ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೂಡಾ #SareeTwitter ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ಪ್ರಿಯಾಂಕಾ ಗಾಂಧಿ ಪೋಸ್ಟ್ ಮಾಡಿರುವ ತಮ್ಮ 22 ವರ್ಷ ಹಳೆಯ ಫೋಟೋ ಸದ್ಯ ಭಾರೀ ವೈರಲ್ ಆಗುತ್ತಿದೆ. ಪ್ರಿಯಾಂಕಾ ಗಾಂಧಿ ಮಾತ್ರವಲ್ಲದೇ ಅನೇಕ ರಾಜಕೀಯ ನಾಯಕಿಯರು ಹಾಗೂ ಸಿನಿ ತಾರೆಯರು ಸೀರೆಯುಟ್ಟುಕೊಂಡಿರುವ ತಮ್ಮ ಫೋಟೋ ಪೋಸ್ಟ್ ಮಾಡಿ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ವಿಶ್ವದಾದ್ಯಂತ ಈ ಅಭಿಯಾನ ಟ್ರೆಂಡ್ ಆಗುತ್ತಿದ್ದು, ವಿದೇಶಿಗರೂ ಇದರಲ್ಲಿ ಕೈಜೋಡಿಸಿ ಭಾರತದ ಸಂಸ್ಕೃತಿಗೆ ತಲೆಬಾಗಿದ್ದಾರೆ.