ಈ ಬಾರಿ ಬಿಜೆಪಿ ಹೈದರಾಬಾದ್‌ನಲ್ಲಿ ಅಸಾದುದ್ದೀನ್ ಓವೈಸಿ ವಿರುದ್ಧ ಕನಿಷ್ಠ ಹೋರಾಟ ತೋರುವ ಸ್ಪರ್ಧಿಯನ್ನು ಕಣಕ್ಕೆ ಇಳಿಸಿದೆ.
ವಿರಿಂಚಿ ಹಾಸ್ಪಿಟಲ್ಸ್‌ನ ಚೇರ್ಮನ್ ಆಗಿರುವ ಸನಾತನ ಶಕ್ತಿಯಾಗಿ ಗುರುತಿಸಿಕೊಂಡಿರುವ ಮಾಧವಿ ಲತಾ ಅವರನ್ನು ಬಿಜೆಪಿ ಇಲ್ಲಿಂದ ಕಣಕ್ಕಿಳಿಸಿದೆ.
ಕೊಂಪೆಲ್ಲಾ ಮಾಧವಿ ಲತಾ ಅಥವಾ ಮಾಧವಿ ಲತಾ ಅವರು ಸಾಂಸ್ಕೃತಿಕ ಕಾರ್ಯಕರ್ತೆ. 2019 ರಲ್ಲಿ ಕಾನೂನುಬಾಹಿರವಾದ ತ್ರಿವಳಿ ತಲಾಖ್ ವಿರುದ್ಧ ಇವರು ಮಾಡಿದ್ದ ಪ್ರಚಾರ ಪ್ರಧಾನಿ ಮೋದಿ ಅವರ ಗಮನಸೆಳೆದಿತ್ತು.
ಇತ್ತೀಚೆಗೆ ಆಪ್ ಕೀ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಧವಿ ಲತಾಗೆ ಪ್ರಮುಖ ಪ್ರಶ್ನೆಯೊಂದನ್ನು ಕೇಳಲಾಗಿತ್ತು. ಮುಸ್ಲಿಂ ಸಮುದಾಯದ ಆಂತರಿಕ ವಿಚಾರಗಳಲ್ಲಿ ನೀವು ಮೂಗು ತೂರಿಸೋದ್ಯಾಕೆ? ಎಂದು ಪ್ರಶ್ನಿಸಲಾಗಿತ್ತು.
ಇದಕ್ಕೆ ಅಷ್ಟೇ ಸ್ಪಷ್ಟವಾಗಿ ಉತ್ತರ ನೀಡಿದ್ದ ಮಾಧವಿ ಲತಾ ಮುಸ್ಲಿಂ ಹೆಣ್ಣುಮಕ್ಕಳು ಬೇರೆಯವರಲ್ಲ. ಅವರೂ ನಮ್ಮ ಪ್ರಜೆಗಳು. ದೇಶದ ಪ್ರಜೆಯಾಗಿ ನಾನು ಇದರ ಬಗ್ಗೆ ಮಾತನಾಡಬಹುದು ಎಂದಿದ್ದರು.
ಇತ್ತೀಚೆಗೆ ಅವರ ಪ್ರಚಾರದ ವೇಳೆ ಬುರ್ಕಾ ಧರಿಸಿದ್ದ ಸಾಕಷ್ಟು ಮುಸ್ಲಿಂ ಹೆಣ್ಣುಮಕ್ಕಳು ಇವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಫೋಟೋ ವೈರಲ್ ಆಗಿತ್ತು.
ನಿಜಾಮ್ ಕಾಲೇಜಿನಲ್ಲಿ ಸಾರ್ವಜನಿಕ ಆಡಳಿತದಲ್ಲಿ ಪದವಿ ಮತ್ತು ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಸಾಂಸ್ಕೃತಿಕ ಕಾರ್ಯಕರ್ತೆ ಮಾಧವಿ ಲತಾ.
