ಸಮಾನ ಮನಸ್ಕರು ಕುಪೇಂದ್ರ ರೆಡ್ಡಿಗೆ ಮತ ಹಾಕ್ತಾರೆಂಬ ನಂಬಿಕೆಯಿಂದ ಕುಪೇಂದ್ರ ರೆಡ್ಡಿ ನಿಂತಿದ್ದಾರೆ. ಅವರಿಗೆ ಒಳ್ಳೇದಾಗುತ್ತೆ. ನಾಲ್ಕು 6 ಮೇಲೆ ಗೊತ್ತಾಗುತ್ತೆ. ಎಷ್ಟು ಆತ್ಮಸಾಕ್ಷಿ ಮತಗಳು ಬರ್ತವೆ ಅಂತ ನಾನು ಹೇಳಲ್ಲ. ಒಂಭತ್ತು ತಿಂಗಳಿಂದ ಏನೂ ಕೆಲಸ ಆಗಿಲ್ಲ, ನಮಗೆ ಮತ ಹಾಕಿ ಅಂತ ಕಾಂಗ್ರೆಸ್ ನವ್ರಿಗೆ ಕೇಳಿದೀವಿ ಅಂತ ತಿಳಿಸಿದ್ದಾರೆ.
ನಾವು ಎಲ್ಲಿ ಇರ್ತಿವೋ ಅಲ್ಲಿಗೆ ನಿಷ್ಠೆಯಿಂದ ಇರಬೇಕು. ನಾನು ಬಿಜೆಪಿಗೆ ಮತ ಹಾಕುವೆ. ನಾವು ಇಲ್ಲಿರ್ತಿವೋ ಅಲ್ಲಿಗೆ ಕೃತಜ್ಞತೆ ಇರಬೇಕು ಎಂದು ಹೇಳುವ ಮೂಲಕ ತಮ್ಮ ಸ್ನೇಹಿತರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಅವರಿಗೆ ಮುನಿರತ್ನ ತಿರುಗೇಟು ಕೊಟ್ಟಿದ್ದಾರೆ.
ಇನ್ನು ಸಚಿವ ಭೈರತಿ ಬಸವರಾಜ, ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್, ಸಚಿಬ ಈಶ್ವರ್ ಖಂಡ್ರೆ ಸೇರಿದಂತೆ ಮತ್ತಿತರ ನಾಯಕರು ಮತ ಹಾಕುವ ಮೂಲಕ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಸಿರ್ ಹುಸೇನ್, ಜಿ.ಸಿ.ಚಂದ್ರಶೇಖರ್, ಅಜಯ್ ಮಾಕನ್, ಬಿಜೆಪಿಯಿಂದ ನಾರಾಯಣಸಾ ಕೆ.ಭಾಂಡಗೆ ಮತ್ತು ಜೆಡಿಎಸ್‌ನಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ. ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಬವರು ಅಭ್ಯರ್ಥಿಗಳು ಕಣದಲ್ಲಿರುವುದ ರಿಂದ ಚುನಾವಣಾ ಕಣ ರಂಗೇರಿದೆ. ಐದನೇ ಅಭ್ಯರ್ಥಿಯಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಕುಪೇಂದ್ರರೆಡ್ಡಿ ಗೆಲುವಿಗೆ ಉಭಯ ಪಕ್ಷಗಳು ತೆರೆಮರೆಯಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಒಟ್ಟಿಗೆ ಮತದಾನಕ್ಕೆ ತೆರಳಿ ಮತದಾನ ಮಾಡಿದ್ದಾರೆ.
ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡಿ ಪಕ್ಷಕ್ಕೆ ದೊಡ್ಡ ಶಾಕ್ ಕೊಟ್ಟಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿ ಬಿಜೆಪಿ ವಿಪ್ ಉಲ್ಲಂಘಟನೆ ಮಾಡಿದ್ದಾರೆ. ಅನೇಕ ದಿನಗಳಿಂದ ಬಿಜೆಪಿ ನಾಯಕರು ಎಸ್‌ಟಿ ಸೋಮಶೇಖರ್ ಅವರಿಂದ ಅಂತರ ಕಾಯ್ದುಕೊಂಡಿದ್ದರು. ಶಿಕ್ಷಕರ ಉಪ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಮತದಾನ ಮಾಡಿ ಬಿಜೆಪಿಗೆ ಭಾರೀ ಮುಜುಗರಕ್ಕೆ ಕಾರಣವಾಗಿದ್ದರು. ಎಸ್‌ಟಿಎಸ್ ಅಡ್ಡ ಮತದಾನ ಮಾಡಿರುವ ಪರಿಣಾಮ ಬಿಜೆಪಿ ಮುಂದೇನು ನಿರ್ಧಾರ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ. ವಿಪ್ ಉಲ್ಲಂಘನೆ ಮಾಡಿರುವ ಕಾರಣ ಸ್ಪೀಕರ್ ಗೆ ದೂರು ನೀಡುವ ಸಾಧ್ಯತೆ ಇದೆ.
