ಕಾಂಗ್ರೆಸ್‌ಗೆ ನೆರವಾಗಲು ಬೆಳಗಾವಿಗೆ ಸಂಜಯ ರಾವುತ್‌: ಫಡ್ನವೀಸ್‌

Kannadaprabha News   | Asianet News
Published : Apr 16, 2021, 11:57 AM IST

ಬೆಳಗಾವಿ(ಏ.16): ಎಂಇಎಸ್‌ ಬೆಂಬಲಿತ ಅಭ್ಯರ್ಥಿ ಪರ ಪ್ರಚಾರದ ನೆಪದಲ್ಲಿ ಕಾಂಗ್ರೆಸ್‌ಗೆ ಸಹಾಯ ಮಾಡಲು ಶಿವಸೇನೆ ವಕ್ತಾರ ಸಂಜಯ ರಾವುತ್‌ ಬೆಳಗಾವಿಗೆ ಆಗಮಿಸಿದ್ದರು ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಆರೋಪಿಸಿದ್ದಾರೆ.

PREV
14
ಕಾಂಗ್ರೆಸ್‌ಗೆ ನೆರವಾಗಲು ಬೆಳಗಾವಿಗೆ ಸಂಜಯ ರಾವುತ್‌: ಫಡ್ನವೀಸ್‌

ತಾಲೂಕಿನ ಹಿಂಡಲಗಾ ಗ್ರಾಮದಲ್ಲಿ ಗುರುವಾರ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಪರ ಪ್ರಚಾರ ನಡೆಸಿದ ದೇವೇಂದ್ರ ಫಡ್ನವೀಸ್‌ 

24

ಸಂಜಯ ರಾವುತ್‌ ಅವರದ್ದು ಎಂಇಎಸ್‌ ಹೆಗಲ ಮೇಲೆ ಗನ್‌ ಇಟ್ಟು ಬಿಜೆಪಿ ಹೊಡೆಯುವ ಕುತಂತ್ರ. ಮಹಾರಾಷ್ಟ್ರದಲ್ಲಿ ಶಿವಸೇನೆ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಟಿಪ್ಪು ಸುಲ್ತಾನ್‌ ಜಯಂತಿ ಆಚರಿಸುವ ಕಾಂಗ್ರೆಸ್‌ ಜೊತೆ ಶಿವಸೇನೆ ಕೈಜೋಡಿಸಿದೆ ಎಂದು ದೂರಿದ್ದಾರೆ.

34

ಕರ್ನಾಟಕದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಟಿಪ್ಪು ಜಯಂತಿ ರದ್ದುಗೊಳಿಸಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಆಝಾನ್‌ ಸ್ಪರ್ಧೆ ಆಯೋಜಿಸಿದೆ. ಶಿವಸೇನೆಯ ಉರ್ದು ಕ್ಯಾಲೆಂಡರ್‌ನಲ್ಲಿ ಬಾಳಾಠಾಕ್ರೆ ಬದಲು ಜನಾಬ್‌ ಬಾಳಾಠಾಕ್ರೆ ಎಂದು ಬರೆದಿದ್ದಾರೆ. ಮರಾಠಿ ಭಾಷಿಕರು ಅಮಾಯಕರೇ ಹೊರತು ಮೂರ್ಖರಲ್ಲ. ಉಪಚುನಾವಣೆಯಲ್ಲಿ ಎಂಇಎಸ್‌ ಮತ್ತು ಸಂಜಯ ರಾವುತ್‌ಗೆ ಬೆಳಗಾವಿ ಮರಾಠಿ ಭಾಷಿಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದ ಫಡ್ನವೀಸ್‌

44

ಬೆಳಗಾವಿ ಮರಾಠಿ ಭಾಷಿಕರ ಮೇಲೆ ರಾವುತ್‌ ನಕಲಿ ಪ್ರೀತಿ ತೋರಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊರೋನಾ ಸೋಂಕಿತರು ಆಕ್ಸಿಜನ್‌, ಬೆಡ್‌ ಇಲ್ಲದೆ ಸಾಯುತ್ತಿದ್ದಾರೆ. ಅಲ್ಲಿನ ಮರಾಠಿ ಭಾಷಿಕರ ಮೇಲೆ ಇಲ್ಲದ ಕಾಳಜಿ ಬೆಳಗಾವಿ ಮರಾಠಿ ಭಾಷಿಕರ ಮೇಲೆ ಏಕಿದೆ? ಇಲ್ಲಿನ ಮರಾಠಿ ಭಾಷಿಕರ ಮೇಲೆ ಸಂಜಯ ರಾವುತ್‌ರದು ನಕಲಿ ಪ್ರೀತಿ. ಶಿವಾಜಿ ಮಹಾರಾಜರ ತತ್ವದಡಿ ನರೇಂದ್ರ ಮೋದಿ ಆಡಳಿತ ನಡೆಸುತ್ತಿದ್ದಾರೆ. ಭಾರತಕ್ಕೆ ಮೋದಿಯಂಥ ನಾಯಕನ ನೇತೃತ್ವ ಅಗತ್ಯವಿದೆ ಎಂದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories