ಅಕ್ರಮ ಮಾಡೋದ್ರಲ್ಲಿ ಡಿ.ಕೆ.ಸಹೋದರರು ನಿಸ್ಸೀಮರು: ಶೋಭಾ ಕರಂದ್ಲಾಜೆ

Kannadaprabha News   | Asianet News
Published : Oct 31, 2020, 08:02 AM IST

ಬೆಂಗಳೂರು(ಅ.31): ಚುನಾವಣೆಯಲ್ಲಿ ಅಕ್ರಮ ಮಾಡುತ್ತಿರುವ ಹಿನ್ನೆಲೆಯಲ್ಲಿ ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ಕಣದಿಂದ ಕಾಂಗ್ರೆಸ್‌ನ ಮುಖಂಡರಾದ ಡಿ.ಕೆ ಸಹೋದರರನ್ನು ಚುನಾವಣಾ ಆಯೋಗವು ಹೊರಹಾಕಬೇಕು ಎಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಒತ್ತಾಯಿಸಿದ್ದಾರೆ.

PREV
14
ಅಕ್ರಮ ಮಾಡೋದ್ರಲ್ಲಿ ಡಿ.ಕೆ.ಸಹೋದರರು ನಿಸ್ಸೀಮರು: ಶೋಭಾ ಕರಂದ್ಲಾಜೆ

ಶುಕ್ರವಾರ ಆರ್‌.ಆರ್‌.ನಗರ ಕ್ಷೇತ್ರದ ಚುನಾವಣಾ ಪ್ರಚಾರ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಮಾಡುತ್ತಿರುವುದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ಹೊರತು ಬಿಜೆಪಿ ಅಭ್ಯರ್ಥಿಯಲ್ಲ. ಅಧಿಕಾರಿಗಳ ವಿರುದ್ಧ ದಬ್ಬಾಳಿಕೆ, ಒತ್ತಡ ಹಾಕುವುದನ್ನು ಮಾಡಬಾರದು. ಅಕ್ರಮ ಮಾಡುವುದರಲ್ಲಿ ಸಹೋದರರು ನಿಸ್ಸೀಮರು. ಹೀಗಾಗಿ ಕ್ಷೇತ್ರಕ್ಕೆ ಅವರು ಬರಬಾರದು. ಮುನಿರತ್ನ ಅವರು ಸಹೋದರರ ವಿರುದ್ಧ ಅ.19ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಆರ್‌.ಆರ್‌.ನಗರ ಕ್ಷೇತ್ರದ ಚುನಾವಣಾ ಅಖಾಡದಿಂದ ಹೊರಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.

24

ಡಿ.ಕೆ ಸಹೋದರರು ಅಕ್ರಮ ಮಾಡುತ್ತಾರೆ ಎಂಬುದನ್ನು ಖುದ್ದು ಅವರ ಪಕ್ಷದ ನಾಯಕ ಜನಾರ್ದನ ಪೂಜಾರಿ ತಿಳಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಅಭಿವೃದ್ಧಿಗೆ ಆದ್ಯತೆ ನೀಡಬೇಕೇ ಹೊರತು ಭಾವನೆಗಳಿಗೆ ಅಲ್ಲ. ಅವರವರ ಮನೆಗಳಲ್ಲಿ ಏನೋ ಘಟನೆಗಳು ನಡೆದಿರುತ್ತವೆ. ಅವುಗಳನ್ನು ಭಾವನಾತ್ಮಕವಾಗಿ ಬಳಸಿಕೊಂಡು ಮತ ಕೇಳೋದು ಸರಿಯಲ್ಲ. ಕ್ಷೇತ್ರದ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಿ ಜನರು ಮತ ನೀಡಬೇಕು ಎಂದರು. 

34

ಆರ್‌.ಆರ್‌.ನಗರ ಮತ್ತು ಶಿರಾ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಆದರೆ, ಕಾಂಗ್ರೆಸ್‌ನವರು ವಾತಾವರಣ ಕೆಡಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾದ ಮೇಲೆ ಮೊದಲ ಚುನಾವಣೆ ನಡೆಯುತ್ತಿದ್ದು, ಅವರ ಅಸ್ತಿತ್ವ ಉಳಿಸಿಕೊಳ್ಳಲು ಅಕ್ರಮಗಳ ಮೇಲೆ ಅಕ್ರಮ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

44

ಅಕ್ರಮವಾಗಿರುವ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸಿರುವ ಬಗ್ಗೆ ವಿಧಾನಪರಿಷತ್‌ ಸದಸ್ಯ ನಾರಾಯಣಸ್ವಾಮಿ ಮಾಹಿತಿ ನೀಡಿದ್ದಾರೆ. ಒಂದು ಸಾವಿರಕ್ಕೂ ಹೆಚ್ಚು ಗುರುತಿನ ಚೀಟಿಗಳನ್ನು ಸಂಗ್ರಹಿಸಿ ಚಿತ್ರೀಕರಣ ಮಾಡಿ ಆಯೋಗಕ್ಕೆ ನೀಡಲಾಗಿದೆ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕರಂದ್ಲಾಜೆ ತಿಳಿಸಿದರು.

click me!

Recommended Stories