ಮಾಧವಿ ಲತಾ ಅವರು 2019 ರಲ್ಲಿ ಕಾನೂನುಬಾಹಿರವಾದ ತ್ರಿವಳಿ ತಲಾಖ್ ವಿರುದ್ಧ ಸಕ್ರಿಯವಾಗಿ ಪ್ರಚಾರ ಮಾಡಿದರು. ಅವರು ಹಳೇ ಹೈದರಾಬಾದ್‌ನಲ್ಲಿ ಈ ಸಮಸ್ಯೆಯನ್ನು ಪ್ರಮುಖವಾಗಿ ಪ್ರಸ್ತಾಪಿಸಿ, ಈ ಪದ್ಧತಿಯನ್ನು ರದ್ದುಗೊಳಿಸುವಂತೆ ಮುಸ್ಲಿಂ ಹೆಣ್ಣುಮಕ್ಕಳೊಂದಿಗೆ ಸೇರಿ ಒತ್ತಾಯಿಸಿದ್ದರು.
49 ವರ್ಷದ ಶ್ರೀಮತಿ ಲತಾ ಅವರು ಪ್ರಸ್ತುತ ಹೈದರಾಬಾದ್ ಮೂಲದ ಪ್ರಮುಖ ಆರೋಗ್ಯ ಸಂಸ್ಥೆಯಾದ ವಿರಿಂಚಿ ಹಾಸ್ಪಿಟಲ್ಸ್‌ನ ಅಧ್ಯಕ್ಷರಾಗಿದ್ದಾರೆ.
ರೋಗಿಗಳಿಗೆ ಹೆಚ್ಚಿನ ಶುಲ್ಕ ವಿಧಿಸಿದ ಆರೋಪದ ನಂತರ ಆರೋಗ್ಯ ಅಧಿಕಾರಿಗಳು ಕೋವಿಡ್-19 ಚಿಕಿತ್ಸೆಗಾಗಿ ಅದರ ಪರವಾನಗಿಯನ್ನು ರದ್ದುಗೊಳಿಸಿದಾಗ ವಿರಿಂಚಿ ಹಾಸ್ಪಿಟಲ್ಸ್ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಮುಸ್ಲಿಂ ಹೆಣ್ಣುಮಕ್ಕಳು ಹಾಗೂ ಹಿಂದೂ ಮಹಿಳೆಯರ ವೋಟ್‌ಗಳ ಮೇಲೆ ಹೆಚ್ಚಾಗಿ ನೆಚ್ಚಿಕೊಂಡಿರುವ ಮಾಧವಿ ಲತಾ, ಓವೈಸಿ ವಿರುದ್ಧ ದೊಡ್ಡ ಮಟ್ಟದ ಸ್ಪರ್ಧೆ ನೀಡಲು ಸಜ್ಜಾಗಿದ್ದಾರೆ.
ಮೂವರು ಮಕ್ಕಳನ್ನು ಹೊಂದಿರುವ ಮಾಧವಿ ಲತಾ ಅವರ ಇಬ್ಬರು ಮಕ್ಕಳೀಗ ಐಐಟಿ ಮದ್ರಾಸ್‌ನಲ್ಲೊ ಓದುತ್ತಿದ್ದಾರೆ. ಹೋಮ್ ಸ್ಕೂಲಿಂಗ್ ನಡೆಸಿಯೇ ಮಕ್ಕಳನ್ನು ಐಐಟಿಯನ್ ಮಾಡಿರುವುದು ವಿಶೇಷವಾಗಿದೆ.
ವೃತ್ತಿಪರ ಭರತನಾಟ್ಯಂ ಡಾನ್ಸರ್ ಆಗಿರುವ ಮಾಧವಿ ಲತಾ ಅವರು ಹೆಣ್ಣುಮಕ್ಕಳ ಶಿಕ್ಷಣದ ಪ್ರಾಯೋಜಕರಾಗಿದ್ದಾರೆ ಮತ್ತು ಆರೋಗ್ಯ ಶಿಬಿರಗಳನ್ನು ಆಯೋಜಿಸುವಲ್ಲಿ ಮತ್ತು ಪ್ರವಾಹ ನೆರವು ನೀಡುವಲ್ಲಿ ಅವರ ಪ್ರಯತ್ನಗಳಿಗೆ ಹೆಸರುವಾಸಿಯಾಗಿದ್ದಾರೆ.