ಕೊರೋನಾ ಅಟ್ಯಾಕ್ ಆದ್ರೂ ರೇಣುಕಾಚಾರ್ಯ ಇದನ್ನು ಮಾತ್ರ ಮರೆತಿಲ್ಲ

First Published | Apr 19, 2021, 4:25 PM IST

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ  ವೈದ್ಯರ ಸಲಹೆ ಸೂಚನೆ ಮೇರೆಗೆ ರೇಣುಕಾಚಾರ್ಯ ಸದ್ಯ ಹೊನ್ನಾಳಿಯ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಆತಂಕದ ಮಧ್ಯೆಯೂ ಯೋಗವನ್ನು ಮಾಡುವುದು ಮಾತ್ರ ಮರೆತಿಲ್ಲ.

ಹೊನ್ನಾಳಿ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಈ ಹಿನ್ನೆಲೆಯಲ್ಲಿ ಅವರೀಗ ಮನೆಯಲ್ಲೇ ಐಸೊಲೇಷನ್​ ಆಗಿದ್ದು, ತನ್ನ ಜೊತೆಗಿದ್ದವರೂ ಸಹ ಕೊರೋನಾ ಪರೀಕ್ಷೆ ಮಾಡಿಕೊಳ್ಳಿ, ಮುಂಜಾಗ್ರತೆ ವಹಿಸಿ ಎಂದು ವಿನಂತಿಸಿದ್ದಾರೆ.
ಆರೋಗ್ಯದಲ್ಲಿ ಏರುಪೇರಾದರೂ ಸಹ ರೇಣುಕಾಚಾರ್ಯ ಅವರು ಯೋಗ ಮೊರೆ ಹೋಗಿದ್ದಾರೆ
Tap to resize

ಹೊನ್ನಳ್ಳಿಯ ಮನೆಯಲ್ಲೇ ಐಸೊಲೇಷನಲ್ಲಿ ಇರುವ ರೇಣುಕಾಚಾರ್ಯ ಅವರು ಯೋಗ ಮಾಡಿ ಎಲ್ಲರ ಗಮನಸೆಳೆದರು.
ಯೋಗಾಸನದ ನಾನಾ ಭಂಗಿಗಳನ್ನ ಮಾಡಿ ಅವರು ಗಮನ ಸೆಳೆದಿದ್ದಾರೆ.
ತ್ರಿಕೋನಾಸನ , 3 to 8 ಶೀರ್ಸಾಸನ , 9 ರಿಂದ 12 , ಸರ್ವಾಂಗಾಸನ, ,13 to 15 ಏಕಪಾದ ಹಾಲಾಸನ , 16 to 20 ಉಷ್ಟ್ರಾಸನ , 21 ಸೇತು ಬಂಧಾಸನ, 22 to 25 ಉಪವಿಷ್ಟಕೋನಾಸನ , 26 to 29 ಊರ್ಧ್ವ ಮುಖ ಹನುಮಾನಾಸನ, 30 ಪಾದಾಂಗುಷ್ಟಾಸನ, 31 ಪರ್ವತಾಸನ ಮಾಡಿದರು.
ಯೋಗಾಸನದ ನಾನಾ ಭಂಗಿಗಳ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ಹರಿದಾಡುತ್ತಿವೆ.

Latest Videos

click me!