ರಾಷ್ಟ್ರಪತಿ ಚುನಾವಣೆ: ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಇಬ್ಬರು ಮಾಜಿ ಪ್ರಧಾನಿಗಳು

Published : Jul 18, 2022, 06:12 PM ISTUpdated : Jul 18, 2022, 07:30 PM IST

ಭಾರತದ 16ನೇ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷ ಯುಪಿಎ ಮೈತ್ರಿಕೂಟದಿಂದ ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾ ಸ್ಪರ್ಧೆಗೆ ಇಳಿದಿದ್ದಾರೆ. ಭಾರತದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಇಂದು(ಸೋಮವಾರ) ದೇಶಾದ್ಯಂತ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ರಹಸ್ಯ ಮತದಾನ ನಡೆಯಿತು. ಈ ಸಂದರ್ಭದಲ್ಲಿ ಇಬ್ಬರು ಮಾಜಿ ಪ್ರಧಾನಿಗಳು ವ್ಹೀಲ್ ಚೇರ್ ಮೂಲಕ ಬಂದು ಮತ ಹಾಕಿದರು.  

PREV
111
ರಾಷ್ಟ್ರಪತಿ ಚುನಾವಣೆ: ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಇಬ್ಬರು ಮಾಜಿ ಪ್ರಧಾನಿಗಳು

ಭಾರತದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಇಂದು(ಸೋಮವಾರ) ದೇಶಾದ್ಯಂತ ಸಂಸತ್ತಿನಲ್ಲಿ ಮತ್ತು ರಾಜ್ಯ ಶಾಸಕಾಂಗಗಳಲ್ಲಿ ರಹಸ್ಯ ಮತದಾನ ನಡೆಯಿತು. 

211

ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ 2017ರ ಜುಲೈ 25ರಂದು ಅಧಿಕಾರ ವಹಿಸಿಕೊಂಡಿದ್ದು, ಇದೇ ಜುಲೈ 24ರ 2022ರಂದು ಇವರ ಅಧಿಕಾರವಧಿ ಮುಕ್ತಾಯಗೊಳ್ಳಲಿದೆ. ಈ ಹಿನ್ನೆಲೆ ತೆರವು ಆಗಲಿರುವ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಿತು.

311

90 ವರ್ಷದ ಎಚ್‌ಡಿ ದೇವೇಗೌಡ ಅವರಿಗೆ ಇತ್ತೀಚೆಗೆ ಆರೋಗ್ಯ ಸರಿ ಇರಲಿಲ್ಲ. ಇದರಿಂದ ಅವರು ವಿಶ್ರಾಂತಿಯಲ್ಲಿದ್ದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವ್ಹೀಲ್‌ ಚೇರ್‌ನಲ್ಲಿ ಬಂದು ತಮ್ಮ ಹಕ್ಕು ಚಲಾಯಿಸಿದರು.

411

ಇನ್ನೂ  89 ವರ್ಷದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸಂಸತ್ ಭವನಕ್ಕೆ ವ್ಹೀಲ್ ಚೇರ್ ಮೂಲಕ ಬಂದು ಮತವನ್ನು ಹಾಕಿದರು. 

511

ಆರೋಗ್ಯ ಸಮಸ್ಯೆಯಿಂದ ಇತ್ತೀಚೆಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ಸಂಸತ್ ಭವನಕ್ಕೆ ಬಂದು ಮತ ಹಾಕಿದರು.

611

ಮನಮೋಹನ್ ಸಿಂಗ್ ಅವರು ವ್ಹೀಲ್ ಚೇರ್‌ನಲ್ಲಿ ಬಂದಿರುವ ವಿಡಿಯೋ ವೈರಲ್ ಆಗಿದ್ದು, ವೀಡಿಯೋವನ್ನು ಕಾಂಗ್ರೆಸ್‍ನ ಅನೇಕ ನಾಯಕರು ಹಂಚಿಕೊಂಡಿದ್ದು, ಮನಮೋಹನ್ ಸಿಂಗ್ ಅವರು ಆದಷ್ಟು ಬೇಗ ಉತ್ತಮ ಆರೋಗ್ಯವನ್ನು ಮರಳಿ ಪಡೆಯಲಿ. ಅವರನ್ನು ಈ ರೀತಿ ನೋಡಲು ಬೇಸರವಾಗಿದೆ ಎಂದಿದ್ದಾರೆ.

711

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರಿಗೆ ಈಗ  90 ವರ್ಷ. ಆದರೂ ಸಹ ಅವರು ಪಕ್ಷ ಸಂಘಟನೆ ಅಂತ ಓಡಾಡುತ್ತಲೇ ಇರುತ್ತಾರೆ. ಆದ್ರೆ, ಇದುವರೆಗೂ ಅವರು ಸಾರ್ವಜನಿಕವಾಗಿ ವ್ಹೀಲ್ ಚೇರ್‌ ಬಳಸಿಲ್ಲ.ರಾಷ್ಟ್ರಪತಿ ಚುನಾವಣೆಗೆ ಮತ ಹಾಕಲು ಇದೇ ಮೊದಲ ಬಾರಿಗೆ ದೇವೇಗೌಡ ಅವರು ಸಾರ್ವಜನಿಕವಾಗಿ ವ್ಹೀಲ್‌ ಚೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲು ತಮ್ಮ ಸಹಾಯಕ ಸಹಾಯ ಪಡೆದುಕೊಳ್ಳುತ್ತಾರೆ. ಆದ್ರೆ, ವ್ಹೀಲ್ ಚೇರ್ ಉಪಯೋಗಿಸಿರಲಿಲ್ಲ.

 

811

ದೇವೇಗೌಡರ ಜೊತೆ ಮಾಜಿ ಸಚಿವ ಹಾಗೂ ಅವರ ಪುತ್ರ ಎಚ್‌ಡಿ ರೇವಣ್ಣ ಸಹ ಆಗಮಿಸಿ ಮತ ಹಾಕಿದರು. ಎನ್‌ಡಿಎ ಅಭ್ಯರ್ಥಿಗೆ ಜೆಡಿಎಸ್‌ ಬೆಂಬಲ ಘೋಷಿಸಿತ್ತು.

911

ಇಂದು(ಸೋಮವಾರ) ಬೆಳಗ್ಗೆ 10 ಗಂಟೆಯಿಂದಲೇ ಆರಂಭವಾದ ರಾಷ್ಟ್ರಪತಿ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ ಚಲಾಯಿಸಿದರು.

1011

ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷ ಯುಪಿಎ ಮೈತ್ರಿಕೂಟದಿಂದ ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾ ಸ್ಪರ್ಧೆಗೆ ಇಳಿದಿದ್ದಾರೆ. 

1111

ರಾಷ್ಟ್ರಪತಿ ಚುನಾವಣೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸೌಧದಲ್ಲಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು.

Read more Photos on
click me!

Recommended Stories