ಖ್ಯಾತ ವೈದ್ಯ ಬಿಜೆಪಿ ಸೇರ್ಪಡೆ: ಇವರೇ ಶಿರಾ ಬೈ ಎಲೆಕ್ಷನ್ ಅಭ್ಯರ್ಥಿ..!

First Published | Oct 3, 2020, 10:45 PM IST

ಬೆಂಗಳೂರಿನ ಆರ್‌.ಆರ್..ನಗರ ಮತ್ತು ತುಮಕೂರಿನ ಜಿಲ್ಲೆಯೆ ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಪ್ರಕಟವಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಶುರುವಾಗಿದೆ. ಅದರಲ್ಲೂ ಬಿಜೆಪಿ ಖ್ಯಾತ ವ್ಯದ್ಯರೊಬ್ಬರಿಗೆ ಗಾಳ ಹಾಕಿದ್ದು, ಅವರನ್ನೇ ಶಿರಾ ಬೈ ಎಲೆಕ್ಷನ್ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡುವುದು ಖಚಿತವಾಗಿದೆ.

ಡಾ. ರಾಜೇಶ್ ಗೌಡ ಅವರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಇಂದು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜೇಶ್ ಗೌಡ ಸೇರಿದಂತೆ ಶಿರಾ ಕ್ಷೇತ್ರದ ಕೆಲ ಪ್ರಮುಖ ಮುಖಂಡರು ಕೂಡ ಬಿಜೆಪಿ ಸೇರಿದರು.
Tap to resize

ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಸಂಸದ ನಾರಾಯಣಸ್ವಾಮಿ, ಮಾಜಿ ಶಾಸಕ ಸುರೇಶ್ ಗೌಡ, ವಿಧಾನಪರಿಷತ್ ಸದಸ್ಯ ರವಿ ಕುಮಾರ್ ಮೊದಲಾದವರು ಭಾಗಿಯಾದರು. ರಾಜೇಶ್ ಗೌಡ ಮತ್ತಿತರರಿಗೆ ಬಿಜೆಪಿಯ ಧ್ವಜ ನೀಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ರಾಜೇಶ್ ಗೌಡ ಅವರು ರಾಜಕಾರಣಕ್ಕೆ ಹೊಸಬರಾದರೂ ಅವರ ಕುಟುಂಬಕ್ಕೆ ರಾಜಕಾರಣದ ನಂಟಿದೆ. ಅವರ ತಂದೆ ಮೂಡಲಗಿರಿಯಪ್ಪ ಕಾಂಗ್ರೆಸ್ ನಾಯಕರಾಗಿದ್ದವರು. ತುಮಕೂರಿನಲ್ಲಿ ಪ್ರಬಲವಾಗಿರುವ ಕುಂಚಿಟಿಗ ಒಕ್ಕಲಿಗ ಸಮುದಾಯಕ್ಕೆ ಸೇರಿದ ಇವರಿಗೆ ಟಿಕೆಟ್ ನೀಡಿದರೆ ಸಮುದಾಯದ ಮತಗಳ ಜೊತೆಗೆ ಕಾಂಗ್ರೆಸ್​ನ ಕೆಲ ಮತಗಳನ್ನೂ ಸೆಳೆದುಕೊಳ್ಳಬಹುದು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಮೂಲಗಳ ಪ್ರಕಾರ, ರಾಜೇಶ್ ಗೌಡ ಅವರು ಹೈಕಮಾಂಡ್ ಮಟ್ಟದಲ್ಲೇ ಟಿಕೆಟ್ ಖಾತ್ರಿ ಪಡೆದು ಬಿಜೆಪಿ ಸೇರಿದ್ದಾರೆನ್ನಲಾಗಿದೆ.
ರಾಜೇಶ್ ಗೌಡ ಅವರು ಬಿಜೆಪಿ ಸೇರುವುದನ್ನು ಸ್ಥಳೀಯ ಬಿಜೆಪಿ ನಾಯಕ ಬಿ.ಕೆ. ಮಂಜುನಾಥ್ ವಿರೋಧಿಸಿದ್ದರು. ಈಗ ರಾಜೇಶ್ ಗೌಡ, ಬಿ.ಕೆ. ಮಂಜುನಾಥ್ ಮತ್ತು ಎಸ್.ಆರ್. ಗೌಡ ಈ ಮೂವರ ಹೆಸರುಗಳನ್ನ ಹೈಕಮಾಂಡ್​ಗೆ ಕಳುಹಿಸಿಕೊಡಲಾಗಿದೆ. ರಾಜೇಶ್ ಗೌಡ ಅವರಿಗೇ ಟಿಕೆಟ್ ಸಿಗವ ಸಾಧ್ಯತೆ ದಟ್ಟವಾಗಿದೆ.
ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಶಿರಾ ಕ್ಷೇತ್ರದ ನಾದೂರು ಜಿಲ್ಲಾ ಪಂಚಾಯತಿ ಸದಸ್ಯರಾದ ಶ್ರೀರಂಗ ಯಾದವ್ ಮತ್ತು ಮದಲೂರು ಜಿಲ್ಲಾ ಪಂಚಾಯತಿ ಸದಸ್ಯರಾದ ನರಸಿಂಹ ಮೂರ್ತಿಯವರು ಹಾಗೂ ಮುಖಂಡರಾದ ಶ್ರೀ ಮೂರ್ತಿ ಮೇಷ್ಟ್ರು ಬಿಜೆಪಿ ಸೇರಿದರು.
ವಿವಿಧ ಪಕ್ಷಗಳ ಅನೇಕ ಮುಖಂಡರು ನಮ್ಮ ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಬಿಜೆಪಿ ಸೇರ್ಪಡೆಯಾದರು.

Latest Videos

click me!