ಗುರುವಾರ ಕ್ಷೇತ್ರದ ವಿವಿಧ ಕಡೆಗಳಲ್ಲಿ ಪ್ರಚಾರ ಸಭೆ ನಡೆಸಿದ ಸಂದರ್ಭದಲ್ಲಿ ಹಾಗೂ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ‘ಜಾತಿ ಕಾರ್ಡ್ ಆಯ್ತು, ಈಗ ತಾಯಿ ಕಾರ್ಡ್ ಬಳಸುತ್ತಿದ್ದಾರೆ. ಆ ದಿನ ನಮ್ಮ ನಾಯಕರಾದ ಸಿದ್ದರಾಮಯ್ಯನವರು ನನ್ನ ಜತೆ ಪ್ರಚಾರ ಮಾಡುವ ಸಂದರ್ಭದಲ್ಲಿ, ಪ್ರತಿಸ್ಪರ್ಧಿ ಪಕ್ಷದ ಅಭ್ಯರ್ಥಿಯಾಗಿರುವ ಮುನಿರತ್ನ ಅಣ್ಣನವರು ಹಿಂದೆ ಕಾಂಗ್ರೆಸ್‌ನಲ್ಲಿದ್ದಾಗ, ‘ಕಾಂಗ್ರೆಸ್ ಪಕ್ಷವೇ ತಮ್ಮ ತಾಯಿ, ಉಸಿರು, ತಮ್ಮ ರಕ್ತ ಎಂದಿದ್ದರಂತೆ. ಆದರೆ ಇವತ್ತು ಅದೇ ವ್ಯಕ್ತಿ ತಾಯಿ ಸಮಾನ ಎಂದ ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ’ ಎಂದರು. ಆದರೆ ನಮ್ಮ ಪ್ರತಿಸ್ಪರ್ಧಿ ಅಣ್ಣನವರು ಇದನ್ನು ಯಾಕೆ ತಪ್ಪಾಗಿ ಬಿಂಬಿಸುತ್ತಿದ್ದಾರೋ ಗೊತ್ತಿಲ್ಲ. ಅವರ ತಾಯಿ ಬೇರೆಯಲ್ಲ, ನಮ್ಮ ತಾಯಿ ಬೇರೆಯಲ್ಲ. ಎಲ್ಲರ ತಾಯಿಯೂ ಒಂದೇ. ನಾವು ಅವರನ್ನು ಗೌರವಿಸುತ್ತೇವೆ. ಆದರೂ ಈ ವಿಷಯ ತಿರುಚುತ್ತಿರುವುದು ಆಶ್ಚರ್ಯ ತಂದಿದೆ ಎಂದರು.