ರಾಜಕೀಯ ಬದ್ಧ ವೈರಿ ಇದ್ದಲ್ಲಿಯೇ ಹೋಗಿ ಭೇಟಿಯಾದ ಕುಮಾರಸ್ವಾಮಿ, ರೇವಣ್ಣ

First Published | Oct 13, 2020, 7:15 PM IST

ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಮತ್ತು ಸಚಿವ ಡಾ.ಕೆ.ಸುಧಾಕರ್ ಇವರು ರಾಜಕೀಯ ಬದ್ಧ ವೈರಿಗಳು. ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಸುಧಾಕರ್ ಅವರನ್ನ ಹೇಗೆಲ್ಲಾ ನಡೆಸಿಕೊಂಡರು ಎನ್ನುವುದು ಜಗಜ್ಜಾಹೀರು. ಇದೀಗ ವಿಷ್ಯಾ ಏನಪ್ಪಾ ಅಂದ್ರೆ, ಇದೇ ಮಾಜಿ ಸಿಎಂ ಕುಮಾರಸ್ವಾಮಿ ಹಾಗು ಅವರ ಸಹೋದರ ಎಚ್‌ಡಿ ರೇವಣ್ಣ ಅವರು ದಿಢೀರ್ ಸುಧಾಕರ್ ಅವರನ್ನ ಭೇಟಿ ಮಾಡಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ರಾಜಕೀಯ ಬದ್ಧ ವೈರಿಗಳನ್ನು ಇದ್ದಲ್ಲಿಗೇ ಹೋಗಿ ಮತನಾಡಿಸುವುದು ಕುಮಾರಸ್ವಾಮಿ ರಾಜಕೀಯದಲ್ಲಿ ಇಲ್ಲ.

ರಾಜಕೀಯ ಬದ್ಧ ವೈರಿ ಇದ್ದಲ್ಲಿಯೇ ಹೋಗಿ ಭೇಟಿಯಾದ ಕುಮಾರಸ್ವಾಮಿ, ರೇವಣ್ಣ
ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದ ಕುಮಾರಸ್ವಾಮಿ ಅವರು ಸುಧಾಕರ್ ಅವರನ್ನ ಹೇಗೆಲ್ಲಾ ನಡೆಸಿಕೊಂಡರು ಎನ್ನುವುದು ಜಗಜ್ಜಾಹೀರು
Tap to resize

ಇದೀಗ ಕುಮಾರಸ್ವಾಮಿ ಅವರೇ ಸುಧಾಕರ್ ಇರುವ ಸ್ಥಾಳಕ್ಕೆ ಹೋಗಿ ಭೇಟಿ ಮಾಡಿ ಮಾಡಿರುವುದು ಅಚ್ಚರಿಗೆ ಕಾರಣವಾಗಿದೆ.
ಕುಮಾರಸ್ವಾಮಿಗೆ ಸಹೋದರ ಎಚ್‌ಡಿ ರೇವಣ್ಣ ಸಾಥ್
ರಾಮನಗರದಲ್ಲಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ನಿರ್ಮಾಣ ಸಂಬಂಧ ಕುಮಾರಸ್ವಾಮಿ ಅವರು ಆರೋಗ್ಯ ಸಚಿವ ಸುಧಾಕರ್ ಅವರನ್ನ ಭೇಟಿ ಮಾಡಿದರು,
ಈ ಹಿಂದೆ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಪರಿಸರ ಮಾಲೀನ್ಯ ನಿಯಂತ್ರಣ ಮಂಡಳಿ ಹುದ್ದೆಯನ್ನು ಸುಧಾಕರ್ ಅವರಿಂದ ಕಸಿದುಕೊಂಡಿದ್ದರು,

Latest Videos

click me!