ಹೃದಯಾಘಾತಕ್ಕೆ WWE ದಿಗ್ಗಜ ರಸ್ಲರ್ ಹಲ್ಕ್ ಹೋಗಾನ್ ನಿಧನ, ಫ್ಯಾನ್ಸ್‌ಗೆ ಆಘಾತ

Published : Jul 24, 2025, 10:08 PM ISTUpdated : Jul 24, 2025, 10:10 PM IST

WWE ಫಾಲೋ ಮಾಡುವ ಎಲ್ಲರಿಗೂ ಹಲ್ಕ್ ಹೋಗಾನ್ ಗೊತ್ತೇ ಇದೆ. ಅತ್ಯಂತ ಜನಪ್ರಿಯ ರಸ್ಲರ್ ಹಲ್ಕ್ ಹೋಗಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದೆ.

PREV
15

ರಸ್ಲಿಂಗ್ ದಿಗ್ಗಜ ಹಲ್ಕ್ ಹೋಗಾನ್ ಹೃದಯಾಘಾತಕ್ಕೆ ಬಲಿಯಾಗಿರುವುದಾಗಿ ವರದಿಯಾಗಿದೆ. ಫ್ಲೋರಿಡಾದಲ್ಲಿರು ತಮ್ಮ ನಿವಾಸದಲ್ಲಿರುವಾಗ WWE ದಿಗ್ಗದ ಹಲ್ಕ್ ಹೋಗಾನ್‌ಗೆ ಹೃದಯಾಘಾತವಾಗಿದೆ. ತಕ್ಷಣವೇ ಸ್ಥಳೀಯ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡುವ ಪ್ರಯತ್ನಗಳು ನಡೆದಿದೆ. ಆದರೆ ತೀವ್ರ ಹೃದಯಾಘಾತದಿಂದ 71 ವರ್ಷದ ಹಲ್ಕ್ ಹೋಗಾನ್ ನಿಧನರಾಗಿರುವುದಾಗಿ TMZ ಸ್ಪೋರ್ಟ್ಸ್ ವರದಿ ಮಾಡಿದೆ.

25

ಎದೆನೋವಿನಿಂದ ಬಳಲಿ ಕುಸಿದು ಬಿದ್ದ ಹಲ್ಕ್ ಹೋಗಾನ್

ಎದೆನೋವಿನಿಂದ ಬಳಲಿದ ಹಲ್ಕೋ ಹೋಗಾನ್ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಹಲ್ಕ್ ಹೋಗಾನ್ ಮನೆ ಸಿಬ್ಬಂದಿಗಳು, ಕುಟುಂಬಸ್ಥರು ಸ್ಟ್ರೆಚರ್ ಮೂಲಕ ಹಲ್ಕ್ ಹೋಗನ್ ಎತ್ತಿ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಆಸ್ಪತ್ರೆ ದಾಖಲಿಸುವ ಮೊದಲೇ ಹಲ್ಕ್ ಹೋಗಾನ್ ಮೃತಪಟ್ಟಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

35

ಹಾರ್ಟ್ ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದ ಹಲ್ಕ್ ಹೋಗಾನ್

ಹಲ್ಕ್ ಹೋಗಾನ್ ಕಳೆ ವಾರಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಹೃದಯ ಸಮಸ್ಯೆಯಿಂದ ವೈದ್ಯರು ಯಶಸ್ವಿಯಾಗಿ ಹಾರ್ಟ್ ಸರ್ಜರಿ ಮಾಡಿದ್ದರು. ಈ ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದ ಹಲ್ಕ್ ಹೋಗನ್, ಇದೀಗ ಮತ್ತೆ ಹೃದಾಘಾತಕ್ಕೆ ಬಲಿಯಾಗಿದ್ದಾರೆ. ಹಾರ್ಟ್ ಸರ್ಜರಿ ಬಳಿಕ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದ ಹಲ್ಕ್ ಹೋಗಾನ್, ಶೀಘ್ರವೇ ಬಹಿರಂಗವಾಗಿ ಕಾಣಿಸಿಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

45

ಕಳೆದ ವಾರ ಸ್ಪಷ್ಟನೆ ನೀಡಿದ್ದ ಹಲ್ಕ್ ಪತ್ನಿ ಸ್ಕೈ ಡೈಲಿ

ಹಲ್ಕ್ ಹೋಗಾನ್ ಕೆಲ ವಾರಗಳ ಹಿಂದೆ ಹಾರ್ಟ ಸರ್ಜರಿಗೆ ಒಳಪಟ್ಟಿದ್ದರು. ಈ ವೇಳೆ ಹಲ್ಕ್ ಹೋಗಾನ್ ಕೋಮಾದಲ್ಲಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಈ ವೇಳೆ ಹಲ್ಕ್ ಹೋಗಾನ್ ಪತ್ನಿ ಸ್ಕೈ ಡೈಲಿ ಸ್ಪಷ್ಟನೆ ನೀಡಿದ್ದರು. ಹಲ್ಕ್ ಹೋಗಾನ್ ಇತ್ತೀಚೆಗೆ ನಡೆದ ಸರ್ಜರಿಯಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹಲ್ಕ್ ಹೋಗಾನ್ ಓರ್ವ ಫೈಟರ್, ಅವರು ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಲ್ಲುತ್ತಾರೆ ಎಂದಿದ್ದರು.

55

ಹಲ್ಕ್ ಹೋಗಾನ್ ರಿಯಲ್ ಹೆಸರು ಟೆರ್ರಿ ಬೊಲೆಯಾ

ಹಲ್ಕ್ ಹೋಗಾನ್ 80-90ರ ದಶಕದಲ್ಲಿ WWE ರಸ್ಲಿಂಗ್ ರಿಂಗ್‌ನಲ್ಲಿ ಅಬ್ಬರಿಸಿದ ದಿಗ್ಗಜ. ತನ್ನ ವಿಶಿಷ್ಠ ಶೈಲಿ, ಕಟ್ಟು ಮಸ್ತಾದ ದೇಹ, ಅತ್ಯುತ್ತಮ ಫೈಟಿಂಗ್ ಸ್ಪಿರಿಟ್‌ನೊಂದಿಗೆ WWEನಲ್ಲಿ ಅಬ್ಬರಿಸಿದ್ದರು. ಹಲ್ಗ್ ಹೋಗಾನ್ ಹೆಸರು WWE ರಸ್ಲಿಂಗ್ ರಿಂಗ್ ಮೂಲಕವೇ ಭಾರಿ ಜನಪ್ರಿಯತೆ ಪಡೆದಿತ್ತು. ಆದರೆ ಹಲ್ಕ್ ಹೋಗಾನ್ ರಿಯಲ್ ಹೆಸರು ಟೆರ್ರಿ ಬೊಲೆಯಾ. ರಸ್ಲಿಂಗ್‌ಗಾಗಿ ಹಲ್ಕ್ ಹೋಗಾನ್ ಎಂದು ಬದಲಾಯಿಸಿಕೊಂಡಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories