ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್ ಅಹಿಂದ ಶಾಸಕರು ಮತ್ತು ಸಚಿವರಿಗೆ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದರು. ಆದ್ರೆ ಹೈಕಮಾಂಡ್ ಸೂಚನೆ ಮೇರೆ ಡಿನ್ನರ್ ಪಾರ್ಟಿಯನ್ನು ಪರಮೇಶ್ವರ್ ರದ್ದುಗೊಳಿಸಿದರು ಎಂದು ತಿಳಿದು ಬಂದಿದೆ.
ಮತ್ತೊಂದೆಡೆ ವಿದೇಶ ಪ್ರವಾಸದಿಂದ ನೇರವಾಗಿ ದೆಹಲಿಗೆ ತೆರಳಿರುವ ಡಿಸಿಎಂ ಡಿಕೆ ಶಿವಕುಮಾರ್, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ರಾಜ್ಯ ಮತ್ತು ಪಕ್ಷದೊಳಗೆ ನಡೆಯುತ್ತಿರುವ ವಿದ್ಯಮಾನವನ್ನು ಗಮನಕ್ಕೆ ತಂದಿದ್ದಾರೆ. ಈ ವೇಳೆ ನಾವೇ ರಾಜ್ಯಕ್ಕೆ ಬಂದು ಎಲ್ಲಾ ಗೊಂದಲಗಳನ್ನ ಬಗೆಹರಿಸುತ್ತೇವೆ ಎಂದು ಹೈಕಮಾಂಡ್ ಭರಸವೆ ನೀಡಿದೆ ಎನ್ನಲಾಗಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾಗಿರುವ ರಣ್‌ದೀಪ್ ಸುರ್ಜೇವಾಲಾ ಅವರ ಸೂಚನೆ ಮೇಲೆ ಅಹಿಂದ ನಾಯಕರ ಡಿನ್ನರ್ ಪಾರ್ಟಿ ರದ್ದಾಗಿದೆ ಎನ್ನಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸುರ್ಜವಾಲಾ ರಾಜ್ಯಕ್ಕೆ ಆಗಮಿಸಿ ಅಹಿಂದ ನಾಯಕರ ಜೊತೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೊಂದೆಡೆ ಅಹಿಂದ ನಾಯಕರೆಲ್ಲರೂ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನ ಭೇಟಿಯಾಗುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.