ಕಾಂಗ್ರೆಸ್-ಬಿಜೆಪಿ ಮೈತ್ರಿ ಲವ್: ತಾಲೂಕು ಪಂಚಾಯತಿ ಅಧ್ಯಕ್ಷೆಯನ್ನೇ ಮದ್ವೆಯಾದ ಉಪಾಧ್ಯಕ್ಷ

First Published | Jul 14, 2020, 7:45 PM IST

ಆಕೆ ಬಿಜೆಪಿ, ಆತ ಕಾಂಗ್ರೆಸ್. ಇವರಿಬ್ಬರೂ ತಾಲೂಕು ಪಂಚಾಯತ್ ಅಧ್ಯಕ್ಷೆ-ಉಪಾಧ್ಯಕ್ಷರು. ಪಕ್ಷ ಅಂದಮೇಲೆ ಜಗಳ, ದ್ವೇಷ ಇರೋದು ಕಾಮನ್. ಆದರೆ ಇವರಿಬ್ಬರೂ ಪಕ್ಷಬೇಧ ಮರೆತು ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಪ್ರೀತಿಗೆ ಪಕ್ಷ,  ಜಾತಿ ಇಲ್ಲವೆಂದು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರಾಜ್ಯ ಮಾತ್ರವಲ್ಲ ದೇಶದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್​ ಬದ್ಧ ವೈರಿಗಳಂತಿವೆ. ಅಧಿಕಾರಕ್ಕಾಗಿ ತಿಕ್ಕಾಟ ನಡೆಯುತ್ತಲೇ ಇದೆ. ಆದ್ರೆ ಇದೆಲ್ಲವನ್ನು ಮೀರಿಸುವ ಶಕ್ತಿಗೆ ಪ್ರೀತಿಗೆ ಎಂದು ತೋರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈಕೆ ತಾಲೂಕು ಪಂಚಾಯತ್ ಬಿಜೆಪಿ ಅಧ್ಯಕ್ಷೆ, ಈತ ಕಾಂಗ್ರೆಸ್‌ನಿಂದ ಆಯ್ಕೆಯಾದ ಉಪಾಧ್ಯಕ್ಷ. ವಿರೋಧ ಪಕ್ಷವಾದರೂ ತಮ್ಮ ರಾಜಕೀಯವನ್ನು ಮೀರಿ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ಪ್ರೀತಿಗೆ ಜಾತಿ ಹಂಗಿಲ್ಲ, ಬಣ್ಣಗಳ ಆಕರ್ಷಣೆಯಿಲ್ಲ, ವಯಸ್ಸಿನ ಮಿತಿಯಿಲ್ಲ. ಈಗ ಇವುಗಳ ಸಾಲಿಗೆ ರಾಜಕೀಯ ಪಕ್ಷ ಕೂಡ ಸೇರಿಕೊಂಡಿದೆ.
Tap to resize

ಈ ರೀತಿ ಪಕ್ಷವನ್ನು ಮೀರಿ ಸ್ನೇಹ ಗೆದ್ದು ‘ಪ್ರೇಮ ಮೈತ್ರಿ’ಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಆಗಿದೆ.
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕು ಪಂಚಾಯತಿಯ ಬಿಜೆಪಿ ಅಧ್ಯಕ್ಷೆಯನ್ನು ಕಾಂಗ್ರೆಸ್​ ಉಪಾಧ್ಯಕ್ಷ ಮದುವೆಯಾಗಿ ಎಲ್ಲರ ಮಗಮನ ಸೆಳೆದಿದ್ದಾರೆ.
ಅಫಜಲಪುರ ತಾಪಂ ಅಧ್ಯಕ್ಷೆ ರುಕ್ಮಿಣಿ ಜಮಾದಾರ್​ ಜತೆ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ ಸಪ್ತಪದಿ ತುಳಿದಿದ್ದು, ಲಾಕ್​ಡೌನ್​ ಹಿನ್ನೆಲೆ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ಸರಳ ಮದುವೆ ಆಗುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಚೌಡಾಪುರ ತಾಲೂಕು ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ರುಕ್ಮಿಣಿ ಜಮಾದಾರ್ ಹಾಗೂ ಕರಜಿಗಿ ತಾಲೂಕು ಪಂಚಾಯತ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದ ಭೀಮಶಂಕರ್ ಹೊನ್ನಕೇರೆ ಅವರು ಅಫಜಲಪುರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷರಾಯಾಗಿ ಆಯ್ಕೆಯಾಗಿದ್ದಾರೆ.
ತಾಲೂಕು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಬಿಜೆಪಿಯಿಂದ ಗೆದ್ದು ಅಧ್ಯಕ್ಷರಾಗಿದ್ದರೆ, ಭೀಮಾಶಂಕರ್ ಹೊನ್ನಿಕೇರಿ ಕಾಂಗ್ರೆಸ್ಸಿನಿಂದ ಗೆದ್ದು ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಆದರೆ ಈಗ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ನಡುವೆ ವಿವಾಹ ಬಂಧನವಾಗಿದೆ. ತಾಲೂಕು ಪಂಚಾಯತ್ ನಲ್ಲಿ ಮೈತ್ರಿ ಇಲ್ಲದಿದ್ದರೂ ಜೀವನದ ಪಯಣದಲ್ಲಿ ಮೈತ್ರಿ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

Latest Videos

click me!