ಅಖಾಡಕ್ಕಿಳಿದ ನಿಖಿಲ್ ಕುಮಾರಸ್ವಾಮಿ, ಸಂಚಲನ ಮೂಡಿಸಿದ ಯುವ ನಾಯಕನ ನಡೆ

Published : Nov 09, 2020, 09:52 PM IST

ರಾಜ್ಯದಲ್ಲಿ ಕೊಂಚ ಕೊರೋನಾ ಕಡಿಮೆಯಾಗುತ್ತಿದ್ದು, ರಾಜಕೀಯ ನಾಯಕರ ಪಕ್ಷ ಸಂಘಟನೆಗೆ ಶುರುಮಾಡಿದ್ದಾರೆ. ಅದರಲ್ಲೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ದಿಢೀರ್ ಅಖಾಡಕ್ಕಿಳಿದಿದ್ದು, ಅವರ ನಡೆ ರಾಜ್ಯ ರಾಜಕಾರಣಲ್ಲಿ ಸಂಚಲನ ಮೂಡಿಸಿದೆ.

PREV
18
ಅಖಾಡಕ್ಕಿಳಿದ ನಿಖಿಲ್ ಕುಮಾರಸ್ವಾಮಿ, ಸಂಚಲನ ಮೂಡಿಸಿದ ಯುವ ನಾಯಕನ ನಡೆ

ಅಭಿಮಾನಿಗಳು ರಾಜ್ಯಾದ್ಯಂತ ಇರುವುದರಿಂದ ಕರ್ಮಭೂಮಿಯಾಗಿರುವ ಮಂಡ್ಯವನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದ ನಿಖಿಲ್ ಕುಮಾರಸ್ವಾಮಿ, ಹೆಚ್ಚಾಗಿ ರಾಮನಗರ ಜಿಲ್ಲಾ ಪ್ರವಾಸ ಮಾಡುತ್ತಿರುವುದು, ಜೆಡಿಎಸ್ ಕಾರ್ಯಕರ್ತರನ್ನ ಭೇಟಿಯಾಗುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.

28

ಹೌದು... ಶನಿವಾರ ಅಷ್ಟೇ ರಾಮನಗರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ನಿಖಿಲ್ ಕುಮಾರಸ್ವಾಮಿ ಇಂದು (ಸೋಮವಾರ) ಸಹ ಮೊತ್ತೊಮ್ಮೆ ರಾಮನಗರಕ್ಕೆ ಎಂಟ್ರಿ ಕೊಟ್ಟು ಕಾರ್ಯಕರ್ತರನ್ನ ಭೇಟಿ ಮಾಡಿದ್ದಾರೆ. 

38

ರಾಮನಗರದ ಯಲಚವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಿವನಹಳ್ಳಿದೊಡ್ಡಿಯಲ್ಲಿ ಒಂದು ವರ್ಷದ ಹಿಂದೆ ಮಂಜೂರಾಗಿರುವ ಸೇತುವೆ ಕಾಮಗಾರಿ ಕೆಲಸ ನಿಧಾನವಾಗಿ ಸಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಯುವ ಘಟಕದ ರಾಜ್ಯಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿಯವರು ಜೆಡಿಎಸ್ ಮುಖಂಡರೊಂದಿಗೆ ಇಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

48

ಶಿಥಿಲವಾಗಿರುವ ಕನಕಪುರ ತಾಲೂಕಿನ ಶೀಥಲವಾಡಿ ಕಿರಿಯ ಪ್ರಾಥಮಿಕ ಶಾಲೆಯನ್ನು ವೀಕ್ಷಣೆ ಮಾಡಿ ಇದರ ದುರಸ್ತಿಗೆ ಮುಂದಾದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ.

58

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಅವಧಿಯಲ್ಲಿ ಅಭಿವೃದ್ಧಿಗೊಳಿಸಿದ್ದ ರಾಮನಗರದ ಯಲಚವಾಡಿಯ ರಾಹುತನಹಳ್ಳಿಯಲ್ಲಿ ಕೆರೆಯನ್ನು ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಯವರು  ಜೆಡಿಎಸ್ ಮುಖಂಡರೊಂದಿಗೆ ವೀಕ್ಷಣೆ ಮಾಡಿದರು

68

ನಿಖಿಲ್ ಕುಮಾರಸ್ವಾಮಿ ರವರು 95 ವರ್ಷದ ಹಿರಿಯ ಜನತಾ ದಳ  ಕಾರ್ಯಕರ್ತರಾಗಿದ್ದ  ಚಿಕ್ಕಗುಂಡೇಗೌಡ ಹಾಗು ಗಿರಿಜಮ್ಮ ದಂಪತಿಗಳ ಅಪೇಕ್ಷೆಯ ಮೇರೆಗೆ ಅವರ ಮನೆಗೆ ಭೇಟಿ ನೀಡಿದರು.

78

ನಿಖಿಲ್ ಕುಮಾರಸ್ವಾಮಿ ಇಂದು ರಾಮನಗರ ಜಿಲ್ಲೆಗೆ ಸೇರಿದ ಮರಳವಾಡಿ ಹೋಬಳಿಯ ತೇರುಬೀದಿ ಗ್ರಾಮದಲ್ಲಿ ಆನೆ ತುಳಿತಕ್ಕೊಳಗಾಗಿ  ಮೃತಪಟ್ಟ ಶ್ರೀ ತಿಮ್ಮಯ್ಯನವರ ಮನೆಗೆ ಭೇಟಿ ನೀಡಿ ಅವರ ಕುಟುಂಬದವರಿಗೆ ಸಾಂತ್ವನ ಹೇಳಿದರು.

88

ರಾಮನಗರದ ಹಾರೋಹಳ್ಳಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯ‌ ಸಮಾರಂಭದಲ್ಲಿ ಭಾಗಿಯಾದ ಸಂದರ್ಭ.

click me!

Recommended Stories