ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಸಿಕ್ಕಿದ ಬಹುಮಾನ ಮೊತ್ತವೆಷ್ಟು?

First Published | Aug 29, 2023, 1:10 PM IST

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ ಜಾವಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ ಇತಿಹಾಸ ರಚಿಸಿದ್ದಾರೆ. ಚಿನ್ನ ಗೆಲ್ಲುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ. ಚಿನ್ನ ಗೆದ್ದು ಸಂಭ್ರಮಿಸಿದ ನೀರಜ್ ಚೋಪ್ರಾ ಗೆದ್ದ ಬಹುಮಾನ ಮೊತ್ತವೆಷ್ಟು?
 

ಜಾವಲಿನ್ ಥ್ರೋ ವಿಭಾಗದಲ್ಲಿ ಸಂಚಲನ ಮೂಡಿಸುತ್ತಿರುವ ನೀರಜ್ ಚೋಪ್ರಾ ಹೊಸ ವಿಶ್ವದಾಖಲೆ ಬರೆದಿದ್ದಾರೆ. ವಿಶ್ವ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಮೈಲಿಗಲ್ಲು ನಿರ್ಮಿಸಿದ್ದಾರೆ. 

ಚಿನ್ನ ಗೆದ್ದ ನೀರಜ್ ಚೋಪ್ರಾ ವಿಶ್ವ ಆಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಕಡೆಯಿಂದ $70000 ಬಹುಮಾನ ಮೊತ್ತ ಪಡೆದಿದ್ದಾರೆ. ಭಾರತೀಯ ರೂಪಾಯಿಗಳಲ್ಲಿ 58 ಲಕ್ಷ ರೂಪಾಯಿ ಬಹುಮಾನವಮಾಗಿ ನೀರಜ್ ಪಡೆದಿದ್ದಾರೆ.

Tap to resize

ಚಿನ್ನದ ಸಾಧನೆ ಮಾಡಿರುವ ನೀರಜ್ ಚೋಪ್ರಾಗೆ ಭಾರತ ಕ್ರೀಡಾ ಇಲಾಖೆ, ಹರ್ಯಾಣ ಸರ್ಕಾರ ಸೇರಿದಂತೆ ಇತರ ಸರ್ಕಾರಗಳು ಶೀಘ್ರದಲ್ಲೇ ಬಹುಮಾನ ಮೊತ್ತ ಘೋಷಿಸುವ ಸಾಧ್ಯತೆ ಇದೆ.

ನೀರಜ್ ಚೋಪ್ರಾಗೆ ತೀವ್ರ ಪ್ರತಿಸ್ಪರ್ಧೆ ನೀಡಿದ್ದ ಪಾಕಿಸ್ತಾನದ ಅರ್ಶದ್ ನದೀಮ್ ಬೆಳ್ಳಿ ಪದಕದ ಸಾಧನೆ ಮಾಡಿದ್ದಾರೆ. ಅರ್ಶದ್ ನದೀಮ್ 29 ಲಕ್ಷ ರೂಪಾಯಿ ಬಹುಮಾನ ಮೊತ್ತ ಪಡೆದಿದ್ದಾರೆ.

ಮೂರನೇ ಸ್ಥಾನ ಅಲಂಕರಿಸುವ ಮೂಲಕ ಕಂಚಿನ ಪದಕ ಗೆದ್ದ ಜೆಕ್ ಗಣರಾಜ್ಯದ ಜಾಕೂಬ್ ವಡೆಲ್ಜ್ 18 ಲಕ್ಷ ರೂಪಾಯಿ ಬಹಮಾನ ಮೊತ್ತ ಪಡೆದಿದ್ದಾರೆ.

ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ 88.17 ಮೀ. ದೂರಕ್ಕೆ ಜಾವೆಲಿನ್‌ ಎಸೆದ ನೀರಜ್ ಜೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಗೆಲುವಿನ ಬಳಿಕ ನೀರಜ್ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.

ರಾಷ್ಟ್ರ ಧ್ವಜ ಹಿಡಿದು ನೀರಜ್ ಬಳಿ ಆಟೋಗ್ರಾಫ್ ಕೇಳಿದ ಹಂಗೇರಿಯಾದ ಅಭಿಮಾನಿಗೆ ನೀರಜ್ ನೀಡಿದ ಉತ್ತರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ರಾಷ್ಟ್ರ ಧ್ವಜದ ಮೇಲೆ ಸಹಿ ಹಾಕುವುದಿಲ್ಲ ಎಂದ ನೀರಜ್, ಮಹಿಳಾ ಅಭಿಮಾನಿಯ ಟಿ ಶರ್ಟ್ ಮೇಲೆ ಸಹಿ ಹಾಕಿದ್ದರು.

ಇನ್ನು ಚಿನ್ನ ಗೆದ್ದ ಬಳಿಕ ಪಾಕಿಸ್ತಾನದ ಅರ್ಶದ್ ನದೀಮ್ ಕರೆದು ಪಕ್ಕಕ್ಕೆ ನಿಲ್ಲಿಸಿ ಫೋಟೋಗೆ ಪೋಸ್ ನೀಡಿದ್ದರು. ತ್ರಿವರ್ಣ ಧ್ವಜದ ಪಕ್ಕದಲ್ಲೆ ನದೀಮ್ ಫೋಟೋಗೆ ಪೋಸ್ ನೀಡಿದ್ದರು.

Latest Videos

click me!