ಮತನದಾನಕ್ಕೂ ಮುನ್ನ ಮಾತನಾಡಿದ್ದ ಎಸ್ ಟಿ ಸೋಮಶೇಖರ್ ಅವರು, ಅಭಿವೃದ್ಧಿಗೆ ಅನುದಾನ ಕೊಡುವ ಅಭ್ಯರ್ಥಿಗೆ ನನ್ನ ಮತ ಎಂದಿದ್ದರು. ಮತದಾನದ ಬಳಿಕ ಯಾರು ಅಸಮಧಾನ ಆದ್ರೆ ನನಗೇನು ನಾನು ಆತ್ಮಸಾಕ್ಷಿಗೆ ಮತ ಹಾಕ್ತಿನಿ. ವೋಟ್ ಆದ ಮೇಲೆ ಯಾರಿಗೆ ಅಂತ ನಿಮಗೇ ಗೊತ್ತಾಗುತ್ತೆ. ಕಾಂಗ್ರೆಸ್ ಜೊತೆಗಿನ ಸಂಬಂಧ ಈಗ ಹೊಸದಾಗಿ ಅಲ್ಲ, ಒಂದು ವರ್ಷದಿಂದ ಇದೆ. ಶೌಚಾಲಯ ಬಳಕೆಗೆ ಡಿಕೆಶಿ ಕಚೇರಿಗೆ ಹೋಗಿದ್ದೆ. ನಾನು ಹೋಗಿದ್ದಾಗ ಡಿಕೆಶಿ ಅವರು ಇರಲಿಲ್ಲ. ನಾನು ಮತ ಹಾಕಿದ ಮೇಲೆ ಗೊತ್ತಾಗತ್ತೆ ಯಾರಿಗೆ ಹಾಕಿದೆ ಅನ್ನೋದು. ವಿಪ್ ಉಲ್ಲಂಘನೆ, ಉಚ್ಚಾಟನೆ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದಿದ್ದರು.
ಮತದಾನದ ಬಳಿಕವೂ ಆತ್ಮಸಾಕ್ಷಿಯ ಮತ ಹಾಕಿದ್ದೇನೆ. ಯಾರಿಗೆ ಮತ ತೋರಿಸ ಬೇಕಿತ್ತೊ ಅವರಿಗೆ ತೋರಿಸಿ ಮತ ಹಾಕಿದ್ದೇನೆ. ನನ್ನ ಕಾಂಗ್ರೆಸ್ ನಾಯಕರು ಯಾರೂ ಸಂಪರ್ಕ ಮಾಡಿರಲಿಲ್ಲ ಎಂದು ಮತದಾನ ಮಾಡಿ ಬಿಜೆಪಿ ಶಾಸಕಾಂಗ ಕಚೇರಿಗೂ ಹೋಗದೆ ನೇರವಾಗಿ ತೆರಳಿದರು. ಇಷ್ಟೆಲ್ಲ ಗೊಂದಲ ಸೃಷ್ಟಿಸಿದ ಸೋಮಶೇಖರ್ ಕೊನೆಗೂ ನಿರೀಕ್ಷೆಯಂತೆಯೇ ಅಡ್ಡ ಮತದಾನ ಹಾಕಿ ಬಿಜೆಪಿ ವಿಪ್ ಉಲ್ಲಂಘನೆ ಮಾಡಿದ್ದಾರೆ.
ಎಸ್.ಟಿ.ಸೋಮಶೇಖರ್ ಅಡ್ಡ ಮತದಾನದ ಬಳಿಕ ಬಿಜೆಪಿಗೆ ಭೀತಿ ಎದುರಾಗಿದೆ. ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಮೇಲೆ ಕೂಡ ಅಡ್ಡ ಮತದಾನದ ಅನುಮಾನ ಇದೆ. ಬಿಜೆಪಿ ಮೇಲೆ ಅಸಮಾಧಾನ ಹೊಂದಿರುವ ಹೆಬ್ಬಾರ್ ಅವರ ನಿರ್ಧಾರ ಏನಾಗಿರಬಹುದು ಎಂಬ ನಿಗೂಢತೆ ಇನ್ನೂ ಹಾಗೆಯೇ ಇದೆ.