ಅರಸೀಕೆರೆ ಶಾಸಕ ಶಿವಲಿಂಗೇಗೌಡರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನೀಡಿದ ಸವಾಲನ್ನು ಜೆಡಿಎಸ್ ಮುಖಂಡರು ಸ್ವೀಕರಿಸಿದ್ದಾರೆ. 2028ರ ಚುನಾವಣೆಯಲ್ಲಿ ಅವರಿಗೆ ಸೋಲು ಖಚಿತ ಎಂದು ವಾಗ್ದಾಳಿ ನಡೆಸಿದ್ದು, ಕಳೆದ 15 ವರ್ಷಗಳ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡುವಂತೆ ಸವಾಲು ಹಾಕಿದ್ದಾರೆ.
ಹಾಸನ: ಇತ್ತೀಚೆಗೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ವಿಚಾರವಾಗಿ ಶಾಸಕ ಶಿವಲಿಂಗೇಗೌಡರು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ನೀಡಿರುವ ಸವಾಲನ್ನು ಸ್ವೀಕರಿಸುತ್ತೇವೆ. 2028 ರಲ್ಲಿ ಅವರಿಗೆ ಸೋಲು ಖಚಿತ ಎಂದು ಜೆಡಿಎಸ್ ಮುಖಂಡ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಮತ್ತು ಜಿಪಂ ಮಾಜಿ ಸದಸ್ಯ ಅಶೋಕ್ ವಾಗ್ದಾಳಿ ನಡೆಸಿದರು.
26
ಅರಸೀಕೆರೆ ಕ್ಷೇತ್ರ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಅರಸೀಕೆರೆ ಕ್ಷೇತ್ರದ ಶಾಸಕರ ಸವಾಲನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದೇವೆ. ಅವರ ಪ್ರತಿಯೊಂದು ರಾಜಕೀಯ ತಂತ್ರಕ್ಕೂ ಪ್ರತಿತಂತ್ರ ರೂಪಿಸಲು ನಾವು ಸಿದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.
36
ಶಾಸಕ ಸ್ಥಾನಕ್ಕೆ ಗೌರವ ತರಲ್ಲ
ರೇವಣ್ಣ ಅವರ ಮನೆಯಲ್ಲಿ ಊಟ ಮಾಡಿಕೊಂಡು ನಂತರ ಅವರ ವಿರುದ್ಧ ಮಾತನಾಡುವುದು ಶಾಸಕ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. 2008 ರಲ್ಲಿ ನೀವು ಶಾಸಕರೂ ಅಲ್ಲ. ಆಗ ಖಾರ ಬಿಸ್ಕೆಟ್, ಟವಲ್ ಕೊಟ್ಟು ರಾಜಕೀಯ ನಡೆಸಿದ್ದೀರಿ. 15 ವರ್ಷ ಶಾಸಕರಾಗಿದ್ದರೂ ಕ್ಷೇತ್ರಕ್ಕೆ ಶೋಭೆ ತರಲಿಲ್ಲ. 2028 ರಲ್ಲಿ ಜನತೆ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಶಾಸಕರಾಗಿ ಕಳೆದ 15 ವರ್ಷಗಳ ಅಭಿವೃದ್ಧಿ ಕುರಿತು ಶ್ವೇತಪತ್ರ ಬಿಡುಗಡೆ ಮಾಡಲಿ. ಕಳೆದ ಎರಡುವರೆ ವರ್ಷಗಳಲ್ಲಿ ಏನು ಸಾಧನೆ ಮಾಡಿದ್ದಾರೆ ಎಂಬುದನ್ನೂ ಜನತೆಗೆ ತಿಳಿಸಲಿ. ಚಿಕ್ಕ ತಿರುಪತಿ ರಾಜಗೋಪುರ ಆರು ವರ್ಷಗಳಿಂದ ಉದ್ಘಾಟನೆ ಆಗಿಲ್ಲ, ಪಿಎಂ ಆವಾಸ್ ಯೋಜನೆ ಲಾಟರಿ ಹಂತದಲ್ಲೇ ನಿಂತಿದೆ ಎಂದು ಆರೋಪಿಸಿದರು. ನಿಮ್ಮ 20 ವರ್ಷಗಳ ಆಸ್ತಿ ವಿವರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
56
ಏನೂ ಮಾಡದವರು ಶಾಸಕರಾಗಿದ್ದಾರೆ
ಜೆಡಿಎಸ್ ಮುಖಂಡ ಅಶೋಕ್ ಮಾತನಾಡಿ, 2006 ರ ಬಾಣಾವರ ಗ್ರಾಪಂ ಚುನಾವಣೆಯಲ್ಲಿ ಜಿವಿ ಸಿದ್ದಪ್ಪ ಹಾಗೂ ಜಯಣ್ಣ ಬಂದಾಗ ಶಿವಲಿಂಗೇಗೌಡರು ಎದ್ದು ನಿಲ್ಲುತ್ತಿದ್ದ ದಿನಗಳು ಇವೆ. ಇಡೀ ತಾಲೂಕಿನಲ್ಲಿ ಸಮುದಾಯ ಭವನಗಳ ನಿರ್ಮಾಣ ದೇವೇಗೌಡರ ಮಾರ್ಗದರ್ಶನದಲ್ಲೇ ನಡೆದಿದೆ. ಸ್ವಶಕ್ತಿಯಿಂದ ಏನೂ ಮಾಡದವರು ಇಂದು ಶಾಸಕ ಆಗಿದ್ದಾರೆ ಎಂದು ಟಾಂಗ್ ನೀಡಿದರು.
66
ಜೆಡಿಎಸ್‌ಗೆ ನೀವು ಅನಿವಾರ್ಯ ಅಲ್ಲ
ಜವರೇಗೌಡರ ಮಾತಿಗೆ ಗೌರವ ನೀಡಿ ದೇವೇಗೌಡರು ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ 1000 ಮತಗಳ ಅಂತರದಲ್ಲಿದ್ದರೂ ಜೆಡಿಎಸ್‌ಗೆ ನೀವು ಅನಿವಾರ್ಯ ಅಲ್ಲ. ನಿಮಗೆ ಜೆಡಿಎಸ್ ಅನಿವಾರ್ಯ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.