ಮತ್ತೆರೆಡು ಉಪಚುನಾವಣೆಗೆ ಬಿಜೆಪಿ ಸಜ್ಜು, ಅಖಾಡಕ್ಕಿಳಿದ ಉಸ್ತುವಾರಿಗಳು..!

First Published | Nov 13, 2020, 2:48 PM IST

ಶಿರಾ ಹಾಗೂ ರಾಜರಾರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತ್ತು ವಿಧಾನಪರಿಷತ್ ನಾಲ್ಕು ಸ್ಥಾನಗಳಲ್ಲಿ ಗೆದ್ದು ಆತ್ಮ ವಿಶ್ವಾಸದಿಂದ ಬೀಗುತ್ತಿರುವ ಆಡಳಿತಾರೂಢ ಬಿಜೆಪಿ ಇದೀಗ ಮುಂಬರುವ ಮತ್ತೆರೆಡು ಉಪಚುನಾವಣೆಯ ಮೇಲೆ ಕಣ್ಣಿಟ್ಟಿದೆ. ಕ್ಷೇತ್ರಗಳನ್ನೂ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ಈಗಾಗಲೇ ಕ್ಷೇತ್ರಗಳಲ್ಲಿ ಸದ್ದಿಲ್ಲದೆ ಕಾರ್ಯತಂತ್ರ ಹೆಣೆಯುವತ್ತ ಗಮನ ಹರಿಸಿದೆ.
ಮೂರು ಕಡೆ ಬೂತ್ ಮಟ್ಟದ ಕಾರ್ಯಕರ್ತರ ಸಭೆ, ಜಾತಿ ಮುಖಂಡರ ಸಮಾವೇಶ, ಅನ್ಯ ಪಕ್ಷಗಳ ಸೆಳೆಯುವುದು ಸೇರಿದಂತೆ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಲು ರಣತಂತ್ರ ಹೆಣೆದಿದೆ.

ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಶಿರಾ ಉಪಚುನಾವಣೆಯಲ್ಲಿ ಪಕ್ಷವನ್ನ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದು, ಇದೀಗ ಮತ್ತೆರೆಡು ಬೈ ಎಲೆಕ್ಷನ್ ಅಖಾಡಕ್ಕಿಳಿದಿದ್ದಾರೆ.
undefined
ಕಾಂಗ್ರೆಸ್ ಶಾಸಕ ನಾರಾಯಣರಾವ್ ನಿಧನದಿಂದ ತೆರವಾಗಿರುವ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಇದರಿಂದ ಬಿವೈ ವಿಜಯೇಂದ್ರ ಬಸವಕಲ್ಯಾಣದತ್ತ ಪ್ರಯಾಣ ಬೆಳೆಸಿದರು.
undefined

Latest Videos


ಶಿರಾ ರೀತಿಯಲ್ಲಿ ಬಸವಕಲ್ಯಾಣದಲ್ಲಿ ಬಿಜೆಪಿ ಹೆಲುವಿಗೆ ಕಾರ್ಯತಂತ್ರಗಳನ್ನ ರೂಪಿಸಲು ಪಕ್ಷದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.
undefined
ಇನ್ನು ರಾಯಚೂರು ಜಿಲ್ಲೆಯ ಮಸ್ಕಿಗೂ ಸಹ ಉಪಚುನಾವಣೆ ನಡೆಯಬೇಕಿದ್ದು, ಇದಕ್ಕೆರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಉಸ್ತುವಾರಿ ವಹಿಸಿಕೊಂಡಿದ್ದಾರೆ.
undefined
ಅದರಂತೆ ರವಿ ಕುಮಾರ್ ಅವರು ಪೂರ್ವ ಸಿದ್ಧತೆ ಮಾಡಿಕೊಳ್ಳು ಮಸ್ಕಿ ಕ್ಷೇತ್ರಕ್ಕೆ ಬಂದಿಳಿದಿದ್ದು, ಇವರನ್ನ ಬಿಜೆಪಿ ಸಂಭವಿಯ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಅವರ ಬೆಂಬಲಿಗರು ಸ್ವಾಗತಿಸಿದರು.
undefined
click me!