಿಲಿಂಗಣ್ಣವರ, ದಾನಪ್ಪ ಚೂರಿ, ರಮೇಶ ಸುತ್ತಕೋಟಿ, ಯುನಸ್‌ ಅಹ್ಮದ್‌ ಸವಣೂರ, ಪ್ರೇಮಾ ಅಂಗಡಿ, ಎಪಿಎಂಸಿ ಸದಸ್ಯ ದಾನನಗೌಡ ತೋಟದ, ಚೆನ್ನಬಸಪ್ಪ ಹುಲ್ಲತ್ತಿ, ಶಂಕರಗೌಡ ಪಾಟೀಲ, ಪ್ರಕಾಶ ಬನ್ನಿಹಟ್ಟಿ, ಡಿ.ಎಚ್‌. ಬುಡ್ಡನಗೌಡರ, ದುರುಗೇಶ ಗೋಣೆಮ್ಮನವರ, ಮಂಜುನಾಥ ಭೋವಿ, ಜಗದೀಶ ಪಾಟೀಲ, ರಮೇಶ ಮೋಟೆಬೆನ್ನೂರ ಉಪಸ್ಥಿತರಿದ್ದರು.

Read more Photos on
click me!

Recommended Stories