ವರುಣಾದಲ್ಲಿ ಸಿದ್ದರಾಮಯ್ಯ ಹವಾ, ತಾತನ ಜೊತೆ ಮೊಮ್ಮಗನ ರಾಜಕೀಯ ಕ್ರೇಜ್ ನೋಡಿ!

Published : Apr 19, 2023, 03:42 PM ISTUpdated : Apr 19, 2023, 03:56 PM IST

ಮೈಸೂರು (ಏ.19): ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ ಅವರ ಪುತ್ರ ಧವನ್ ರಾಕೇಶ್ ರಾಜಕೀಯದ ಬಗ್ಗೆ ಆಸಕ್ತಿ ಹೊಂದಿದ್ದು, ತನ್ನ ತಾತನ ಜೊತೆಗೆ ತನ್ನ ತವರು ಸಿದ್ದರಾಮನಹುಂಡಿಯಲ್ಲಿ ಕಾಣಿಸಿಕೊಂಡರು. ಸಿದ್ದರಾಮಯ್ಯ ಮತ್ತು ಅವರ ಮೊಮ್ಮಗ ಧವನ್ ರಾಕೇಶ್ ರನ್ನು ನೋಡಲು ಊರಿನ ಜನ ಮುಗಿಬಿದ್ದರು. ಸಿದ್ದರಾಮಯ್ಯ ಅವರ ಪತ್ನಿ ಮತ್ತು ಸೊಸೆ ಸ್ಮಿತಾ ಕೂಡ ಈ ಸಂದರ್ಭದಲ್ಲಿ ಜೊತೆಗಿದ್ದರು.

PREV
19
ವರುಣಾದಲ್ಲಿ ಸಿದ್ದರಾಮಯ್ಯ ಹವಾ, ತಾತನ ಜೊತೆ ಮೊಮ್ಮಗನ ರಾಜಕೀಯ ಕ್ರೇಜ್ ನೋಡಿ!

ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಿದ್ದರಾಮಯ್ಯ ಮೊಮ್ಮಗ ಧವನ್ ಮಾತನಾಡಿ,  ನನ್ನ ಸ್ವ ಇಚ್ಛೆಯಿಂದ ರಾಜಕಾರಣಕ್ಕೆ ಬರುತ್ತಿದ್ದೇನೆ. ನನ್ನ ರಾಜಕೀಯ ಪ್ರವೇಶ ಮನೆಯವರೆಲ್ಲರಿಗೂ ಖುಷಿ ಕೊಟ್ಟಿದೆ ಎಂದರು.

29

ವರುಣದಲ್ಲಿ ಸಿದ್ದರಾಮಯ್ಯ ಜೊತೆ ಕಾರು ಏರಿದ ಧವನ್ ರಾಕೇಶ್ ಕಾರಿನ ಮೇಲೆ ನಿಂತು ಜನರತ್ತ ಕೈ ಬೀಸಿದರು. ಕಾರಿನ ಒಳಗೆ ಕುಳಿತು ಮೊಮ್ಮಗನನ್ನು ನೋಡಿ ಸಿದ್ದರಾಮಯ್ಯ ಖುಷಿ ಪಟ್ಟರು.

39

ತಾತನ ಪರವಾಗಿ ಪ್ರಚಾರ ಮಾಡುತ್ತೇನೆ. ನಾಮಪತ್ರ ಸಲ್ಲಿಕೆ ವೇಳೆ ಕೂಡ ಭಾಗವಹಿಸುತ್ತೇನೆ. ತಾತ ಅವರಿಗೆ ವೋಟ್ ಕೊಡಿ ಅಂತ ಎಲ್ಲರನ್ನು ಕೇಳಿಕೊಳ್ಳುತ್ತೇನೆ - ಧವನ್ ರಾಕೇಶ್

49

ಮೊದಲಿನಿಂದಲೂ ನನಗೆ ರಾಜಕೀಯ ಅಂದ್ರೆ ಆಸಕ್ತಿ. ತಂದೆ ರಾಕೇಶ್ ಮನೆಯಲ್ಲಿ ರಾಜಕೀಯದ ಬಗ್ಗೆ ಮಾತನಾಡುವಾಗ ಆಸಕ್ತಿಯಿಂದ ಕೇಳುತ್ತಿದ್ದೆ - ಧವನ್ ರಾಕೇಶ್

59

ನನ್ನ ತಂದೆಯನ್ನ ಸದಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಚಿಕ್ಕಪ್ಪ ಯತೀಂದ್ರ ಅವರು ನನಗೆ ಎರಡನೇ ತಂದೆ. ಅವರು ಕೂಡ ರಾಜಕಾರಣದ ಬಗ್ಗೆ ಹೇಳುತ್ತಿರುತ್ತಾರೆ - ಧವನ್ ರಾಕೇಶ್

69

ವರುಣಾ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸುವ ಮುನ್ನ ಸಿದ್ದರಾಮಯ್ಯ ಅವರು ಸ್ವಗ್ರಾಮ ಸಿದ್ದರಾಮನ ಹುಂಡಿಯ ಸಿದ್ದರಾಮೇಶ್ವರ ದೇವಾಲಯ ಹಾಗೂ ಶ್ರೀರಾಮ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

79

ನನಗೆ 25 ವರ್ಷ ತುಂಬಲಿ, ಆಗ ಚುನಾವಣೆ ಸ್ಪರ್ಧೆಗೆ ಕ್ವಾಲಿಫೈ ಆಗುತ್ತೇನೆ. ನಂತರ ಅದರ ಬಗ್ಗೆ ಚರ್ಚೆ. ತಾತ ಹಾಗೂ ಚಿಕ್ಕಪ್ಪ ಮೊದಲು ಓದುವಂತೆ ಹೇಳಿದ್ದಾರೆ -ಧವನ್ ರಾಕೇಶ್

89
ತಾತನ ಕಾರು ಏರಿದ ಮೊಮ್ಮಗ

ತಾತನಂತೆ ನಾನೂ ಕೂಡ ಕಾನೂನು ಪದವಿ ಪಡೆದು ರಾಜಕೀಯಕ್ಕೆ ಬರುತ್ತೇನೆ. ವರುಣದಲ್ಲಿ ಸ್ನೇಹಿತರನ್ನು ಮಾಡಿಕೊಳ್ಳಬೇಕು. ಬಹಳ ದಿನಗಳು ಆಗಿತ್ತು ಇಲ್ಲಿಗೆ ಬಂದು ಎಂದು ಸಿದ್ದರಾಮಯ್ಯ ಮೊಮ್ಮಗ ಹೇಳಿಕೆ ನೀಡಿದ್ದಾರೆ.

99
siddu dhwan

ನಾಮಪತ್ರ ಸಲ್ಲಿಕೆಗೆ ಮುನ್ನಾ ನಡೆದ ಸಭೆಯಲ್ಲಿ ‌ತಾತನಿಗೆ ಸಾಥ್ ನೀಡಿದ ಧವನ್ ರಾಕೇಶ್ ಸಿದ್ದರಾಮಯ್ಯ. ತಾತನಂತೆ ಪಂಚೆ, ಶರ್ಟ್‌ ಧರಿಸಿ ವೇದಿಕೆಯಲ್ಲಿ ಧವನ್‌ ರಾಕೇಶ್‌ ಫುಲ್ ಮಿಂಚಿಂಗ್!

Read more Photos on
click me!

Recommended Stories