ಬಿಎಸ್‌ವೈ ಸಂಪುಟಕ್ಕೆ ಸೇರ್ಪಡೆಯಾದ 10 ನೂತನ ಸಚಿವರ ಒಂದಿಷ್ಟು ಮಾಹಿತಿ ನಿಮಗಾಗಿ

First Published | Feb 6, 2020, 1:11 PM IST

ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಗುರುವಾರ ರಾಜಭನವದಲ್ಲಿ ಸುಸೂತ್ರವಾಗಿ ನೆರವೇರಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್‌ ತೊರೆದು ಉಪಟಚುನಾವಣೆಯಲ್ಲಿ ಗೆದ್ದ 11 ನೂತನ ಶಾಸಕರ ಪೈಕಿ 10 ಶಾಸಕರು ನೂತನ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು. ಆ ಹತ್ತು ನೂತನ ಸಚಿವರ್ಯಾರು..? ಅವರ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ. ಚಿತ್ರಕೃಪೆ: ಮಣಿ (ಕನ್ನಡಪ್ರಭ ಛಾಯಾಗ್ರಹಕರು)

ವಿಜಯನಗರ (ಹೊಸಪೇಟೆ) ಶಾಸಕರಾಗಿರುವ ಆನಂದ್ ಸಿಂಗ್ ಇಂದು ಬಿ. ಎಸ್​.ಯಡಿಯೂರಪ್ಪ ಸಂಪುಟಕ್ಕೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹೊಸಪೇಟೆಯ ಶಾಸಕರಾದ ಆನಂದ್​ ಸಿಂಗ್ ಇದೇ ಕ್ಷೇತ್ರದಿಂದ ಸುಮಾರು 3 ಬಾರಿ ಶಾಸಕರಾಗಿ ಆಯ್ಕೆಯಾದವರು. ಅಲ್ಲದೇ ಒಂದು ಬಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ಇವರು 2018ರಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿ ಗೆದ್ದು ಬಂದಿದ್ರು. 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತೆ ಬಿಜೆಪಿಯಿಂದ ಆನಂದ್ ಸಿಂಗ್ ಪುನಾರಾಯ್ಕೆಯಾದರು.
ಕೆ.ಆರ್.ಪುರ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿರುವ ಕುರುಬ ಸಮುದಾಯದ ಭೈರತಿ ಬಸವರಾಜ್ ಪ್ರಥಮ ಬಾರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 2010ರಲ್ಲಿ ನಡೆದ ಚುನಾವಣೆಯಲ್ಲಿ ಬಸವನಪುರ ವಾರ್ಡ್​ನಿಂದ ಗೆದ್ದು ಪಾಲಿಕೆ ಸದಸ್ಯರಾಗಿದ್ದ, ಭೈರತಿ ಬಸವರಾಜ್​, 2013ರಲ್ಲಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ನಡೆದ ಚುನಾವಣೆಯಲ್ಲಿ 2ನೇ ಬಾರಿ ಶಾಸಕರಾಗಿ ಆಯ್ಕೆಯಾದ ಭೈರತಿ ಬಸವರಾಜ್ ಸಿದ್ದರಾಂಯ್ಯನವರ ಆಪ್ತರಾಗಿದ್ದರು. ಆದ್ರೆ, 2019ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ ಉಪಚುನಾವಣೆಯಲ್ಲಿ ಗೆದ್ದು 3ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
Tap to resize

