ಬೇರೆ ರಾಜ್ಯದ ಕುರಿ ಸಂತೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಿಂಚಿಂಗ್

First Published Dec 14, 2019, 7:48 PM IST

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಕೊಂಚ ರಾಜಕೀಯದಿಂದ ರಿಲ್ಯಾಕ್ಸ್ ಮೂಡ್ ಗೆ ಹೋಗಿದ್ದಾರೆ.  ರಾಜಕೀಯದಿಂದ ಕೊಂಚ ರಿಲ್ಯಾಕ್ಸ್ ಪಡೆದುಕೊಂಡು ಕುರಿ ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕವೆಂಬಂತೆ ಇಂದು [ಶನಿವಾರ] ಕುರಿ ಸಂತೆಯಲ್ಲಿ ಕಾಣಿಸಿದ್ದಾರೆ. ಅದು ರಾಜಕಾರಣಿಯಾಗಿ ಅಲ್ಲ. ರೈತನ ಗೆಟಪ್ ನಲ್ಲಿ ತಲೆಗೆ ಟವೆಲ್ ಸುತ್ತಿಕೊಂಡು ಸಾಮಾನ್ಯರಂತೆ ಸಂತೆಯಲ್ಲಿ ಕುರಿ ಖರೀದಿಸುವಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಡಿಯೋ ಹಾಗೂ ಫೋಟೋಗಳು ವೈರಲ್ ಆಗಿವೆ. ಅಷ್ಟಕ್ಕೂ ಅವರು ಯಾವ ಊರಿನ ಕುರಿ ಸಂತೆಗೆ ಹೋಗಿದ್ರು..? ಎಲ್ಲಿ ಕುರಿ ಸಾಕಾಣಿಕೆ ಮಾಡ್ತಾರೆ ಎನ್ನುವುದನ್ನು ಈ ಕೆಳಗೆ ಚಿತ್ರದೊಂದಿಗೆ ಮಾಹಿತಿ ಇದೆ ನೋಡಿ.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸ್ಪೀಕರ್ ಆಗಿದ್ದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭೆ ಕ್ಷೇತ್ರದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರು ಕೊಂಚ ರಾಜಕೀಯ ಬಿಟ್ಟು ಕುರಿ ಸಾಕಾಣಿಕೆ ಮಾಡಲು ಮುಂದಾಗಿದ್ದಾರೆ.
undefined
ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಅಂಗಲಾ ಗ್ರಾಮದ ಸಂತೆಯಲ್ಲಿ ಕುರಿಗಳ ಖರೀದಿ ಮಾಡಿದ ರಮೇಶ್ ಕುಮಾರ್.
undefined
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ 17 ಸದಸ್ಯರನ್ನು ಅನರ್ಹಗೊಳಿಸಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು.
undefined
ಹಿರಿಯ ರಾಜಕಾರಣಿಯಾದ್ರೂ ಸಹ ರೈತನ ಗೆಟಪ್ ನಲ್ಲಿ ತಲೆಗೆ ಟವೆಲ್ ಸುತ್ತಿಕೊಂಡು ಸಾಮಾನ್ಯರಂತೆ ಸಂತೆಯಲ್ಲಿ ಕುರಿ ವ್ಯಾಪಾರ ಮಾಡಿದರು.
undefined
ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಅಡ್ಡಗಲ್ ಗ್ರಾಮದ ತಮ್ಮ ತೋಟದ ಮನೆ ಬಳಿ ಕುರಿ ಸಾಕಾಣಿಕೆ ಮಾಡಲು ಕುರಿ ಖರೀದಿಸಿದ ರಮೇಶ್ ಕುಮಾರ್
undefined
ರಮೇಶ್ ಕುಮಾರ್ ಅವರು ಈ ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
undefined
ಸಾಮಾನ್ಯರಂತೆ ಕುರಿ ಸಂತೆಯಲ್ಲಿ ಕಾಣಿಸಿಕೊಂಡಿರುವ ರಮೇಶ್ ಕುಮಾರ್ ಅವರ ಪೋಟೋಗಳು ಹಾಗೂ ವಿಡಿಯೋ ವೈರಲ್ ಆಗುತ್ತಿವೆ.
undefined
click me!