ಕೆಪಿಸಿಸಿ ಅಧ್ಯಕ್ಷ ಹಾದಿ ಸುಗಮಕ್ಕೆ ದೇವರ ಮೊರೆ ಹೋದ ತಾಯಿ-ಮಗ

First Published | Jan 17, 2020, 4:33 PM IST

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೆಸರು ಅಂತಿಮಗೊಂಡಿದ್ದು, ಹೈಕಮಾಂಡ್‌ನಿಂದ ಅಧಿಕೃತ ಆದೇಶ ಹೊರ ಬೀಳುವುದೊಂದೇ ಬಾಕಿ ಇದೆ.  ಆದ್ರೆ, ಕೆಲ ಅಡಚಡೆಗಳು ಉಂಟಾಗಿವೆ. ಆ ತೊಡಕುಗಳನ್ನು ನಿವಾರಸಲು ಈಗ ಡಿಕೆಶಿ ಹಾಗೂ ಅವರ ತಾಯಿ ದೇವರ ಮೊರೆ ಹೋಗಿದ್ದಾರೆ. 

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಸ್ಥಾನಕ್ಕೆ ಎದುರಾಗಿವ ಸಂಕಷ್ಟಗಳನ್ನು ನಿವಾರಿಸುವಂತೆ ಡಿಕೆಶಿ ದೇವರ ಮೊರೆ ಹೋಗಿದ್ದಾರೆ.
ತುಮಕೂರಿನ ಕುಣಿಗಲ್ ತಾಲೂಕಿನ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠಕ್ಕೆ ಶುಕ್ರವಾರ ಭೇಟಿ ನೀಡಿ ಅಮ್ಮನವರ ವರ್ಧಂತಿ ಮಹೋತ್ಸವ ಹಾಗೂ ಶತ ಚಂಡಿ ಮಹಾಯಾಗದಲ್ಲಿ ಮಾಜಿ ಸಚಿವ ಡಿಕೆ ಶಿವಕುಮಾರ್ ಭಾಗವಹಿಸಿದರು.
Tap to resize

ಈ ವೇಳೆ ಸ್ಫಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ನಂಜಾವಧೂತ ಸ್ವಾಮೀಜಿ ಹಾಗೂ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನದ ಶ್ರೀ ಬಾಲಮಂಜುನಾಥ ಸ್ವಾಮೀಜಿ ಉಪಸ್ಥಿತರಿದ್ದರು.
ಮತ್ತೊಂದೆಡೆ ಡಿ.ಕೆ.ಶಿವಕುಮಾರ್ ಅವರ ತಾಯಿ ಗೌರಮ್ಮ ಅವರು ಇಂದು (ಶುಕ್ರವಾರ) ಬೆಳಗ್ಗೆಯೇ ಕಬ್ಬಾಳಮ್ಮನ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
ಡಿಕೆಶಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಕಟ್ಟುವುದು ಬಹುತೇಕ ಖಚಿತವಾಗಿದೆ. ಆದ್ರೆ, ಕೆಲ ಅಡಚಡೆಗಳು ಉಂಟಾಗಿವೆ. ಆ ತೊಡಕುಗಳನ್ನು ನಿವಾರಸಲು ಈಗ ಡಿಕೆಶಿ ಹಾಗೂ ಅವರ ತಾಯಿ ದೇವರ ಮೊರೆ ಹೋಗಿದ್ದಾರೆ.
ಅಮ್ಮನವರ ವರ್ಧಂತಿ ಮಹೋತ್ಸವ ಹಾಗೂ ಶತ ಚಂಡಿ ಮಹಾಯಾಗದಲ್ಲಿ ಭಾಗವಹಿಸುವಂತೆ ಡಿಕೆಶಿ ಆಹ್ವಾನ ಬಂದಿತ್ತು.
ಕುಣಿಗಲ್ ತಾಲೂಕಿನ ಶ್ರೀ ವಿದ್ಯಾಚೌಡೇಶ್ವರಿ ಮಹಾಸಂಸ್ಥಾನ ಮಠದಲ್ಲಿ ಅಮ್ಮನವರ ವರ್ಧಂತಿ ಮಹೋತ್ಸವ ಹಾಗೂ ಶತ ಚಂಡಿ ಮಹಾಯಾಗ ನಡೆಯಿತು.
ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಲವು ತೋರಿದೆ. ಆದ್ರೆ, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.
ಡಿ.ಕೆ.ಶಿವಕುಮಾರ್‌ಗೆ ಅಧ್ಯಕ್ಷ ಮಾಡಿ ಜತೆಗೆ ಕಾರ್ಯಾಧ್ಯಕ್ಷರ ನೇಮಕ ಮಾಡಲು ಹೈಕಮಾಂಡ್ ಚಿಂತನೆ ನಡೆಸಿದೆ.

Latest Videos

click me!