ಶಿಕ್ಷಣ ರಂಗಕ್ಕೆ ಮೋದಿ, ಬಿಎಸ್‌ವೈರಿಂದ ಹೊಸ ರೂಪ: ಸಚಿವ ಸೋಮಣ್ಣ

Kannadaprabha News   | Asianet News
Published : Oct 21, 2020, 08:17 AM IST

ಬೆಂಗಳೂರು(ಅ.21): ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶಿಕ್ಷಣ ರಂಗಕ್ಕೆ ಹೊಸ ಚಿಂತನೆ ಮತ್ತು ಯೋಜನೆಯನ್ನು ರೂಪಿಸಿದ್ದಾರೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

PREV
14
ಶಿಕ್ಷಣ ರಂಗಕ್ಕೆ ಮೋದಿ, ಬಿಎಸ್‌ವೈರಿಂದ ಹೊಸ ರೂಪ: ಸಚಿವ ಸೋಮಣ್ಣ

ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಸವೇಶ್ವರ ನಗರದಲ್ಲಿ ವಿಜಯನಗರ ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಶಿಕ್ಷಕರು, ಪ್ರಾಂಶುಪಾಲರ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳ ಸಭೆ ನಡೆಸಲಾಯಿತು. ಸಭೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಪುಟ್ಟಣ್ಣ ಪರವಾಗಿ ಮತಯಾಚಿಸಲಾಯಿತು.

24

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣದಲ್ಲಿ ಸರಿಯಾದ ಶಿಕ್ಷಣ ದೊರೆತರೆ ಉತ್ತಮ ಪ್ರಜೆಯಾಗುತ್ತಾನೆ. ತಂದೆ-ತಾಯಿಗಿಂತ ಗುರುವು ದೇವರ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಹೇಳಿದ  ಸಚಿವ ವಿ.ಸೋಮಣ್ಣ 

34

ಬಿಜೆಪಿ ಅಭ್ಯರ್ಥಿ ಪುಟ್ಟಣ್ಣ ಮಾತನಾಡಿ, ನನಗೆ ಈ ಬಾರಿ ಆನೆ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಚಿವ ಸೋಮಣ್ಣ ಮತ್ತು ಶಿಕ್ಷಕರ ಆಶೀರ್ವಾದದಿಂದ ಗೆಲುವು ಸುಲಭ. ಶೇ.100ರಷ್ಟುಕೆಲಸ ಮಾಡಿದ್ದೇನೆ. ಪಾರದರ್ಶಕವಾಗಿ ನಡೆಸಿಕೊಂಡಿದ್ದೇನೆ. ಶಾಲಾ ಶಿಕ್ಷಕರ ನೇಮಕಾತಿ ಮತ್ತು ಸಮಸ್ಯೆಗಳ ಪರ ಹೋರಾಟ ಮಾಡಿದ್ದೇನೆ. ಶಾಲಾ ಶಿಕ್ಷಕರಿಗೆ ನೌಕರಿಯಲ್ಲಿ ಬಡ್ತಿ ಮತ್ತು ವಿಮಾ ಸೌಲಭ್ಯ, ವೇತನ ಹೆಚ್ಚಳ ಬಗ್ಗೆ ಮತ್ತು ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದರು.

44

ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಬಿಬಿಎಂಪಿಯಲ್ಲಿ ಹೊರಗುತ್ತಿಗೆ 637 ಶಿಕ್ಷಕರಿಗೆ ಸಮಾನ ವೇತನ ಅಡಿಯಲ್ಲಿ 35 ಸಾವಿರ ವೇತನ ನೀಡಬೇಕು ಎಂದು ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಬಿಜೆಪಿ ಸರ್ಕಾರವು ಶಿಕ್ಷಕರ ಪರವಾಗಿ ಇರುತ್ತದೆ ಎಂದ ಪಕ್ಷದ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್‌.ಆರ್‌.ರಮೇಶ್‌ 

click me!

Recommended Stories