ಚಿತ್ರಗಳಲ್ಲಿ: ಸಿಎಂ ಘೋಷಣೆಗೂ ಮುನ್ನ ಸಿದ್ದು ಅಭಿಮಾನಿಗಳ ಮುಗಿಲು ಮುಟ್ಟಿದ ಸಂಭ್ರಮ!
First Published | May 17, 2023, 5:17 PM ISTಫೋಟೋ ಕೃಪೆ: ವೀರಮಣಿ, ಕನ್ನಡ ಪ್ರಭ
ಬೆಂಗಳೂರು (ಮೇ.17): ಕಾಂಗ್ರೆಸ್ ಪಕ್ಷವು ಕರ್ನಾಟಕಕ್ಕೆ ತನ್ನ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರನ್ನು ಘೋಷಿಸಲಿದೆ ಎಂಬ ಸುದ್ದಿಯ ಬೆನ್ನಲ್ಲೇ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ರಾಜ್ಯ ನಾನಾ ಭಾಗಗಳಲ್ಲಿ ಸಿದ್ದರಾಮಯ್ಯ ಅಭಿಮಾನಿಗಳು ಇನ್ನಿಲ್ಲದಂತೆ ಸಂಭ್ರಮಿಸುತ್ತಿದ್ದಾರೆ. ತವರು ಜಿಲ್ಲೆ ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಕೂಡ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯ ಭಾವಚಿತ್ರ ಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಫ್ಲೆಕ್ಸ್‌ನಲ್ಲಿ ಸಿದ್ದರಾಮಯ್ಯ ಜೊತೆಗೆ ಮೊಮ್ಮಗ ಧವನ್ ರಾಕೇಶ್ ಸಿದ್ದರಾಮಯ್ಯ ಭಾವಚಿತ್ರದಲ್ಲಿ ಕೂಡ ಮುಂದಿನ ವಾರಸುದಾರ ಎಂದು ಅಭಿಮಾನಿಗಳು ಬರೆದಿದ್ದಾರೆ.