ರಂಗೇರಿದ ಶಿರಾ ಬೈ ಎಲೆಕ್ಷನ್‌: ಅಖಾಡಕ್ಕಿಳಿಯಲು ಜೋಡೆತ್ತು ರೆಡಿ..!

First Published | Sep 20, 2020, 3:53 PM IST

ಜೆಡಿಎಸ್‌ನ ಸತ್ಯನಾರಾಯಣ ಅವರ ಅಕಾಲಿಕ ನಿಧನದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಆದ್ರೆ, ಇನನ್ಊ ದಿನಾಂಕ ನಿಗದಿಯಾಗಿಲ್ಲ. ಆಗಲೇ  ಶಿರಾ ಉಪಚುನಾವಣೆಯ ಕಾವು ರಂಗೇರುತ್ತಿದೆ. ಈ ಚುನಾವಣೆಯಲ್ಲೂ ಜೋಡೆತ್ತುಗಳು ಹುಟ್ಟಿಕೊಂಡಿವೆ. ಈ ಹಿಂದಿನ ಹಳೆ ದ್ವೇಷವನ್ನು ಮರೆತು ಒಂದಾಗಿ ಅಖಾಡಕ್ಕಿಳಿದಿವೆ. ಹಾಗಾದ್ರೆ, ಶಿರಾ ಉಪಚುನಾವಣೆ ಜೋಡೆತ್ತುಗಳಾವುವು ಇಲ್ಲಿವೆ ನೋಡಿ ಫೋಟೋಸ್

ಶಿರಾ ಉಪಚುನಾವಣೆಯ ಕಾವು ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಖಚಿತವಾಗಿರುವ ಜಯಚಂದ್ರ ಅವರು ಗೆಲುವಿಗಾಗಿ ಕಸರತ್ತು ನಡೆಸುತ್ತಿದ್ದಾರೆ..
undefined
ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಆರಂಭಿಕ ತೊಡಕಾಗಿದ್ದ ಕೆ.ಎನ್​.ರಾಜಣ್ಣ ಬಂಡಾಯ ಶಮನ ಮಾಡಿ ಟಿ.ಬಿ ಜಯಚಂದ್ರ ಅವರನ್ನ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಲಾಗಿದೆ.
undefined
Tap to resize

ಈ ಹಿನ್ನೆಲೆಯಲ್ಲಿ ರಾಜಕೀಯ ಬದ್ಧ ವೈರಿಗಳಾಗಿದ್ದ ಕಾಂಗ್ರೆಸ್ ನಾಯಕರಾದ ಕೆ.ಎನ್ ರಾಜಣ್ಣ ಮತ್ತು ಟಿಬಿ ಜಯಚಂದ್ರ ಒಂದಾಗಿದ್ದಾರೆ.
undefined
ಹಳೆ ವೈಷಮ್ಯಗಳನ್ನ ಮರೆತು ಶಿರಾ ಬೈ ಎಲೆಕ್ಷನ್ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಅವರು ಇಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಮನೆಗೆಭೇಟಿ ನೀಡಿದರು.
undefined
ರಾಜಣ್ಣರನ್ನು ಕ್ಯಾತ್ಸಂದ್ರ ಮನೆಯಲ್ಲಿ ಭೇಟಿಯಾಗಿ ಕುಶಲೋಪರಿ ನಡೆಸಿ ಚುನಾವಣೆಗೆ ಸಹಕಾರ ಕೋರಿದರು.
undefined
ಮಾಜಿ ಶಾಸಕ ಕೆ.ಎನ್ ರಾಜಣ್ಣ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಶಿರಾ ಉಪಚುನಾವಣೆಯ ಕೋಚೇರ್ಮನ್ ಆಗಿ ನೇಮಕ ಮಾಡಿದ್ದಾರೆ.
undefined
ಶಿರಾ ಕ್ಷೇತ್ರದ ಉಪಚುನಾವಣೆಯನ್ನು ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಎದುರಿಸಲು ಕಾಂಗ್ರೆಸ್ ತೀರ್ಮಾನಿಸಿದೆ.
undefined

Latest Videos

click me!