ರಾಹುಲ್‌ ಜನ್ಮದಿನ: ಕೊರೋನಾ ಸಂಕಷ್ಟದಲ್ಲಿರುವ ಜನರ ಸಹಾಯಕ್ಕೆ ನಿಂತ ಕಾಂಗ್ರೆಸ್

First Published | Jun 19, 2021, 3:56 PM IST

ಕಾಂಗ್ರೆಸ್ ಸಂಸದ ರಾಹುಲ್​ ಗಾಂಧಿಯವರಿಗೆ ಇಂದು (ಜೂನ್.19) 51ನೇ ಜನ್ಮದಿನದ ಸಂಭ್ರಮ. 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್​ ಗಾಂಧಿಯವರಿಗೆ ಕಾಂಗ್ರೆಸ್​ ಮುಖಂಡರು, ನಾಯಕರು ಶುಭಕೋರಿದ್ದಾರೆ. ಹಾಗೇ ಅವರ ಜನ್ಮದಿನವನ್ನು ಪಕ್ಷ ಸೇವಾ ದಿವಸ್​ ಆಗಿ ಆಚರಿಸುತ್ತಿದೆ.

ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದ ಅವರು ಕಳೆದ ಲೋಕಸಭೆ ಚುನಾವಣೆ ಮುಗಿದ ಬೆನ್ನಲ್ಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಸದ್ಯಕ್ಕಂತೂ ಕೇರಳದ ವಯಾನಾಡಿನ ಸಂಸದರಾಗಿರುವ ಅವರು ಪಕ್ಷದ ಹೆಚ್ಚಿನ ಜವಾಬ್ದಾರಿಯನ್ನು ಹೊರಲು ಅದ್ಯಾಕೋ ಮನಸು ಮಾಡುತ್ತಿಲ್ಲ. ಅದೇನೇ ಇರಲಿ 51ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಾಹುಲ್​ ಗಾಂಧಿಯವರಿಗೆ ಕಾಂಗ್ರೆಸ್​ ಮುಖಂಡರು, ನಾಯಕರು ಶುಭಕೋರಿದ್ದಾರೆ. ಹಾಗೇ ಅವರ ಜನ್ಮದಿನವನ್ನು ಪಕ್ಷ ಸೇವಾ ದಿವಸ್​ ಆಗಿ ಆಚರಿಸುತ್ತಿದೆ.
ರಾಹುಲ್ ಗಾಂಧಿಯವರ ಜನ್ಮದಿನದ ಪ್ರಯುಕ್ತಕಾಂಗ್ರೆಸ್ ದೇಶಾದ್ಯಂತ ಸೇವಾ ದಿವಸ್​ ಆಚರಿಸುತ್ತಿದೆ.
Tap to resize

ಕೊರೋನಾದಿಂದ ಸಂಕಷ್ಟದಲ್ಲಿರುವ ಜನರಿಗೆ ಕಾಂಗ್ರೆಸ್ ಸಹಾಯ ಮಾಡುವ ಮೂಲಕ ರಾಹುಲ್ ಗಾಂಧಿ ಅವರ ಜನ್ಮದಿನವನ್ನು ಆಚರಿಸಲಾಯ್ತು.
ದೆಹಲಿಯ ಕಚೇರಿಯಲ್ಲಿ ನಿರ್ಗತಿಕರಿಗೆ ಪಡಿತರ ಕಿಟ್‌ಗಳನ್ನು ವಿತರಿಸಲಾಯಿತು, ನಾಗರಿಕರಿಗೆ ಉಚಿತ ಲಸಿಕೆ ಶಿಬಿರ ಮತ್ತು ಈ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಿರುದ್ಯೋಗಕ್ಕೊಳಗಾದವರಿಗೆ ಆರ್ಥಿಕ ನೆರವು ಸಹ ನೀಡಿದರು.
ಇನ್ನು ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಜತೆಗೆ ಅವರ ಅಗತ್ಯಗಳನ್ನು ಕೇಳಿ, ಪೂರೈಸುತ್ತಿದ್ದಾರೆ.
ದೇಶಾದ್ಯಂತ ಸೇವಾ ದಿವಸ್​ ಆಚರಿಸುತ್ತಿರುವ ಕಾಂಗ್ರೆಸ್​, ಬಡವರಿಗೆ ಅಗತ್ಯವಿರುವ ವಸ್ತುಗಳನ್ನು ಹಂಚುತ್ತಿದೆ. ಅಂದರೆ ಫೇಸ್​ಮಾಸ್ಕ್​, ಮೆಡಿಸಿನ್​ ಕಿಟ್​, ಆಹಾರ ತಿಂಡಿಗಳನ್ನು ಉಚಿತವಾಗಿ ವಿತರಿಸುತ್ತಿದೆ.
ಹಾಗೇ ಬರ್ತ್​ ಡೇ ದಿನ ಕೂಡ ನೆಟ್ಟಿಗರು ಅವರನ್ನು ಟ್ರೋಲ್​ ಮಾಡಿ ಟ್ವೀಟ್ ಮಾಡುವ ಮೂಲಕ ವಿಶ್​ ಮಾಡಿದ್ದಾರೆ. ರಾಹುಲ್​ ಗಾಂಧಿಯವರನ್ನು ಜೋಕ್​ ಮಾಡಿದ ಮೀಮ್ಸ್​ಗಳನ್ನು ಹಾಕಿ ಫನ್ನಿ ವಿಶ್​​ಗಳನ್ನೂ ಮಾಡಿದ್ದಾರೆ.

Latest Videos

click me!