ಚಿತ್ರಗಳು: ಹೊಸ ವರ್ಷದ ಮಸ್ತಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್
First Published | Dec 31, 2019, 3:57 PM ISTಹೊಸ ವರ್ಷವನ್ನು ಹೊಸ ಜೀವನದೊಂದಿಗೆ ಆರಂಭಿಸಲು ಜನತೆ ಬಯಸುತ್ತದೆ. ಅದು ಮಾನವನ ಸಹಜ ಸ್ವಭಾವ. ಜನರು ಹೊಸತಿನ ಬಗ್ಗೆ ಹೊಸ ವಿಷಯಗಳನ್ನು ನಿರೀಕ್ಷಿಸುತ್ತಾರೆ. ಕಳೆದು ಹೋದ ದಿನಗಳನ್ನು ನೆನೆಯುತ್ತಾ, ಹೊಸ ವರ್ಷಕ್ಕೆ ಸ್ವಾಗತ ಕೋರಲಾಗುತ್ತಿದೆ. ಹೊಸ ವರ್ಷದ ದಿನ ಸ್ನೇಹಿತರು, ಬಂಧು ಬಳಗ, ಪ್ರೀತಿ ಪಾತ್ರರಿಗೆ ಸಂದೇಶ ಕಳುಹಿಸಲು ಇದೇ ಸುಸಮಯ. ಅದರಂತೆ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಕೊಂಚ ರಾಜಕೀಯದಿಂದ ಬಿಡುವು ಮಾಡಿಕೊಂಡು ಕುಟುಂಬದ ಸದಸ್ಯರ ಜತೆ ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡಲು ಟ್ರಿಪ್ ಹೋಗಿದ್ದಾರೆ.