ಸೋಲಿನ ಬೆನ್ನಲ್ಲಿಯೇ ಟ್ರೆಂಡ್ ಆದ ನಿಖಿಲ್ ಎಲ್ಲಿದ್ದೀಯಪ್ಪ?

First Published | Nov 23, 2024, 7:54 PM IST

ಚನ್ನಪಟ್ಟಣ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಸೋಲಿನ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟ್ರೋಲ್‌ಗಳು ಹರಿದಾಡುತ್ತಿವೆ. ಅಭಿಮನ್ಯು ಪಾತ್ರದಿಂದ ಹಿಡಿದು ಹ್ಯಾಟ್ರಿಕ್ ಸೋಲುಗಳವರೆಗೆ ವ್ಯಂಗ್ಯಚಿತ್ರಗಳು ವೈರಲ್ ಆಗಿವೆ. ಚುನಾವಣಾ ಫಲಿತಾಂಶದ ನಿರೀಕ್ಷೆಯಲ್ಲಿ 'ಶಾಸಕರು' ಎಂದು ಬೋರ್ಡ್ ಸಿದ್ಧಪಡಿಸಿದ್ದನ್ನು ಟ್ರೋಲ್ ಮಾಡಲಾಗಿದೆ.

ಚನ್ನಪಟ್ಟಣ ವಿಧಾನಸಭಾ ಉಪ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸಿ.ಪಿ. ಯೋಗೇಶ್ವರ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟ್ರೋಲ್‌ಗಳು ಕಂಡುಬರುತ್ತಿವೆ. ಅದರಲ್ಲಿಯೂ ನಿಖಿಲ್ ಕುಮಾಸ್ವಾಮಿ ಅವರು ಸಿನಿಮಾ ಹಿನ್ನೆಲೆಯಲ್ಲಿ ಬಂದವರಾಗಿದ್ದರಿಂದ ಅವರ ಅಭಿಮನ್ಯು ಪಾತ್ರವನ್ನೇ ಹಿಡಿದುಕೊಂಡು ಟ್ರೋಲ್ ಮಾಡಲಾರಂಭಿಸಿದ್ದಾರೆ. ಆ ಫೋಟೀವನ್ನು ಹಾಕಿ ಜಾಲಿ ಜಾಲಿ, ನಿಖಿಲ್ ಖಾಲಿ ಖಾಲಿ ಎಂದು ಟ್ರೋಲ್ ಮಾಡಿದ್ದಾರೆ.

ರಾಜಕೀಯ ಚಕ್ರವ್ಯೂಹದೊಳಗೆ ಬಂದ ನಿಖಿಲ್ ಕುಮಾರಸ್ವಾಮಿ ಅಲ್ಲಿಂದ ಹೊರಬರಲು ಸಾಧ್ಯವಾಗದೇ ಸೋತು ಸುಣ್ಣವಾಗುತ್ತಿದ್ದಾರೆ ಎಂಬ ಮಾತುಗಳನ್ನು ಟ್ರೋಲರ್‌ಗಳು ಹಂಚಿಕೊಂಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಸಿನಿಮಾದ ಫೊಟೋಗಳನ್ನು ಹಂಚಿಕೊಂಡು ಕಣ್ಣೀರು ಹಾಕುವಂತೆ ಟ್ರೋಲ್ ಮಾಡಿದ್ದಾರೆ. ಅಕ್ಕಿ ಕಾಳನ್ನು ತರಿಸಿ ಕಣ್ಣೀರಲ್ಲೇ ಅದನ್ನು ಬೇಯಿಸಿದೆ ಎಂದು ಪೋಟೋ ಹಂಚಿಕೊಂಡಿದ್ದಾರೆ.

Tap to resize

ಕನ್ನಡ ಚಿತ್ರರಂಗದಲ್ಲಿ ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ ನಿಖಿಲ್ ಕುಮಾರಸ್ವಾಮಿ ಅವರನ್ನು ಸಿನಿಮಾಗಳಿಗೂ ಹೋಲಿಕೆ ಮಾಡಿದ್ದಾರೆ. ಸಿನಿಮಾಗೆ ಎಂಟ್ರಿ ಕೊಟ್ಟ ಶಿವ ರಾಜ್ ಕುಮಾರ್ ಅವರು ಸತತವಾಗಿ ಮೂರು ಸಿನಿಮಾಗಳಲ್ಲಿ ಗೆದ್ದು ಹ್ಯಾಟ್ರಿಕ್ ಹೀರೋ ಎನಿಸಿಕೊಂಡರು. ಆದರೆ, ಇಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ, ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಸತತವಾಗಿ ಸೋತು ಹ್ಯಾಟ್ರಿಕ್ ಹೀರೋ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಹ್ಯಾಟ್ರಿಕ್ ಹೀರೋ ಬರಲು 37 ವರ್ಷಗಳು ಬೇಕಾಯ್ತು ಎಂದು ಟ್ರೋಲ್ ಮಾಡಿದ್ದಾರೆ.

