ಒಲಂಪಿಕ್ ವಿಜೇತರು ಗೆದ್ದ ಪದಕವನ್ನು ಕಚ್ಚೋದ್ಯಾಕೆ?

First Published Jul 4, 2024, 3:50 PM IST

ಒಲಂಪಿಕ್ ಕ್ರೀಡಾಕೂಟಗಳಲ್ಲಿ ಅಥ್ಲೀಟ್‌ಗಳು ಗೆದ್ದ ನಂತರ  ವಿಜೇತ ಪದಕಗಳನ್ನು ಕಚ್ಚುವುದನ್ನು ನಾವು ನೋಡಿದ್ದೇವೆ. ಈ ಅಭ್ಯಾಸಕ್ಕೆ ಅದರದೇ ಆದ ಒಂದು ಕಾರಣವಿದೆ, ಸುದೀರ್ಘ ಇತಿಹಾಸವನ್ನೂ ಹೊಂದಿದೆ. ಒಲಂಪಿಕ್ ವಿಜೇತರು ಪದಕ ಕಚ್ಚುವುದರ ಹಿಂದಿರುವ ಕೂತುಹಲಕಾರಿ ಅಂಶ ಏನು ಗೊತ್ತಾ? 

 ಒಲಿಂಪಿಕ್‌ ಕ್ರೀಡಾಕೂಟದಲ್ಲಿ  ವಿಜೇತರು ಗೆದ್ದ ನಂತರ ಪದಕಗಳನ್ನು ಹೇಗೆ ಕಚ್ಚುತ್ತಾರೆ ಎಂಬುದನ್ನು ನಾವೆಲ್ಲರೂ ನೋಡಿದ್ದೇವೆ. 

ಅದರ ಹಿಂದಿನ ಕಾರಣವೆಂದರೆ ಪದಕವು ನಿಜವಾದ ಚಿನ್ನವಾಗಿದೆಯೇ ಅಥವಾ ಇಲ್ಲವೇ ಎಂದು  ವಿಜೇತರು ಪರಿಶೀಲಿಸುವುದು ಎಂದು ಹೇಳಲಾಗುತ್ತದೆ.. 

Latest Videos


ಹೀಗೆ  ವಿಜೇತರು ಗೆದ್ದ ನಂತರ ಪದಕಗಳನ್ನ ಕಚ್ಚುವ ಅಭ್ಯಾಸಕ್ಕೆ ಸುಮಾರು 100 ವರ್ಷಗಳ ಹಿಂದಿನ ಇತಿಹಾಸವಿದೆ.  ಹಿಂದೆ ಒಲಿಂಪಿಕ್ ಇತಿಹಾಸಕಾರರಿಗೆ  ಪದಕ ಚಿನ್ನದ್ದು ಖಚಿತವಾಗದಿದ್ದಾಗ ಈ ಪದ್ಧತಿಯು  ಪ್ರಾರಂಭವಾಯಿತಂತೆ.

ಅವರ ಪ್ರಕಾರ ನಾಣ್ಯದ ಮೇಲೆ ಸಣ್ಣ ಹಲ್ಲಿನ ಗುರುತು ಬಿದ್ದರೆ ಅವರು ಗೆದ್ದ ಪದಕ ನಿಜವಾದ ಚಿನ್ನದಿಂದ ಮಾಡಲ್ಪಟ್ಟಿದೆ ಎಂದು ಸೂಚಿಸುತ್ತದೆ. 
 

ನಿಜವಾದ ಚಿನ್ನದ ಪದಕ ನಕಲಿ ಚಿನ್ನದ ಲೇಪಿತ ಸೀಸದ ನಾಣ್ಯಗಳಿಗಿಂತ ಹೆಚ್ಚು ಮೆದುವಾಗಿರುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಆದರೆ ಇಂದಿಗೂ ಗೆದ್ದಾಗ ಪದಕ ಕಚ್ಚುವ ಪದ್ಧತಿ ಮುಂದುವರಿಯುತ್ತಿದೆ. ಏಕೆಂದರೆ ಈಗ ವಿಜೇತರು ಅದನ್ನು ಸಂಪ್ರದಾಯದ ಗೌರವಕ್ಕಾಗಿ ಮಾಡುತ್ತಾರೆ.

click me!