ಹಿರೇಕೇರುರೂ ಕ್ಷೇತ್ರದಿಂದ ಶಾಸಕರಾಗಿರುವ ವೀರಶೈವ ಲಿಂಗಾಯತ ಸಮುದಾಯದ ಬಿ. ಸಿ. ಪಾಟೀಲ್ ಕೂಡ ಇದೇ ಮೊದಲ ಬಾರಿಗೆ ಇಂದು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಸಿದರು. 2004 ಹಾಗೂ 2008ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಬಿ.ಸಿ.ಪಾಟೀಲ್, 2013ರಲ್ಲಿ ಹಿರೇಕೇರೂರು ಕೆಜೆಪಿ ಅಭ್ಯರ್ಥಿ ವಿರುದ್ಧ ಸೋಲು ಕಂಡಿದ್ರು. 2018ರ ಚುನಾವಣೆಯಲ್ಲಿ 3ನೇ ಬಾರಿ ಶಾಸಕರಾಗಿ ಆಯ್ಕೆಯಾದ ಬಿ.ಸಿ.ಪಾಟೀಲ್ 2019ರಲ್ಲಿ ಕಾಂಗ್ರೆಸ್​ಗೆ ಕೈ ಕೊಟ್ಟು ಬಿಜೆಪಿ ಸೇರಿ 2019ರ ಬೈ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಕಣಕ್ಕಿಳಿದು 4ನೇ ಬಾರಿ ಶಾಸಕರಾಗಿ ಆಯ್ಕೆಯಾಗಿದರು.
ಬೆಂಗಳೂರಿನ ಮಹಾಲಕ್ಷ್ಮಿ ಲೇ​ಔಟ್​ ಶಾಸಕರಾಗಿರುವ ಒಕ್ಕಲಿಗ ಸಮುದಾಯದ ಕೆ.ಗೋಪಾಲಯ್ಯ ಸಹ ಪ್ರಥಮ ಬಾರಿಗೆ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. 2013 ಮತ್ತು 2018ರಲ್ಲಿ ಜೆಡಿಎಸ್​​ನಿಂದ ಶಾಸಕರಾಗಿ ಆಯ್ಕೆಯಾಗಿದ್ರು. ನಂತರ ನಡೆದ ಅವರು ಬಿಜೆಪಿ ಸೇರಿ 2019ರ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಕೆ.ಆರ್​. ಪೇಟೆ ಶಾಸಕ ಕೆ.ಸಿ.ನಾರಾಯಣಗೌಡ ಅವರು ಸಂಪುಟ ದರ್ಜೆ ಸಚಿವರಾಗಿ ಇದೇ ಮೊದಲ ಬಾರಿಗೆ ಪ್ರಮಾಣವಚನ ಸ್ವೀಕರಿಸಿದರು. 2013 ಮತ್ತು 2018ರಲ್ಲಿ ಜೆಡಿಎಸ್‌‌ನಿಂದ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದ ಒಕ್ಕಲಿಗ ಸಮುದಾಯದ ನಾರಾಯಣಗೌಡ ಅವರು 2019 ರಲ್ಲಿ ಬಿಜೆಪಿಗೆ ಜಿಗಿದು ಉಪ ಚುನಾವಣೆಯಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಗೋಕಾಕ್ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದ ವಾಲ್ಮೀಕಿ ಸಮುದಾಯಕ್ಕೆ ಸೇರಿದವರಾಗಿರುವ ರಮೇಶ್ ಜಾರಕಿಹೊಳಿ ಇಂದು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸದರು. 1999 ರಿಂದ 2018 ರವರೆಗೆ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ಪಕ್ಷದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾದವರು. 2019ರಲ್ಲಿ ಕಾಂಗ್ರೆಸ್​ನಿಂದ ಹೊರಬಂದು ಬಿಜೆಪಿ ಜೊತೆ ಕೈ ಜೋಡಿಸಿ ನಂತರ ಬೈ ಎಲೆಕ್ಷನ್​ನಲ್ಲಿ 6ನೇ ಬಾರಿ ಶಾಸಕರಾಗಿ ಆಯ್ಕೆಯಾದರು. ಸಮ್ಮಿಶ್ರ ಸರ್ಕಾರ ಪತನಕ್ಕೆ ಇವರ ಪಾತ್ರ ಮಹತ್ವದಾಗಿರುವುದು ಇಲ್ಲಿ ಸ್ಮರಿಸಹುದು.
ಯಲ್ಲಾಪುರ ಕ್ಷೇತ್ರದ ಶಾಸಕರಾದ ಬ್ರಾಹ್ಮಣ ಸಮುದಾಯಕ್ಕೆ ಸೇರಿರುವ ಶಿವರಾಂ ಹೆಬ್ಬಾರ್ ಇದೇ ಫಸ್ಟ್ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೊದಲು ಕಾಂಗ್ರೆಸ್​ನಿಂದ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಶಿವರಾಂ ಹೆಬ್ಬಾರ್​ 2019ರಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿಯಿಂದ ಕಣಕ್ಕಿಳಿದು 4ನೇ ಬಾರಿ ಶಾಸಕರಾಗಿ ಆಯ್ಕೆಯಾದ್ದರು.
ಕಾಗವಾಡ ಕ್ಷೇತ್ರದ ಮರಾಠ ಸಮುದಾಯದ ಶ್ರೀಮಂತ ಪಾಟೀಲ್ ಕೂಡ ಇದೇ ಪ್ರಥಮ ಬಾರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. 2018ರಲ್ಲಿ ಮೊದಲ ಬಾರಿ ಕಾಗವಾಡದಿಂದ ಶಾಸಕರಾಗಿ ಶ್ರೀಮಂತ ಪಾಟೀಲ ಆಯ್ಕೆಯಾಗಿದ್ದರು ನಂತರ ಕಾಂಗ್ರೆಸ್ ತೊರೆದು ರಾಜ್ಯ ವಿಧಾನಸಭಾ ಉಪ-ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದರು.
2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಯಶವಂತಪುರದಲ್ಲಿ ಕಣಕ್ಕಿಳಿದು ಶಾಸಕರಾಗಿ ಆಯ್ಕೆಯಾದ ಒಕ್ಕಲಿಗರ ಸಮುದಾಯಕ್ಕೆ ಸೇರಿರುವ ಎಸ್​ ಟಿ ಸೋಮಶೇಕ್ ಇಂದು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇವರು 2013 ಹಾಗೂ 2018ರಲ್ಲಿ ಕಾಂಗ್ರೆಸ್​ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಸಮ್ಮಿಶ್ರ ಸರ್ಕಾರದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಬೈ ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಿ 3ನೇ ಬಾರಿ ಶಾಸಕರಾಗಿ ಆಯ್ಕೆಯಾಗುವ ಮೂಲಕ ಇಂದು ಬಿಎಸ್​ವೈ ಸಂಪುಟ ಸೇರಿದರು.
ಒಕ್ಕಲಿಗ ಸಮುದಾಯದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ ಕೆ. ಸುಧಾಕರ್ ಇದೇ ಮೊದಲ ಬಾರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 2013, 2018ರಲ್ಲಿ ಕಾಂಗ್ರೆಸ್​​ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ ಸುಧಾಕರ್. 2009ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ 3ನೇ ಬಾರಿ ಶಾಸಕರಾಗಿ ಆಯ್ಕೆಯಾದ್ದರು.

Latest Videos

click me!