ಮುನಿರತ್ನ ಸಿನಿಮಾದಲ್ಲಿ ಬಹುತಾರಾಗಣದಲ್ಲಿ ವೀರ ಅಭಿಮನ್ಯು ಪಾತ್ರವನ್ನು ಮಾಡಿದ ನಿಖಿಲ್ ಕುಮಾರಸ್ವಾಮಿ ನಿಜ ಜೀವನದಲ್ಲಿಯೂ ಅಭಿಮನ್ಯು ಆಗಿಬಿಟ್ಟರು. ಚಕ್ರವ್ಯೂಹದಲ್ಲಿ ಸಿಲುಕಿ ಅದರಿಂದ ಗೆದ್ದು ಹೊರ ಬರಲಾಗಲಿಲ್ಲ ಎಂಬ ಅರ್ಥದಲ್ಲಿ ಈ ಟ್ರೋಲ್ ಮಾಡಿದ್ದಾರೆ. ಇದರ ಜೊತೆಗೆ, ವಿಧಿವಿಪರೀತ ವಿಧಿ ಆಘಾತ ವಿಧಿ ವಿಲಾಸವೆನೆ ಇದೇನಹಾ ಎಂದು ಟ್ರೋಲ್‌ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ಕೆಲವೊಬ್ಬ ಟ್ರೋಲಿಗರು ನಿಖಿಲ್ ಕುಮಾರಸ್ವಾಮಿಯನ್ನು ಕೀಳು ಮಟ್ಟದಲ್ಲಿಯೂ ಟೀಕೆ ಮಾಡಿದ್ದಾರೆ. ಅಭಿಮನ್ಯುವಾಗಿ ಕಾಂಗ್ರೆಸ್ ರಾಜಕಾರಣದ ಚಕ್ರವ್ಯೂಹ ಬೇಧಿಸಲಾಗಲಿಲ್ಲ ಎಂದು ಹೇಳಿದ್ದಾರೆ. 

ಮತ್ತೊಂದೆಡೆ ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಎಕ್ಸಿಟ್ ಪೋಲ್‌ಗಳಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲುವು ಆಗುತ್ತದೆ ಎಂಬ ಭವಿಷ್ಯ ಬರುತ್ತಿದ್ದಂತೆಯೇ ಅವರು ಮನೆ ಅಥವಾ ಕಚೇರಿಯ ಮುಂದೆ ಶಾಸಕರೆಂದು ಫಲಕ ಹಾಕಿಸಿಕೊಳ್ಳಲು ಬೋರ್ಡ್ ಸಿದ್ಧಪಡಿಸಿದ್ದರು ಎಂದು ಟ್ರೋಲ್ ಮಾಡಿದ್ದಾರೆ, ಇದರಲ್ಲಿ ಶ್ರೀಯುತ ನಿಖಿಲ್ ಕುಮಾರಸ್ವಾಮಿ, ಶಾಸಕರು, ಚನ್ನಪಟ್ಟಣ ಎಂದು ಬರೆದ ಬೋರ್ಡ್ ಅನ್ನು ಇಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮಂಡ್ಯ ಲೋಕಸಭಾ ಚುನಾವಣೆ ವೇಳೆ ಜೆಡಿಎಸ್ ಪ್ರಚಾರಕ್ಕೆ ಏರ್ಪಡಿಸಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಕುಮಾಸ್ವಾಮಿ ದಂಪತಿ ನಿಖಿಲ್ ಎಲ್ಲಿದ್ದೀಯಪ್ಪಾ? ಎಂಂದು ಹೇಳಿದ್ದ ವೀಡಿಯೋ ಭಾರೀ ವೈರಲ್ ಆಗಿತ್ತು. ಇದೀಗ ಪುನಃ ಚನ್ನಪಟ್ಟಣದಲ್ಲಿ ಸೋತ ಬೆನ್ನಲ್ಲಿಯೇ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಟ್ರೋಲ್ ಆರಂಭವಾಗಿದೆ.

ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ, ರಾಮನಗರ ಹಾಗೂ ಚನ್ನಪಟ್ಟಣ ಚುನಾವಣೆಗಳಲ್ಲಿ ಸತತವಾಗಿ ಮೂರು ಬಾರಿಯೂ ಸೋತ ಬೆನ್ನಲ್ಲಿಯೇ ಚನ್ನಪಟ್ಟಣಕ್ಕೆ ಬೈ ಬೈ ಹೇಳಲು ರೆಡಿಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಸೋಲು ಆಗಿದೆ, ಮುಂದಿನ ಕ್ಷೇತ್ರ ಯಾವುದು ಹೇಳಿ ಅಪ್ಪಾ ಅಲ್ಲಿಗೆ ಹೋಗ್ತೇನೆ ಎಂಬ ಅರ್ಥ ಬರುವಂತೆ ಟ್ರೋಲ್ ಮಾಡಲಾಗಿದೆ.

Latest Videos

click me!