ಈವರೆಗೆ 90 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ನಡೆಸಲಾಗಿದೆ. ಏ.10 ರವರೆಗೆ ಯಾತ್ರೆ ಮುಂದುವರೆಯಲಿದೆ. ಮಾ.28 ರಂದು ಬೆಂಗಳೂರಿನ ಯಶವಂತಪುರ, ಗೋವಿಂದರಾಜ ನಗರ, ಬಸವನಗುಡಿ, ಯಲಹಂಕ, ಏ.3 ರಂದು ಕೊಳ್ಳೇಗಾಲ, 4-5 ರಂದು ಹನೂರು, 6 ರಂದು ಪಿರಿಯಾಪಟ್ಟಣ, 7 ರಂದು ಕೆ.ಆರ್. ನಗರದಲ್ಲಿ ಯಾತ್ರೆ ನಡೆಯಲಿದೆ. ಉಳಿದಂತೆ ಗುಂಡ್ಲುಪೇಟೆ. ಎಚ್.ಡಿ. ಕೋಟೆ, ಚಾಮುಂಡೇಶ್ವರಿ, ಹುಣಸೂರಿನಲ್ಲಿಯೂ ಯಾತ್ರೆ ನಡೆಸಲಾಗುವುದು ಎಂದು ತಿಳಿಸಿದ ಎಚ್.ಡಿ. ಕುಮಾರಸ್ವಾಮಿ.
ಜನರ ಕಲ್ಯಾಣಕ್ಕಾಗಿ ಶಾಶ್ವತ ಯೋಜನೆಗಳನ್ನೂ ರೂಪಿಸುವ ಉದ್ದೇಶದಿಂದಲೇ ಪಂಚರತ್ನ ಯೋಜನೆ ಹಮ್ಮಿಕೊಂಡಿದ್ದೇವೆ. ನಾಡಿನ ಜನರ ಬದುಕು, ವಿಶೇಷವಾಗಿ ಬಡವರ ಬದುಕು ಹಸನಾಗಬೇಕು ಎಂದ ಅವರು, ಬಿಜೆಪಿಯವರು 2047ರವರೆಗೆ ಅಧಿಕಾರ ಕೇಳುತ್ತಿದ್ದಾರೆ. ಜನತಾದಳಕ್ಕೆ ಐದು ವರ್ಷದ ಆಡಳಿತಕ್ಕೆ ಸಂಪೂರ್ಣ ಬಹುಮತ ಕೊಡಿ, ರಾಮರಾಜ್ಯ ನಿರ್ಮಿಸುತ್ತೇನೆ ಎಂದು ಅವರು ಭರವಸೆ ನೀಡಿದ ಎಚ್‌ಡಿಕೆ.
ಉತ್ತರ ಕರ್ನಾಟಕದಲ್ಲಿ ಈ ಬಾರಿ ಪಕ್ಷಕ್ಕೆ 36 ಸ್ಥಾನಗಳು ಬರಲಿವೆ. ಆದ್ದರಿಂದ ಹಳೇ ಮೈಸೂರು ಭಾಗದಲ್ಲಿ 1994 ರಂತೆ 78-79 ಸ್ಥಾನಗಳನ್ನು ಕೊಡಿ ಎಂದು ಕೇಳುತ್ತಿದ್ದೇನೆ ಎಂದರು. ಸಿದ್ದರಾಮಯ್ಯ ನಾನಿದ್ದಾಗ ಜೆಡಿಎಸ್‌ಗೆ 58 ಸೀಟು ಬಂದಿತ್ತು ಎಂದು ಹೇಳುತ್ತಾರೆ. ನಾನು ಏಕಾಂಗಿಯಾಗಿ ಹೋರಾಟ ನಡೆಸಿ, 40 ಸೀಟುಗಳನ್ನು ಪಡೆದಿದ್ದಾನೆ. ಈ ಬಾರಿ 123 ನನ್ನ ಗುರಿ ಎಂದ ಎಚ್.ಡಿ. ಕುಮಾರಸ್ವಾಮಿ.
