Modi Bengaluru Roadshow: ಮೋದಿ ಮತ್ತೊಂದು ಪವರ್ ಶೋ, ಬೆಂಗಳೂರಿಗರು ಫುಲ್ ಖುಷ್!

First Published | May 7, 2023, 8:08 PM IST

ಬೆಂಗಳೂರು (ಮೇ.7): ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ಭಾನುವಾರ ಯಶಸ್ವಿ ರೋಡ್‌ ಶೋ ನಡೆಸಿದ್ದಾರೆ.  ಭಾನುವಾರ  ನಗರದ 5 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 6.5 ಕಿ.ಮೀ. ರೋಡ್‌ ಶೋ ನಡೆಸಿದ್ದಾರೆ. ಮೋದಿ ಅವರ ರೋಡ್‌ ಶೋ ನಲ್ಲಿ ದಾರಿಯುದ್ದಕ್ಕೂ ಅಭಿಮಾನಿಗಳು ಮೋದಿ ಮೋದಿ ಘೋಷಣೆ ಕೂಗಿದ್ದಾರೆ.

ಫೋಟೋ ಕೃಷೆ: ರವಿ, ಕನ್ನಡಪ್ರಭ

ಪ್ರಧಾನಿ ನರೇಂದ್ರ ಮೋದಿಗೆ, ಪಿಸಿ ಮೋಹನ್, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಚುನಾವಣಾ ಉಸ್ತುವಾರಿ ಅಣ್ಣಾಮಲೈ ಸಾಥ್ ನೀಡಿದ್ದರು. 

ಪ್ರಧಾನಿ ಮೋದಿ ಅವರ ಎರಡನೇ ದಿನದ  ರೋಡ್ ಶೋ ಹಿನ್ನೆಲೆ ದಾರಿಯುದ್ದಕ್ಕೂ ಕಟ್ಟುನಿಟ್ಟಿನ ಭಿಗಿ ಭದ್ರತೆ ಕೈಗೊಳ್ಳಲಾಗಿತ್ತು. 

Latest Videos


ತುಂತುರು ಮಳೆಯ ನಡುವೆಯೇ ಅಪಾರ ಸಂಖ್ಯೆಯಲ್ಲಿ ಸೇರಿದ ಜನರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಕೂಗಿ ಹರ್ಷವ್ಯಕ್ತಪಡಿಸಿದರು.

ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜಧಾನಿಯಲ್ಲಿ ಈ ರೋಡ್‌ ಶೋ ಹಮ್ಮಿಕೊಂಡಿದ್ದರು.

ಒಂದೇ ದಿನ ರೋಡ್‌ ಶೋ ಮಾಡಿದರೆ, ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಎರಡು ದಿನಕ್ಕೆ ರೋಡ್‌ ಶೋ ವಿಸ್ತರಿಸಲಾಗಿತ್ತು.

ಶನಿವಾರ ಪ್ರಧಾನಿ ನರೇಂದ್ರ ಮೋದಿ ರಾಜಧಾನಿಯಲ್ಲಿ 26 ಕಿ.ಮೀ. ಭರ್ಜರಿ ರೋಡ್‌ ಶೋ ನಡೆಸಿದ್ದರು. ಭಾನುವಾರ ಕೂಡ ಮದ್ಯಾಹ್ನವರೆಗೆ ರೋಡ್ ಶೋ ನಲ್ಲಿ ಭಾಗವಹಿಸಿದ್ದರು. 

ಮತ್ತೆ ಬೆಂಗಳೂರು ಜನರ ನಡುವೆ ಇರುವುದು ಆನಂದದ ಸಂಗತಿ.ಇಂದು ನಮ್ಮನ್ನು ಆಶೀರ್ವದಿಸಲು ಬಂದಿರುವ ಎಲ್ಲರಿಗೂ ಕೃತಜ್ಞತೆಗಳು- ಕನ್ನಡದಲ್ಲಿ ಮೋದಿ ಟ್ವೀಟ್  

ರಾಜಭವನದಿಂದ ನೇರವಾಗಿ ರಸ್ತೆ ಮೂಲಕ ಬಂದ ಮೋದಿ ನ್ಯೂ ತಿಪ್ಪಸಂದ್ರಕ್ಕೆ ಆಗಮಿಸಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ರೋಡ್​​ಶೋಗೆ ಚಾಲನೆ ನೀಡಿದರು.

