ಚಿತ್ರಗಳು: ವಿದೇಶದಲ್ಲಿ ಜಮೀರ್ ಅಹ್ಮದ್ ವಾಕಿಂಗ್, ಸ್ಥಳ ಯಾವುದೆಂದು ಗುರುತಿಸುವಿರಾ?

First Published | Jan 28, 2020, 5:36 PM IST

ಬೆಂಗಳೂರಿನ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರು ವಿದೇಶಕ್ಕೆ ಹೋಗಿದ್ದು, ಬೆಳಗ್ಗೆ ವಾಕಿಂಗ್ ಮಾಡುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಕ್ಷಿಗಳಿಗೆ ಕಾಳು ಹಾಕುತ್ತಾ ವಾಕಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಹಾಗಾದ್ರೆ ಜಮೀರ್ ಇರುವ ದೇಶ ಯಾವುದು ಎಂದು ಗುರುತಿಸುವಿರಾ?

ಇಷ್ಟು ದಿನ ಸಿಎಎ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿದೇಶಕ್ಕೆ ಹಾರಿದ್ದಾರೆ.
ವಿದೇಶದಲ್ಲಿ ಜಮೀರ್ ಅಹ್ಮದ್ ಪಕ್ಷಿಗಳಿಗೆ ಆಹಾರ ಹಾಕುತ್ತಿರುವ ದೃಶ್ಯ
Tap to resize

ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಸಂಬಂಧ ಸಿದ್ದರಾಮಯ್ಯ ಜತೆ ದೆಹಲಿಗೆ ಹೋಗಿದ್ದ ಜಮೀರ್ ಇದೀಗ ಹೊರ ದೇಶದಕ್ಕೆ ತೆರಳಿದ್ದಾರೆ.
ರಾಜಕೀಯ ಟೆನ್ಷನ್ ಬಿಟ್ಟು ವಿದೇಶದಲ್ಲಿ ಆಪ್ತರ ಜತೆ ಸುತ್ತಾಡುತ್ತಿರುವ ಜಮೀರ್ ಭಾಯ್
ಜಮೀರ್ ಅಹ್ಮದ್ ಯಾವ ದೇಶಕ್ಕೆ ಹೋಗಿದ್ದಾರೆ ಎಂದು ನೀವು ಗುರುತಿಸುವಿರಾ?
ಬೆಳಗ್ಗೆ ವಾಕಿಂಗ್ ಜತೆಗೆ ಹಕ್ಕಿಗಳಿಗೆ ಆಹಾರ ಹಂಚುತ್ತಾ ಕಾಲ ಕಳೆದಿರುವ ಜಮೀರ್ ಅಹ್ಮದ್
ಅಷ್ಟಕ್ಕೂ ಜಮೀರ್ ಅಹ್ಮದ್ ಖಾನ್ ಹೋಗಿದ್ದು ಸೌದಿ ಅರೇಬಿಯಾಕ್ಕೆ
ಸೌದಿ ಅರೇಬಿಯಾದ ಮೆಕ್ಕಾ (ಮಕ್ಕಾ ಮುಕರ್ರಾಮ)ದಲ್ಲಿ ಬೆಳಗ್ಗೆ ವಾಕಿಂಗ್ ಮಾಡಿದ್ದಾರೆ.
ಮುಸ್ಲಿಮರ ಪವಿತ್ರ ಸ್ಥಳವಾಗಿರುವ ಮೆಕ್ಕಾದಲ್ಲಿ ಆಪ್ತರೊಂದಿಗೆ ಕಾಲ ಕಳೆದ ಕ್ಷಣದ ಬಗ್ಗೆ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

Latest Videos

click me!