ಡಿಜೆ ಹಳ್ಳಿ ಗಲಭೆಗೆ ಕಾಂಗ್ರೆಸ್ ಹಾಗೂ ಎಸ್‌ಡಿಪಿಐ ಕಾರಣ ಎಂಬ ರೋಷನ್ ಬೇಗ್ ಆರೋಪಕ್ಕೆ ಜಮೀರ್ ಅಹಮ್ಮದ್ ಖಾನ್ ಕಿಡಿಕಾರಿದ್ದಾರೆ.
ಡಿಜೆ ಹಳ್ಳಿ ಗಲಭೆ ಪ್ರಕರಣ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹಾಗೂ ರೋಷನ್ ಬೇಗ್ ಅವರ ನಡುವಿನ ಮತ್ತೊಂದು ಸುತ್ತಿನ ಟ್ವೀಟ್ ವಾರ್
ಕಾಂಗ್ರೆಸ್ ಕಳೆದ 10 ವರ್ಷಗಳಿಂದ ಎಸ್‌ಡಿಪಿಐಗೆ ಬೆಂಬಲವಾಗಿ ಕೆಲಸ ಮಾಡುತ್ತಿದೆ. ಈಗ ಅವರಿಗೆ ತಮ್ಮ ಸ್ವಂತ ಶಾಸಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ಘಟನೆಗೆ ಕಾಂಗ್ರೆಸ್ ಕಾರಣ, ಬೆಂಗಳೂರು ಗಲಭೆಗೆ ಕಾಂಗ್ರೆಸ್ ಹೊಣೆ ಹೊರಬೇಕು' ಎಂದು ರೋಷನ್ ಬೇಗ್ ಹೇಳಿದ್ದರು.
ಇದೀಗ ಇದಕ್ಕೆ ಸರಣಿ ಟ್ವೀಟ್ ಮೂಲಕ ಜಮೀರ್ ತಿರುಗೇಟು ನೀಡಿದ್ದಾರೆ
ಸಂಘಿ ನಿಷ್ಠೆ ಸಾಬೀತು ಮಾಡುವ ಬದಲು ಈಶ್ವರಪ್ಪನವರು ಹೇಳಿದಂತೆ ಬಿಜೆಪಿ ಕಚೇರಿ ಕಸ ಗುಡಿಸಿ ಎಂದು ರೋಷನ್ ಬೇಗ್‌ಗೆ ಹೇಳಿದ ಜಮೀರ್
ರೋಷನ್ ಬೇಗ್ ವಿರುದ್ಧ ಜಮೀರ್ ಟ್ವೀಟ್