ಬೈ ಎಲೆಕ್ಷನ್ ಸೋಲಿನ ಬಳಿಕ ವಿಶೇಷ ಸ್ಥಳಕ್ಕೆ ಡಿಕೆ ಶಿವಕುಮಾರ್ ಭೇಟಿ

First Published | Nov 13, 2020, 6:58 PM IST

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲುಕಂಡಿದೆ. ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಅಗ್ನಿ ಪರೀಕ್ಷೆಯಲ್ಲಿ ಮುಖಭಂಗ ಅನುಭವಿಸಿರುವ ಡಿಕೆ ಶಿವಕುಮಾರ್ ವಿಶೇಷ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ರಾಜರಾಜೇಶ್ವರಿ ನಗರ ಹಾಗೂ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಮ್ಮ ವಿಶೇಷ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕನಕಪುರದ ಕಬ್ಬಾಳಮ್ಮ ದೇವಸ್ಥಾನಕ್ಕೆ ಡಿ‌.ಕೆ.ಶಿವಕುಮಾರ್ ಕುಟುಂಬ ಸಮೇತರಾಗಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.
Tap to resize

ಸಾತನೂರು ಸಮೀಪದ ಕಬ್ಬಾಳಮ್ಮ ಡಿಕೆ ಶಿವಕುಮಾರ್‌ ಕುಟುಂಬದ ಮನೆ ದೇವರು.
ಸಂಕಷ್ಟ ಬಂದಾಗ ಡಿಕೆ ಶಿವಕುಮಾರ್‌ ಅವರು ಹೆಚ್ಚಾಗಿ ಕಬ್ಬಾಳಮ್ಮ ಮೊರೆ ಹೋಗುತ್ತಾರೆ.
ಸಾತನೂರು ಸಮೀಪದ ಕಬ್ಬಾಳಮ್ಮ ಡಿಕೆಶಿ ಕುಟುಂಬದ ಮನೆ ದೇವರು. ಡಿಕೆಶಿ ಈ ದೇಗುಲಕ್ಕೆ ಹೆಚ್ಚು ಬಾರಿ ಭೇಟಿ ನೀಡಿದ್ದುಂಟು
ಈಗ ತಮ್ಮ ನೇತೃತ್ವದಲ್ಲಿ ನಡೆದಎರಡೂ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತಿರುವುದರಿಂದ ಹಾಗೂ ಮುಂಬರುವ ಬೈ ಎಲೆಕ್ಷನ್‌ನಲ್ಲಿ ಗೆಲ್ಲಿಸುವಂತೆ ಕಬಾಳಮ್ಮನ ಮೊರೆ ಹೋಗಿದ್ದಾರೆ.

Latest Videos

click me!