ಯಡಿಯೂರಪ್ಪ ಭೇಟಿಯಾದ ಬಿ.ಎಲ್. ಸಂತೋಷ್: ಬೈಎಲೆಕ್ಷನ್‌ ಕುರಿತು ಚರ್ಚೆ

Suvarna News   | Asianet News
Published : Oct 15, 2021, 01:02 PM IST

ಬೆಂಗಳೂರು(ಅ.15):  ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇದೇ ಮೊದಲ ಬಾರಿಗೆ ಬಿ.ಎಸ್. ಯಡಿಯೂರಪ್ಪ ಅವರನ್ನ ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಇಂದು(ಶುಕ್ರವಾರ) ಭೇಟಿ ಮಾಡಿದ್ದಾರೆ.  

PREV
14
ಯಡಿಯೂರಪ್ಪ ಭೇಟಿಯಾದ ಬಿ.ಎಲ್. ಸಂತೋಷ್: ಬೈಎಲೆಕ್ಷನ್‌ ಕುರಿತು ಚರ್ಚೆ

ಇಂದು ನಗರದ ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾದ ಬಿ.ಎಲ್. ಸಂತೋಷ್‌ ಪ್ರಸಕ್ತ ರಾಜಕೀಯ ವಿದ್ಯಮಾನಗಳು ಮತ್ತು ಉಪಚುನಾವಣೆ ಸಂಬಂಧ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ. 

24

ವಿಜಯದಶಮಿ ಹಿನ್ನಲೆಯಲ್ಲಿ ಉಭಯ ನಾಯಕರು ಪರಸ್ಪರ ಬನ್ನಿ ಹಂಚಿಕೊಂಡಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಯಡಿಯೂರಪ್ಪ ಜೊತೆ ಚರ್ಚೆ ಮಾಡಿ ಬಿ.ಎಲ್.ಸಂತೋಷ್ ತೆರಳಿದ್ದಾರೆ. 

34

ಉಪಚುನಾವಣೆ ನಡೆಯುವ ಎರಡೂ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಎರಡೆರಡು ದಿನ ಪ್ರಚಾರ ಮಾಡಲಿದ್ದಾರೆ. ಮೊದಲ ಹಂತದಲ್ಲಿ ಸಿಂದಗಿ ಕ್ಷೇತ್ರದಲ್ಲಿ ಅ.20  ಮತ್ತು ಅ. 21 ಹಾಗೂ ಹಾನಗಲ್ ಕ್ಷೇತ್ರದಲ್ಲಿ ಅ.22 ಮತ್ತು ಅ.23 ತಾರೀಖು ಪ್ರಚಾರ ನಡೆಸಲಿದ್ದಾರೆ. 

44

ಮೊನ್ನೆ ರಾತ್ರಿ ಬೆಂಗಳೂರಿಗೆ ಆಗಿಮಿಸಿರುವ ಬಿ.ಎಲ್.ಸಂತೋಷ್ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ್ದರು. ಇಂದು ಬಿಎಸ್‌ವೈ ಅವರನ್ನ ಭೇಟಿಯಾದ ಬಿ.ಎಲ್.ಸಂತೋಷ್. 

click me!

Recommended Stories