ವೇದಿಕೆಗೆ ಬನ್ನಿ ಚರ್ಚೆ ಮಾಡೋಣ: ಬಿಜೆಪಿಗೆ ಸಿದ್ದರಾಮಯ್ಯ ಸವಾಲು

First Published | Mar 14, 2024, 8:03 AM IST

ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ 1,20,000 ಕೋಟಿ ರು.ಗಳನ್ನು ತೆಗೆದಿರಿಸಿದೆ. ರೀ ವಿಜಯೇಂದ್ರ, ಬೊಮ್ಮಯಿ, ಅಶೋಕ್, ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಯಾಕ್ ಸುಳ್ ಹೇಳ್ತೀರಿ, ಬರ್ರಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಉಡುಪಿ ಗ್ಯಾರಂಟಿ ಸಮಾವೇಶದಲ್ಲಿ ಸವಾಲು ಹಾಕಿದರು.

ಉಡುಪಿ (ಮಾ.14): ಕಾಂಗ್ರೆಸ್ ಸರ್ಕಾರ ಅಭಿವೃದ್ಧಿ ಯೋಜನೆಗಳಿಗೆ 1,20,000 ಕೋಟಿ ರು.ಗಳನ್ನು ತೆಗೆದಿರಿಸಿದೆ. ರೀ ವಿಜಯೇಂದ್ರ, ಬೊಮ್ಮಯಿ, ಅಶೋಕ್, ರಾಜ್ಯ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಯಾಕ್ ಸುಳ್ ಹೇಳ್ತೀರಿ, ಬರ್ರಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ ಎಂದು ಸಿಎಂ ಸಿದ್ದರಾಮಯ್ಯ ಉಡುಪಿ ಗ್ಯಾರಂಟಿ ಸಮಾವೇಶದಲ್ಲಿ ಸವಾಲು ಹಾಕಿದರು.

ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ತೆರಿಗೆ ಹಣದಲ್ಲಿ ಶೇ. 13 ಮಾತ್ರ ನೀಡುತ್ತಿದೆ. ಶೋಭಾ ಕರಂದ್ಲಾಜೆ ಸಹಿತ ರಾಜ್ಯದ 25 ಬಿಜೆಪಿ ಎಂಪಿಗಳು ಈ ಬಗ್ಗೆ ಒಂದು ದಿನಾನೂ ಮಾತನಾಡಿಲ್ಲ. ಅವರೆಲ್ಲಾ ರಾಜ್ಯದ 7 ಕೋಟಿ ಜನತೆಗೆ ದ್ರೋಹ ಮಾಡಿದ್ದಾರೆ. ಅಂತಹವರನ್ನು ಮತ್ತೆ ಗೆಲ್ಲಿಸುತ್ತೀರಾ, ಈ ಬಾರಿ ಬಿಜೆಪಿ ಗೋಬ್ಯಾಕ್ ಎನ್ನಿ ಎಂದು ಕರೆ ನೀಡಿದರು.

Tap to resize

ಬಿಜೆಪಿ ಶಾಸಕರು ಬಂದೇ ಇಲ್ಲ: ಸಮಾರಂಭದ ಅಧ್ಯಕ್ಷತೆ ವಹಿಸಿಕೊಳ್ಳಬೇಕಾಗಿದ್ದ ಉಡುಪಿ ಶಾಸಕ ಯಶಪಾಲ್ ಸುವರ್ಣ ಸೇರಿ ಬಿಜೆಪಿ ಶಾಸಕರು ಸಮಾವೇಶಕ್ಕೆ ಗೈರು ಹಾಜರಾಗಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಈ ಗ್ಯಾರೆಂಟಿ ಸಮಾವೇಶಕ್ಕೆ ಉಡುಪಿ ಜಿಲ್ಲೆ ಬಿಜೆಪಿ 5 ಶಾಸಕರು ಬಂದೇ ಇಲ್ಲ. 

ಬಂದ್ರೆ, ಸಿದ್ದರಾಮಯ್ಯ ಸತ್ಯ ಹೇಳುತ್ತಾನೆ, ಅದನ್ನು ಕೇಳಿಸ್ಕೊಳಕಾಗಲ್ಲ ಅಂತ ಕಾರ್ಯಕ್ರಮಕ್ಕೆ ಬರದೇ ತಪ್ಪಿಸಿಕೊಂಡಿದ್ದಾರೆ, ಗಿರಾಕಿಗಳು ಎಂದು ಲೇವಡಿ ಮಾಡಿದರು. ಬಿಜೆಪಿ ಶಾಸಕರಿಗೆ ಇನ್ವಿಟೇಷನ್ ಕೊಟ್ಟಿದ್ದೀಯಲ್ವಮ್ಮಾ ಎಂದು ಡಿಸಿಯನ್ನು ಕೇಳಿ ಸ್ಪಷ್ಟಪಡಿಸಿಕೊಂಡರು.

Latest Videos

click me!