ವಿಧಾನ ಪರಿಷತ್ (ಫೆ.20): ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಮುಂದಿನ ಆರೆಂಟು ತಿಂಗಳಲ್ಲಿ ಎಲ್ಲ ಬಗೆಯ ಔಷಧಿ ಲಭ್ಯವಿರುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬಿಜೆಪಿಯ ಎಚ್.ಎಸ್. ಗೋಪಿನಾಥ್ ಅವರ ಪ್ರಶ್ನೆಗೆ ಡಿ.ಎಸ್. ಅರುಣ್ ಅವರು ಕೇಳಿದ ಉಪಪ್ರಶ್ನೆಗೆ ಉತ್ತರಿಸಿದ ಸಚಿವರು, ಸರ್ಕಾರಿ ಆಸ್ಪತ್ರೆಗಳಿಗೆ 732 ಬಗೆಯ ಔಷಧಿಗಳನ್ನು ರಾಜ್ಯ ವೈದ್ಯಕೀಯ ಸರಬರಾಜು ನಿಗಮದಿಂದ ಪೂರೈಕೆ ಮಾಡಬೇಕು. 410 ಔಷಧಗಳು ಅಗತ್ಯವಿದ್ದರೆ, ಉಳಿದವು ಅಪೇಕ್ಷಣಿಯ ಔಷಧಿಗಳಾಗಿವೆ.