ದೇಶದ 15ನೇ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ದೇಶಾದ್ಯಂತ ಚುನಾಯಿತ ಸಂಸದರು ಮತ್ತು ಶಾಸಕರು ಸೋಮವಾರ ಮತ ಚಲಾವಣೆ ಮಾಡಿದ್ದಾರೆ. ರಾಜ್ಯದ ಇಬ್ಬರು ಸಂಸದರು ಇಂದು ವಿಧಾನಸೌಧದಲ್ಲಿ ಮತದಾನ ಮಾಡಲು ಪರ್ಮಿಶನ್ ಪಡೆದಿದ್ದಾರೆ. ಅನಾರೋಗ್ಯದ ಕಾರಣ ದೇವೆಗೌಡ, ಶ್ರೀನಿವಾಸ್ ಪ್ರಸಾದ್ ದೆಹಲಿಗೆ ತೆರಳಿಲ್ಲ. ಇಬ್ಬರು ಬೆಂಗಳೂರಿನಲ್ಲೇ ಮತದಾನ ಮಾಡಿದ್ದಾರೆ. ಕಳೆದ ಸಲ ಬಿಜೆಪಿ 17 ಮತಗಳು ಅಸಿಂಧುಗೊಂಡಿದ್ದ ಹಿನ್ನೆಲೆ ಈ ಬಾರಿ ಒಂದೇ ಒಂದು ಮತವೂ ಅಸಿಂಧುವಾಗದಂತೆ ಎಚ್ಚರ ವಹಿಸಲಾಗಿದೆ. ಕೇಸರಿ ಶಾಲು ಹಾಕಿಕೊಂಡು ಬಿಎಂಟಿಸಿ ಬಸ್ ನಲ್ಲಿ ಬಿಎಸ್ ವೈ ,ಸಿಎಂ ಬೊಮ್ಮಾಯಿ ಮತ್ತು ಕೆಲ ಸಚಿವರ ತಂಡ ಮತದಾನ ಮಾಡಲು ತೆರಳಿದ್ದರು.