ಒಂದು ಸರ್ಕಾರವನ್ನ ಬೀಳಿಸುವಷ್ಟು ಜ್ಯೋತಿರಾದಿತ್ಯ ಸಿಂಧಿಯಾ ಸ್ಟ್ರಾಂಗ್ ನಾ..? ಇವರ ಹಿನ್ನೆಲೆ ಏನು?
First Published | Mar 11, 2020, 8:04 PM ISTಕಾಂಗ್ರೆಸ್ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಅಷ್ಟು ಬೇಗ ಬಿಜೆಪಿ ಬಾಗಿಲು ತೆರೆದದ್ದು ಹೇಗೆ? ಸಾಮಾನ್ಯವಾಗಿ ಬಿಜೆಪಿ ಬೇರೆ ಪಕ್ಷಗಳಿಂದ ಬರುವ ನಾಯಕರ ಸಂಪೂರ್ಣ ಮೌಲ್ಯಮಾಪನ ಮಾಡದೆ ಸೇರಿಸಿಕೊಳ್ಳುವುದಿಲ್ಲ. ಲಾಭವಾಗುವುದಾದರೆ ಮಾತ್ರ ಹೀಗೆ ಹೊರಗಿನಿಂದ ಬರುವ ನಾಯಕರಿಗೆ ಬಿಜೆಪಿಯಲ್ಲಿ ಆಯಕಟ್ಟಿನ ಸ್ಥಾನ ಸಿಗುತ್ತದೆ. ಆದರೆ ಸಿಂಧಿಯಾ ಕಾಂಗ್ರೆಸ್‌ನಿಂದ ಹೊರಬಂದ ಮರುದಿನವೇ ಬಿಜೆಪಿ ಸದಸ್ಯರಾಗಿದ್ದಾರೆ ಮಾತ್ರವಲ್ಲದೆ ಅವರಿಗೆ ರಾಜ್ಯಸಭೆ ಚುನಾವಣೆಯ ಟಿಕೆಟ್ ಕೂಡ ಸಿಕ್ಕಿದೆ. . ಹಾಗಾದ್ರೆ ಜ್ಯೋತಿರಾದಿತ್ಯ ಸಿಂಧಿಯಾ ಅಷ್ಟೊಂದು ಸ್ಟ್ರಾಂಗ್ ನಾ..? ಯಾರು ಈ ಜ್ಯೋತಿರಾದಿತ್ಯ ಸಿಂಧಿಯಾ? ಇವರ ಹಿನ್ನೆಲೆ ಏನು..?