ಬಿಜೆಪಿ ಜತೆ ದೋಸ್ತಿಗೆ ಕುಮಾರಸ್ವಾಮಿ ದೆಹಲಿಗೆ, ನಾಯ್ದು ಜೈಲಿಗೆ, ಬಿಎಸ್‌ವೈ ಕಡೆಗಣಿಸಿ ಬಿಎಲ್‌ ಸಂತೋಷ್‌ ಸಭೆ

First Published Dec 14, 2023, 5:25 PM IST

2023ರ  ಸೆಪ್ಟೆಂಬರ್‌  ತಿಂಗಳಿನಲ್ಲಿ  ಭಾರತ ಮತ್ತು ಕರ್ನಾಟಕದಲ್ಲಿ  ನಡೆದ ರಾಜಕೀಯ ಬೆಳವಣಿಗೆಗಳ ಬಗ್ಗೆ ಇಲ್ಲಿ ಸಂಕ್ಷಿಪ್ತವಾಗಿ ನೀಡಲಾಗಿದೆ. ಏನೆಲ್ಲ ಘಟನೆಗಳು, ಬೆಳವಣಿಗೆಗಳು ನಡೆದವು ಎಂಬ ಸಂಪೂರ್ಣ ವಿವರಣೆ ಇಲ್ಲಿದೆ.

ಮುಂಬರುವ ಲೋಕಸಭೆ ಚುನಾವಣೆಗೆ ಜೆಡಿಎಸ್​ - ಬಿಜೆಪಿ ಮೈತ್ರಿ ಹಿನ್ನೆಲೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಅವರು ನವದೆಹಲಿಯಲ್ಲಿ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಸೆಪ್ಟೆಂಬರ್‌ 22ರಂದು ಭೇಟಿಯಾಗಿ ಮಾತುಕತೆ ನಡೆಸಿದರು.  ಸಭೆಯಲ್ಲಿ ಗೋವಾ ಸಿಎಂ ಕೂಡ ಭಾಗಿಯಾಗಿದ್ದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿ ಕುರಿತು ಮಾತನಾಡಿದ್ದೇನೆ. ಬಿಜೆಪಿ ರಾಜ್ಯ ಘಟಕದ ನಾಯಕರು ಕೂಡ ಮುಂದಿನ ದಿನದಲ್ಲಿ ಮೈತ್ರಿ ಮಾತುಕತೆಯಲ್ಲಿ ಭಾಗಿಯಾಗಲಿದ್ದಾರೆ. ಈ ಮೈತ್ರಿ ಶಾಶ್ವತವಾಗಿರುತ್ತೆ ಎಂದು ಕುಮಾರಸ್ಬಾಮಿ ಹೇಳಿದ್ದರು. 

ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿಯ ವಾರ್ಡ್ ವಿಂಗಡಣೆ ಅಂತಿಮ ಪಟ್ಟಿ ರಾಜ್ಯ ಸರಕಾರ ಪ್ರಕಟ ಮಾಡಿತ್ತು, 225 ವಾರ್ಡಗಳನ್ನು ಅಧಿಕೃತಗೊಳಿಸಿ ಸರ್ಕಾರ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಮೂಲಕ ಬಿಬಿಎಂಪಿ ಚುನಾವಣೆ  ಡಿಸೆಂಬರ್‌ನಲ್ಲಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ ಲೋಕಸಭಾ ಚುನಾವಣೆ ಬಳಿಕವೇ ನಡೆಸಲು ಸಿದ್ದತೆ ನಡೆದಿದೆ ಎನ್ನಲಾಗಿದೆ. 

Latest Videos


ಲೋಕಸಭೆ ಹಾಗೂ ರಾಜ್ಯಗಳ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ  ಮಂಡಿಸಿದ್ದು, ಅಂಗೀಕಾರವಾಗಿದೆ. ಈ ಪ್ರಸ್ತಾಪಿತ ಕಾನೂನು ಅಂಗೀಕಾರವಾದರೂ 2024ರ ಲೋಕಸಭೆ ಚುನಾವಣೆಯಿಂದಲೇ ಅಸ್ತಿತ್ವಕ್ಕೆ ಬರುವುದು ಸಾಧ್ಯವಿಲ್ಲ. 2029ರ ಬಳಿಕವೇ ಇದು ಅನುಷ್ಠಾನಗೊಳ್ಳಲಿದೆ ಎನ್ನಲಾಗಿದೆ. ಆದರೆ ರಾಜ್ಯಸಭೆ ಹಾಗೂ ವಿಧಾನ ಪರಿಷತ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

 ಆಂಧ್ರಪ್ರದೇಶದ ಮುಖ್ಯಮಂತ್ರಿ  ಚಂದ್ರಬಾಬು ನಾಯ್ಡು ಅವರನ್ನು ಸೆ.9ರ ಬೆಳ್ಳಂಬೆಳಗ್ಗೆ 6 ಗಂಟೆಗೆ ಬಂಧಿಸಲಾಯ್ತು. ಅವರ ವಿರುದ್ಧ 371 ಕೋಟಿ ರೂ ಮೊತ್ತದ ಆಂಧ್ರಪ್ರದೇಶ ಕೌಶಲ ಅಭಿವೃದ್ಧಿ ಹಗರಣ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪವಿದೆ. ಬಹುಕೋಟಿ ಕೌಶಲಾಭಿವೃದ್ಧಿ ನಿಗಮ ಹಗರಣ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಮೂಲಕ 53 ದಿನಗಳ ನಂತರ ಅವರನ್ನು ಜೈಲಿನಿಂದ ಕರೆದುಕೊಂಡು ಬರಲಾಯ್ತು. 

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಬಿ.ಎಲ್.ಸಂತೋಷ್ ಅವರು ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ, ಬೊಮ್ಮಾಯಿ ಅವರನ್ನು ಹೊರಗಿಟ್ಟು ಲೋಕಸಭಾ ಚುನಾವಣೆ ಬಗ್ಗೆ ಸಭೆ ನಡೆಸಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಬಿಜೆಪಿಯಲ್ಲಿ ಬಣಗಳಾಗಿವೆ ಎಂದು ಸುದ್ದಿಯಾಗಿತ್ತು. ಅದಲ್ಲದೆ ಮೊದಲ ಬಾರಿಗೆ ಸಂತೋಷ್ ಸಭೆ ನಡೆಸಿದ್ದರು.

click me!