2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್‌ಗೆ ಸರ್ಕಾರ ರಚಿಸುವಷ್ಟು ಬಹುತಮ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿ ಬಿಜೆಪಿಯನ್ನು ವಿರೋಧ ಪಕ್ಷದಲ್ಲಿ ಕೂಡಿಸಿದ್ದವು. ಮೈತ್ರಿ ಸರ್ಕಾರದ ಸಿಎಂ ಆಗಿ ಕುಮಾರಸ್ವಾಮಿ ಅವರು ಒಂದು ವರ್ಷ ಪೂರೈಸಿದ್ರು, ಬಳಿಕ ನಡೆದ ರಾಜಕೀಯ ಹೈಡ್ರಾಮಾದಿಂದ ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರ ಹಿಡಿಯಿತು. ಜುಲೈ 22ಕ್ಕೆ ಮೈತ್ರಿ ಸರ್ಕಾರ ಪತನವಾಗಿ 1 ವರ್ಷ ಆಗುತ್ತೆ. ಇದರಿಂದ ಕುಮಾರಸ್ವಾಮಿಗೆ ಮೋಸ ಮಾಡಿ ಒಂದು ವರ್ಷ ಎಂಬ ಹೆಸರಲ್ಲಿ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.