ರಮೇಶ ಜಾರಕಿಹೊಳಿ ನಿವಾಸದಲ್ಲಿ ಮಹತ್ವದ ಸಭೆ: ವಿಶ್ವನಾಥ್‌, ಯೋಗೇಶ್ವರ್‌ ಸಚಿವ ಸ್ಥಾನದ ಬಗ್ಗೆ ಚರ್ಚೆ

First Published | Jul 25, 2020, 10:18 AM IST

ಬೆಂಗಳೂರು(ಜು.25):  ರಾಜ್ಯ ರಾಜಕಾರಣದ ಪ್ರಸ್ತುತ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸುವ ಸಂಬಂಧ ಜಲಸಂಪನನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸದಲ್ಲಿ ಇಂದು(ಶನಿವಾರ) ಮಹತ್ವದ ಸಭೆ ನಡೆದಿದೆ. ಮಾಜಿ ಸಚಿವ ಹೆಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್‌ಗೆ ಪರಿಷತ್ ಸ್ಥಾನ ಸಿಕ್ಕ ಕುರಿತು ಚರ್ಚೆ ನಡೆದಿದೆ ಎಂದು  ಹೇಳಲಾಗುತ್ತಿದೆ. 

ಹೆಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ್‌ ಇಬ್ಬರಿಗೂ ಸಚಿವ ಸ್ಥಾನ ನೀಡಬೇಕಾದ ಅಗತ್ಯತೆ ಬಗ್ಗೆ ಸಮಾಲೋಚನೆ
ಕೇಂದ್ರ ಸರ್ಕಾರದ ಬಳಿ ಇರುವ ನೀರಾವರಿ ಯೋಜನೆ ಕುರಿತಾದ ಆರ್ಥಿಕ ಪ್ರಸ್ತಾಪಗಳ ಕುರಿತು ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
Tap to resize

ಮುಂದಿನ ಸಚಿವ ಸಂಪುಟ ವಿಸ್ತರಣೆ ವೇಳೆ ಅವಕಾಶ ಯಾರಿಗೆ ಸಿಗಬಹುದು ಎಂಬ ಬಗ್ಗೆಗೂ ಸಹ ಸಮಾಲೋಚನೆ ನಡೆಸಲಾಗಿದೆ.
ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡ ಸಿ.ಪಿ. ಯೊಗೇಶ್ವರ್ ಭಾಯಿಯಾಗಿದ್ದರು.

Latest Videos

click me!