ಬೆಂಗಳೂರು (ಮೇ.13): ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರವಿ ಸುಬ್ರಮಣ್ಯ ಈ ಬಾರಿಯೂ ಜಯಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮೂರು ವಿಧಾನಸಭೆ ಚುನಾವಣೆಯಿಂದ ಸತತವಾಗಿ ಕಮಲ ಅರಳಿರುವ ಈ ಕ್ಷೇತ್ರವನ್ನು ನಾಲ್ಕನೆಯ ಬಾರಿಗೆ ಬಿಜೆಪಿ ತನ್ನ ಮುಡಿಗೇರಿಸಿಕೊಂಡಿದೆ.
ಜನಾಭಿಪ್ರಾಯವನ್ನು ನಾವು ಗೌರವಿಸ್ತಿವಿ, ನನ್ನ ಕ್ಷೇತ್ರದ ಎಲ್ಲಾ ಜನರಿಗೆ ಅಭಿನಂದನೆ. ಮತದಾರರು 50ಕ್ಕೂ ಹೆಚ್ಚು ಅಂತರವನ್ನು ಕೊಟ್ಟಿದ್ದಾರೆ. ಜನರ ನಂಬಿಕೆ ಊಳಿಸಿಕೊಳ್ತಿನಿ. ನಿಮ್ಮ ನಂಬಿಕೆಗೆ ಅರ್ಹನಾಗಿ ಕೆಲಸ ಮಾಡ್ತಿನಿ ಎಂದು ರವಿ ಸುಬ್ರಹ್ಮಣ್ಯ ತಿಳಿಸಿದ್ದಾರೆ.
ನಾನು ಮೊದಲಿನಿಂದಲೂ ಹೇಳುತ್ತಿದ್ದೇನೆ. ಬಸವನಗುಡಿಯಲ್ಲಿ ಮೊದಲಿನಿಂದಲೂ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಪ್ರತಿ ಬಾರಿಯೂ ಅಂತರವನ್ನ ಹೆಚ್ಚಿಸಿಕೊಂಡು ಹೋಗಿದ್ದಾರೆ ಎಂದರು.
ಈ ಬಾರಿಯೂ ನನ್ನನ್ನ ಆರಿಸಿ ತರ್ತಾರೆ. ಕಾಂಗ್ರೆಸ್ ಮುನ್ನಡೆ ವಿಚಾರ. ಇನ್ನೂ ಪೂರ್ಣ ಫಲಿತಾಂಶ ಬರಲಿ. ಕೌಂಟಿಂಗ್ ಆಗಲಿ, ನೋಡೋಣ ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್‌ಗೆ ಹಿನ್ನೆಡೆ ವಿಚಾರವಾಗಿ ಶೆಟ್ಟರ್ ಯೋಚನೆ ಮಾಡಬೇಕಿತ್ತು, ಇದರ ಬಗ್ಗೆ ಮುಂದೆ ಮಾತನಾಡ್ತೇನೆ ಎಂದು ವಿ ಸುಬ್ರಹ್ಮಣ್ಯ ಹೇಳಿದರು. ಬಸವನಗುಡಿಯಲ್ಲಿ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ ಗೆಲುವು ಹಿನ್ನೆಲೆಯಲ್ಲಿ ಎಸ್‌ಎಸ್‌ಎಂಆರ್‌ವಿ ಕಾಲೇಜಿನ ಬಳಿ ಸುಬ್ರಹ್ಮಣ್ಯ ಬೆಂಬಲಿಗರು ಸಂಭ್ರಮಾಚರಣೆ ನಡೆಸಿದರು.
ಎಲ್.ಎ. ರವಿ ಸುಬ್ರಹ್ಮಣ್ಯ ವಿರುದ್ಧ ಕಾಂಗ್ರೆಸ್‌ನಿಂದ ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್ ಹಾಗೂ ಜೆಡಿಎಸ್‌ನಿಂದ ಅರಮನೆ ಶಂಕರ್, ಆಮ್ ಆದ್ಮಿ ಪಾರ್ಟಿಯಿಂದ ಸತ್ಯಲಕ್ಷ್ಮೇರಾವ್, ಕರ್ನಾಟಕ ರಾಷ್ಟ್ರ ಸಮಿತಿಯಿಂದ ಎಲ್. ಜೀವನ್ ಸೇರಿದಂತೆ ಒಟ್ಟು 12 ಜನ ಸ್ಫರ್ಧಿಸಿದ್ದರು.