ದೇಗುಲ ಓಪನ್ ಆಗುತ್ತಿದ್ದಂತೆಯೇ ಧರ್ಮಸ್ಥಳಕ್ಕೆ ಕುಮಾರ್ ಬಂಗಾರಪ್ಪ: ಕಾರಿಗೂ ವಿಶೇಷ ಪೂಜೆ

First Published | Jun 8, 2020, 10:48 PM IST

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮೂರು ತಿಂಗಳಿನಿಂದ ಲಾಕ್‍ಡೌನ್ ಆಗಿ ಮುಚ್ಚಲ್ಪಟ್ಟಿದ್ದ ದೇವಸ್ಥಾನಗಳು ಸಾರ್ವಜನಿಕ ದರ್ಶನಕ್ಕೆ ಮುಕ್ತವಾದ ಹಿನ್ನೆಲೆಯಲ್ಲಿ ಇಂದು (ಸೋಮವಾರ) ರಾಜ್ಯದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿದ್ದು , ಭಕ್ತರು ದೇವರ ದರ್ಶನ ಪಡೆದರು. ಇನ್ನು ಸೊರಬ ಕ್ಷೇತ್ರದ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅವರು ಧರ್ಮಸ್ಥಳ ಮಂಜುನಾಥನ ಮೊರೆ ಹೋಗಿದ್ದಾರೆ. ಅಲ್ಲದೇ ತಮ್ಮ ಕಾರಿಗೂ ಮಂಜುನಾಥಸ್ವಾಮಿ ದರ್ಶನ ಮಾಡಿಸಿದ್ದಾರೆ. 
 

ಮೂರು ತಿಂಗಳ ಬಳಿಕ ದೇವಸ್ಥಾನಗಳು ಓಪನ್ ಆಗಿದ್ದು, ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಮಂಜುನಾಥಸ್ವಾಮಿ ಮೊರೆ ಹೋಗಿದ್ದಾರೆ.
ಇಂದು (ಸೋಮವಾರ) ಮೊದಲ ದಿನವೇ ಕುಮಾರ್ ಬಂಗಾರಪ್ಪ ಅವರು ಕುಟುಂಬದವರೊಂದಿಗೆ ಧರ್ಮಸ್ಥಳಕ್ಕೆ ಭೇಟಿ ನೀಡಿ, ಶ್ರೀ ಮಂಜುನಾಥ ಸ್ವಾಮಿ ದರ್ಶನ ಪಡೆದರು.ಬಳಿಕ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿದರು
Tap to resize

ಅಲ್ಲದೇ ತಮ್ಮ ಕಾರಿಗೂ ಮಂಜುನಾಥ್ ಸ್ವಾಮಿಯ ದರ್ಶನ ಮಾಡಿಸಿದರು
ಶ್ರೀ ಮಂಜುನಾಥ ಸ್ವಾಮಿಯ ದಿವ್ಯ ಸಾನಿಧ್ಯದಲ್ಲಿ ತಮ್ಮ ಹೊಸ ಕಾರಿಗೆ ವಿಶೇಷ ಪೂಜೆ ಪೂಜೆ ಮಾಡಿಸಿದರು
ಕುಮಾರ್ ಬಂಗಾರಪ್ಪ ಅವರು ಖರೀದಿಸಿರುವ ಫೋರ್ಡ್ ಎಂಡೆವರ್ ಹೊಸ ಕಾರಿಗೂ ಪೂಜೆ ಮಾಡಿಸಿದರು
ಸುಮಾರು ಮೂರು ತಿಂಗಳ ಲಾಕ್‌ಡೌನ್‌ನಲ್ಲಿಕ್ಷೇತ್ರದ ಜನರಕಷ್ಟ ಆಲಿಸಿದ ಕುಮಾರ್ ಬಂಗಾರ ಪ್ಪ ಕುಟುಂಬ ಸಮೇತರಾಗಿ ಮಂಜುನಾಥ್ ಸ್ವಾಮಿ ದರ್ಶನ ಪಡೆದುಕೊಂಡರು

Latest Videos

click me!