ನಮಸ್ಕಾರ, ಶ್ರೀ ಕನಕದಾಸರು ಮತ್ತು ಶ್ರೀ ಸಂತ ಶಿಶುನಾಳರು ಹುಟ್ಟಿದ ಶಿಗ್ಗಾವಿ ತಾಲೂಕಿನಿಂದಲೆ ಪ್ರಚಾರ ಶುರು ಮಾಡುತ್ತಿರುವುದು ನಿಜಕ್ಕೂ ಹೆಮ್ಮೆ ಮತ್ತು ಸಂತೋಷದ ಸಂಗತಿ. ಎಲ್ಲರಿಗೂ ಶುಭವಾಗಲಿ - ಸುದೀಪ್ ಟ್ವೀಟ್
ಹಾವೇರಿಯಲ್ಲಿ ಚನ್ನಮ್ಮ ಪ್ರತಿಮೆಗೆ ಹಾರ ಹಾಕಿದ ಸುದೀಪ್ ಬಸವರಾಜ್ ಬೊಮ್ಮಾಯಿ ಕೈ ಹಿಡಿದು ಮೇಲಕ್ಕೆತ್ತಿ ಮೆರವಣಿಗೆಗೆ ಚಾಲನೆ ನೀಡಿದರು. ಜೆಪಿ ನಡ್ಡಾ ಕೂಡ ಪ್ರತಿಮೆಗೆ ಮಾಲೆ ಹಾಕಿದರು.
ರೋಡ್ ಶೋ ಸಾಗುವ ಅಕ್ಕಪಕ್ಕ ಬಿಲ್ಡಿಂಗ್ ಮೇಲೆ ಜನಸಾಗರ. ಸುದೀಪ್ ನೋಡಲು ಆಗಮಿಸಿದ ಸಹಸ್ರಾರು ಕಾರ್ಯಕರ್ತರು. ಬಿಲ್ಡಿಂಗ್ ಮೇಲೆ ನಿಂತು ಕೈ ಬೀಸುತ್ತಿರುವ ಕಾರ್ಯಕರ್ತರು
ಶಿಗ್ಗಾವಿ ತಹಶಿಲ್ದಾರ್ ಕಚೇರಿಯಲ್ಲಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಸಿದರು. ಈ ವೇಳೆ ಬೊಮ್ಮಾಯಿಗೆ ನಟ ಸುದೀಪ್, ನಡ್ಡಾ ಸಾಥ್ ನೀಡಿದರು.
ರೋಡ್ ಶೋ ಗೆ ರೆಸ್ಪಾನ್ಸ್ ಹೇಗಿತ್ತು ತಾವೇ ನೋಡಿದಿರಿ. ಜನ ನನ್ನನ್ನು ದಾಖಲೆ ಮತಗಳಿಂದ ಆರಿಸಿ ಕಳಿಸುವ ತೀರ್ಮಾನ ಮಾಡಿದ್ದಾರೆ. ಇದು ವಿಜಯೋತ್ಸವದ ತರ ಆಗಿದೆ. ಇದು ನನಗೆ ಬಹಳಷ್ಟು ಶಕ್ತಿ ನೀಡಿದೆ. ಇಂದಿನ ಜನ ಬೆಂಬಲ ಬಿಜೆಪಿ ಅಧಿಕಾರಕ್ಕೆ ತರಲು ಅನುಕೂಲ ಆಗಲಿದೆ. ನನ್ನ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿಗೆ ಜನ ಬೆಂಬಲ ಸಿಕ್ಕಿದೆ. - ಸಿಎಂ ಬೊಮ್ಮಾಯಿ
ಸುದೀಪ್ ಅವರು ಸೂಪರ್ ಸ್ಟಾರ್, ನನ್ನ ಆತ್ಮೀಯರು, ಯುವಕರಾಗಿದ್ದನಿಂದಲೂ ಅವರ ಸಂಬಂಧ ಇದೆ. ಬಹಳಷ್ಟು ದೊಡ್ಡ ಬೆಂಬಲ ಸಿಕ್ಕಿದೆ - ಸಿಎಂ ಬೊಮ್ಮಾಯಿ