ಬೆಂಗಳೂರಿನಲ್ಲಿ ಇಂದು ರೋಡ್ ಶೋವನ್ನು ನಾಡಪ್ರಭು ಕೆಂಪೆಗೌಡ ಅವರಿಗೆ ಗೌರವನಮನ ಸಲ್ಲಿಸುವುದರೊಂದಿಗೆ ಆರಂಭಿಸಿದೆ. ಅವರ ಶ್ರೀಮಂತ ದೃಷ್ಟಿಕೋನವನ್ನು ಸ್ಮರಿಸಿದೆವು ಮತ್ತು ಅದನ್ನು ಈಡೇರಿಸುವತ್ತ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದೆವು. - ಮೋದಿ ಕನ್ನಡದಲ್ಲಿ ಟ್ವೀಟ್ 

ಬೆಳಗ್ಗೆ 10 ಗಂಟೆಗೆ ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಆರಂಭವಾಗುವ ರೋಡ್‌ ಶೋ ಬಳಿಕ ಬೆಮಲ್‌ ಗೇಟ್‌, 80 ಅಡಿ ರಸ್ತೆ, 12ನೇ ಮುಖ್ಯರಸ್ತೆ, ಇಎಸ್‌ಐ ಆಸ್ಪತ್ರೆ ಜಂಕ್ಷನ್‌, 

ದೊಮ್ಮಲೂರು 12ನೇ ಮುಖ್ಯರಸ್ತೆ, ಜೋಗುಪಾಳ್ಯ, ಚಿನ್ಮಯ ಮಿಷನ್‌ ಆಸ್ಪತ್ರೆ ರಸ್ತೆ, ಲಕ್ಷ್ಮೇಪುರ, ಹಲಸೂರು, ಟ್ರಿನಿಟಿ ಜಂಕ್ಷನ್‌ನಲ್ಲಿ ಅಂತ್ಯಗೊಂಡಿತು.

ಬಿಳಿ ಕುರ್ತಾ,   ಶಾಲು ಧರಿಸಿದ್ದ ಮೋದಿ ಜನರತ್ತ ಕೈ ಬೀಸುತ್ತಾ,  ಕೈಮುಗಿಯುತ್ತಾ ತೆರೆದ ವಾಹನದಲ್ಲಿ ಪ್ರಧಾನಿ ನರೇಂದ್ರ ಮೋದಿ ಎರಡನೇ ದಿನದ ಭರ್ಜರಿ ರೋಡ್‌ ಶೋ ನಡೆಸಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೆನೂ ಕೆಲವೇ ದಿನಗಳು ಬಾಕಿಯಿದೆ. ಈ ಹಿನ್ನೆಲೆಯಲ್ಲಿ ಈ ಹಿನ್ನೆಲೆಯಲ್ಲಿ ಮೋದಿ ಮಾಡಿರುವ ರೋಡ್‌ ಶೋ ದಾಖಲೆ ಎನಿಸಿಕೊಂಡಿದೆ.

ದಾರಿಯುದ್ಧಕ್ಕೂ ಕಲಾಪ್ರಕಾರಗಳ ಮೆರುಗು, ಪುಷ್ಪವೃಷ್ಟಿಯೊಂದಿಗೆ ಪ್ರಧಾನಿ ನರೇಂದ್ರ  ಮೋದಿ ಅವರನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು.
 

ನಿನ್ನೆ ಮೋದಿ ರೋಡ್ ಮಿಸ್ ಆದ ಹಿನ್ನೆಲೆ. ಬೆಳಗ್ಗೆಯೇ ಕುಟುಂಬ ಸಮೇತ ಇಂದಿರಾನಗರ ಚಿನ್ಮಯ ಜಂಕ್ಷನ್ ಗೆ ಬಂದು ಮೋದಿ ಅಭಿಮಾನಿಗಳು ಕಣ್ತುಂಬಿಕೊಂಡರು.

ಆರೂವರೆ ಕಿಲೋಮೀಟರ್ ನಡೆದ ರೋಡ್​ ಶೋ. ಒಂದು ಗಂಟೆ 30 ನಿಮಿಷ  ನಡೆಯಿತು.  ಟ್ರಿನಿಟ್ ಸರ್ಕಲ್​ನಲ್ಲಿ ರೋಡ್ ಶೋ ಮುಕ್ತಾಯವಾಯ್ತು.

click me!