ಪಂಚರತ್ನ ಯಾತ್ರೆಯ ಸಮಾರೋಪಕ್ಕೆ ಮೈಸೂರು ಭಾಗದ ಜಿಲ್ಲೆಗಳಿಂದ ಹೆಚ್ಚು ಮಂದಿ ಬಂದಿದ್ದರು. ಇದಲ್ಲದೇ ರಾಜ್ಯದ 31 ಜಿಲ್ಲೆಗಳಿಂದಲೂ ಕಾರ್ಯಕರ್ತರು ಬಂದಿದ್ದರು. ಸುಮಾರು 8 ಲಕ್ಷ ಮಂದಿ ಊಟ ಮಾಡಿದ್ದಾರೆ. ನಾವು ದುಡ್ಡು ಕಟ್ಟಿರಬಹುದು. ಆದರೆ ಜನರನ್ನು ಕರೆತರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಎಸಿ, ಖಾಸಗಿ ಬಸ್‌ಗಳ ಚಾಲಕರು ಶ್ರಮವಹಿಸಿದ್ದಾರೆ. ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿ ಭದ್ರತಾ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪಕ್ಷದ ಎಲ್ಲಾ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ಸಾಥ್ ನೀಡಿದ್ದಾರೆ ಎಂದು ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದರು.
ಇದೊಂದು ಐತಿಹಾಸಿಕ ಕಾರ್ಯಕ್ರಮ. ಯಾರೂ ಕೂಡ ಇಷ್ಟೊಂದು ಜನ ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ದೇವೇಗೌಡರು ಟ್ರಾಲಿಯಲ್ಲಿ ಬಂದಾಗ ಜನ ಕಣ್ಣೀರು ಹಾಕಿದರು. ನನಗೂ ಕಣ್ಣೀರು ಬಂತು. ಇದೊಂದು ಭಾವನಾತ್ಮಕ ಸನ್ನಿವೇಶ ಎಂದ ಕುಮಾರಸ್ವಾಮಿ.
ಪಂಚರತ್ನ ಯಾತ್ರೆಯ ಸಮಾರೋಪಕ್ಕೆ ಸುಮಾರು 8 ಲಕ್ಷ ಮಂದಿ ನೆರೆದಿದ್ದರು. ಇದೊಂದು ಐತಿಹಾಸಿಕ ಕಾರ್ಯಕ್ರಮ. ಯಾರೂ ಕೂಡ ಇಷ್ಟೊಂದು ಜನ ಬರುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ದೇವೇಗೌಡರು ಟ್ರಾಲಿಯಲ್ಲಿ ಬಂದಾಗ ಜನ ಕಣ್ಣೀರು ಹಾಕಿದರು. ನನಗೂ ಕಣ್ಣೀರು ಬಂತು. ಇದೊಂದು ಭಾವನಾತ್ಮಕ ಸನ್ನಿವೇಶ ಎಂದ ಎಚ್‌ಡಿಕೆ.
ಶಾಸಕ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಎಂ. ಅಶ್ವಿನ್ ಕುಮಾರ್, ಎ. ಮಂಜುನಾಥ್, ಭೋಜೇಗೌಡ, ಸಿ.ಎನ್. ಮಂಜೇಗೌಡ, ಮಾಜಿ ಶಾಸಕ ರಮೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ನಗರಾಧ್ಯಕ್ಷ ಕೆ.ಟಿ. ಚಲುವೇಗೌಡ, ಮುಖಂಡರಾದ ಎಚ್.ಕೆ. ರಮೇಶ್, ಕೆ.ವಿ. ಮಲ್ಲೇಶ್, ಜಯಪ್ರಕಾಶ್ ಚಿಕ್ಕಣ್ಣ, ಸಿ.ಜೆ. ದ್ವಾರಕೀಶ್, ಎಸ್‌ಬಿಎಂ ಮಂಜು, ಪ್ರೇಮಾ ಶಂಕರೇಗೌಡ, ಅಯೂಬ್‌ಖಾನ್ ಮೊದಲಾದವರು ಇದ್ದರು.