ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಬೈ ಎಲೆಕ್ಷನ್‌ ಗೆಲ್ಲಲು ಬಿಜೆಪಿ ಪ್ಲಾನ್

First Published | Sep 21, 2020, 4:20 PM IST

ಜೆಡಿಎಸ್ ಶಾಸಕ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದ ತೆರವಾದ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಇನ್ನೂ ಚುನಾವಣೆಗೆ ದಿನಾಂಕ ಪ್ರಕಟವಾಗಿಲ್ಲ ಆಗಲೇ  ಶಿರಾ ಉಪಚುನಾವಣೆ ಕದನ ರಂಗೇರಿದೆ. ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಇನ್ನು ಇತ್ತ ಆಡಳಿತರೂಢ ಬಿಜೆಪಿ ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಬೈ ಎಲೆಕ್ಷನ್‌ ಗೆಲ್ಲಲು ಪ್ಲಾನ್ ಮಾಡಿದೆ. 

ಕೆ.ಆರ್.ಪೇಟೆ ಮಾದರಿಯಲ್ಲೇ ಶಿರಾ ಬೈ ಎಲೆಕ್ಷನ್‌ ಗೆಲ್ಲಲು ಬಿಜೆಪಿ ಪ್ಲಾನ್
ಉಪಚುನಾವಣೆ ಪ್ರಚಾರಕ್ಕೆ ಚಾಲನೆ ಕೊಟ್ಟ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ
Tap to resize

ಇಂದು (ಸೋಮವಾರ) ಶಿರಾ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆ ನಿಮಿತ್ತ ಸಂತೆಪೇಟೆಯಲ್ಲಿ ಬೂತ್ ಮಟ್ಟದ ಸಭೆ ನಡೆಸಿದ ಬಿವೈ ವಿಜಯೇಂದ್ರ
ಕಾರ್ಯಕರ್ತರ ಗೆಲ್ಲಿಸುವ ಹುಮ್ಮಸ್ಸು ಕಂಡು ಸಂತಸ ವ್ಯಕ್ತಪಡಿಸಿದ ಬಿ.ವೈ.ವಿಜಯೇಂದ್ರ
ಇದೇ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಕೆ.ಆರ್.ಪೇಟೆಯಲ್ಲಿ ವಿಜಯ ಸಾಧಿಸಿದಂತೆ ಶಿರಾದಲ್ಲೂ ಖಾತೆ ತೆರೆಯುತ್ತೇವೆ. ಕೆ.ಆರ್.ಪೇಟೆಯಲ್ಲಿ 10 ಸಾವಿರ ಮತಗಳ ಅಂತದಿಂದ ಗೆಲುವು ಸಾಧಿಸಿದ್ವಿ. ಅದೇ ರೀತಿ ಶಿರಾದಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದಿಲ್ಲ ಎಂದು ವಿರೋಧ ಪಕ್ಷ ಬೊಬ್ಬೆಹೊಡೆದಿದ್ರು. ನಮ್ಮನ್ನ ಲೆಕ್ಕಕೆ ತೆಗೆದುಕೊಂಡಿರಲಿಲ್ಲ. ಮುಖಂಡರು, ಕಾರ್ಯಕರ್ತರು ಎಲ್ಲಾ ಒಗ್ಗಟ್ಟಾಗಿ ಪ್ರಯತ್ನ ಮಾಡಿದ್ವಿ ಎಂದರು.
ಅದೇ ರೀತಿ ಶಿರಾದಲ್ಲೂ ಬಿಜೆಪಿ ಅಭ್ಯರ್ಥಿ ಯಾರೇ ಆಗಿದರೂ ಕಣಕ್ಕಿಳಿಸಿದವರನ್ನ ಒಗ್ಗಟ್ಟಾಗಿ ಗೆಲ್ಲಿಸ್ತಿವೆ ಎಂದು ಪಣತೊಟ್ಟ ವಿಜಯೇಂದ್ರ

Latest Videos

click me!