ಭಾರತದ ಶಟ್ಲರ್ ಪಿವಿ ಸಿಂಧು, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಈ ಮೂಲಕ ಒಲಿಂಪಿಕ್ಸ್ ನಲ್ಲಿ ಎರಡು ಪದಕಗಳನ್ನು ಗೆದ್ದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಕಳೆದ ಬಾರಿ ಸಿಂಧು ಬೆಳ್ಳಿ ಗೆಲ್ಲುವ ಸಾಧನೆ ಮಾಡಿದ್ದರು. ಸಿಂಧು ತನ್ನ ಕ್ರೀಡೆಗೆ ಮಾತ್ರವಲ್ಲದೆ ಆಕೆಯ ಲೈಫ್‌ಸ್ಟೈಲ್‌ಗೂ ಫೇಮಸ್. ಇಲ್ಲಿದೆ ಅವರ ಕೆಲವು ಸ್ಟೈಲಿಸ್ಟ್ ಲುಕ್‌ನ ಫೋಟೋಗಳು.
ಭಾರತದ ಯೂತ್ ಐಕಾನ್ ಪಿ.ವಿ. ಸಿಂಧು ತಮ್ಮ ಸಾಧನೆಗಳ ಮೂಲಕ ದೇಶಕ್ಕೆ ಕೀರ್ತಿ ತರುವುದರ ಜೊತೆಗೆ ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ.
210
ಒಲಿಂಪಿಕ್ ಪದಕ ಗೆದ್ದ ನಂತರ ಭಾರತಕ್ಕೆ ಮರಳಿದ ಪಿವಿ ಸಿಂಧು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಅವರು ತುಂಬಾ ಸ್ಟೈಲಿಶ್ ಮತ್ತು ಆತ್ಮವಿಶ್ವಾಸದಿಂದ ಕಾಣುತ್ತಿದ್ದರು.
310
ಪತ್ರಿಕಾಗೋಷ್ಠಿಗಾಗಿ, ಪ್ಯಾಂಟ್ ಸೂಟ್ ಧರಿಸಿದ್ದರು. ಈ ಸಮಯದಲ್ಲಿ, ಸಿಂಧು ಬೇಜ್ ಲಕರ್ ಪ್ಯಾಂಟ್ ಅನ್ನು ಮೆಲಿಸ್ಸಾ ಬ್ರಾಂಡ್ ಚೆಕ್ಸ್ ಬ್ಲೇಜರ್ ಮತ್ತು ವೈಟ್ ಓಪನ್-ಟೋ ಹೀಲ್ಸ್ ಜೊತೆ ಪೇರ್ ಮಾಡಿದ್ದರು.
410
ಟೋಕಿಯೊಗೆ ಹೋಗುವ ಮೊದಲು ಪಿ ವಿ ಸಿಂಧು ಅವರ ವಿಶೇಷ ನೇಲ್ ಪೇಯಿಂಟ್ ಸಾಕಷ್ಟು ಸುದ್ದಿ ಮಾಡಿತ್ತು.
510
ಸಿಂಧು ಫ್ಯಾಷನಿಸ್ಟಾ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಕೆಂಪು ಬಣ್ಣದ ಗೌನ್‌ನಲ್ಲಿ ಅವರು ಯಾವುದೇ ನಟಿಗಿಂತ ಕಡಿಮೆ ಇಲ್ಲ.
610
ಸುಂದರವಾದ ಸೀಕ್ವೆನ್ಡ್ ಗೌನ್‌ನಲ್ಲಿ ಭಾರತದ ಒಲಿಂಪಿಕ್ಸ್ ಹುಡುಗಿ.
710
ಪಿವಿ ಸಿಂಧು ತಮ್ಮ ಆಟದ ಜೊತೆಗೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.
810
ಆಕೆ ತನ್ನ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಅನೇಕ ಫೋಟೋಗಳನ್ನು ಆಗಾಗ ಹಂಚಿಕೊಂಡಿದ್ದಾಳೆ.
910
ಭಾರತೀಯ ಬ್ಯಾಡ್ಮಿಂಟನ್ ತಂಡದ ಜರ್ಸಿ ಅಥವಾ ಸೀರೆಯಾಗಲಿ, ಸಿಂಧುವಿನ ಪ್ರತಿಯೊಂದು ಸ್ಟೈಲ್ ವಿಶಿಷ್ಟವಾಗಿದೆ.